ETV Bharat / bharat

ರೈತರು ಕಣ್ಣೀರು ಹಾಕಿದಾಗಲೆಲ್ಲ ಸರ್ಕಾರ ಉರುಳಿದ ಇತಿಹಾಸವಿದೆ: ಮೋದಿಗೆ ಕೆಸಿಆರ್‌ ಎಚ್ಚರಿಕೆ - ತೆಲಂಗಾಣ ಸಿಎಂ ಕೆಸಿಆರ್​

ಕನಿಷ್ಠ ಬೆಂಬಲ ಬೆಲೆ ನೀಡಿ ರಾಜ್ಯದ 15 ಲಕ್ಷ ಟನ್‌ ಅಕ್ಕಿ ಖರೀದಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಟಿಆರ್​​ಎಸ್​ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಮಾತನಾಡಿರುವ ಮುಖ್ಯಮಂತ್ರಿ ಕೆಸಿಆರ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Telangana CM KCR at dharna in Delhi
Telangana CM KCR at dharna in Delhi
author img

By

Published : Apr 11, 2022, 3:11 PM IST

ನವದೆಹಲಿ/ಹೈದರಾಬಾದ್: ಭತ್ತ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​​ ಪ್ರತಿಭಟನೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭತ್ತ ಬೆಳೆಯುವುದು ತೆಲಂಗಾಣ ರೈತರ ತಪ್ಪೇ? ಎಂದು ಪ್ರಶ್ನಿಸಿರುವಅವರು, ಅನ್ನದಾತರೊಂದಿಗೆ ಚೆಲ್ಲಾಟವಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ರೈತರು ಕಣ್ಣೀರು ಹಾಕಿದಾಗಲೆಲ್ಲ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ ಎಂಬುದಕ್ಕೆ ಈ ಹಿಂದಿನ ಇತಿಹಾಸ ಸಾಕ್ಷಿ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ರೈತರಿಗೆ ಅನ್ಯಾಯ ಮಾಡಬೇಡಿ ಎಂದಿರುವ ಕೆಸಿಆರ್, ನಿಮಗೆ ಮುಂದಿನ 24 ಗಂಟೆಗಳ ಕಾಲ ಸಮಯಾವಕಾಶ ನೀಡುತ್ತೇವೆ ಎಂದರು.

  • #WATCH | Is growing paddy Telangana farmers' fault?...I warn PM Modi that you can't mess with farmers. Indian history is a testament that wherever farmers cried, govt loses power.Nobody is permanent...When in power,don't treat farmers unfairly: Telangana CM KCR at dharna, Delhi pic.twitter.com/uqCzSdG3Bl

    — ANI (@ANI) April 11, 2022 " class="align-text-top noRightClick twitterSection" data=" ">

ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ. ಆದರೆ, ನಾನು ಪ್ರಧಾನಿ ಮತ್ತು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್​ ಅವರ ಬಳಿ ಕೈಮುಗಿದು ಕೇಳಿಕೊಳ್ಳುತ್ತೇನೆ, ದಯವಿಟ್ಟು ನಮ್ಮ ಆಹಾರ ಧಾನ್ಯ ಖರೀದಿ ಮಾಡಿ. ಅದಕ್ಕಾಗಿ ಮುಂದಿನ 24 ಗಂಟೆಗಳ ಕಾಲ ಸಮಯಾವಕಾಶ ನೀಡುತ್ತೇನೆ. ಇದಾದ ಬಳಿಕ ನಮ್ಮ ನಿರ್ಧಾರ ನಾವು ಕೈಗೊಳ್ಳುತ್ತೇವೆ ಎಂದು ಹೇಳಿದರು. ಸರ್ಕಾರವನ್ನು ಉರುಳಿಸುವ ಶಕ್ತಿ ಇರುವ ರೈತರ ಭಾವನೆಗಳೊಂದಿಗೆ ಆಟವಾಡಬೇಡಿ. ಅವರು ಭಿಕ್ಷುಕರಲ್ಲ ಎಂದರು.

ಇದನ್ನೂ ಓದಿ: ಅಕ್ಕಿ ಖರೀದಿ ವಿಚಾರ: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ನೇತೃತ್ವದಲ್ಲಿ ಟಿಆರ್‌ಎಸ್‌ ನಾಯಕರ ಪ್ರತಿಭಟನೆ

ತೆಲಂಗಾಣ ಮುಖ್ಯಮಂತ್ರಿ ನೇತೃತ್ವದಲ್ಲಿ ಟಿಆರ್​ಎಸ್​​ ನಾಯಕರು ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸಿದ್ದು, ರೈತರ ಅಕ್ಕಿ ಖರೀದಿಗೆ ಒತ್ತಡ ಹಾಕುತ್ತಿದೆ. 2014ರಲ್ಲಿ ತೆಲಂಗಾಣದಲ್ಲಿ ಟಿಆರ್​​​ಎಸ್​​​ ಅಧಿಕಾರಕ್ಕೆ ಬಂದ ಬಳಿಕ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಪ್ರತಿಭಟನಾ ಸಭೆ ಇದಾಗಿದೆ. ಪಕ್ಷದ ಸಂಸದರು, ಶಾಸಕರು, ಕ್ಯಾಬಿನೆಟ್​ ಸಚಿವರು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.