ETV Bharat / bharat

ತೆಲಂಗಾಣದಲ್ಲೂ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ವ್ಯಾಕ್ಸಿನ್​.. ಕರ್ನಾಟಕದಲ್ಲಿ!? - ತೆಲಂಗಾಣದಲ್ಲಿ ಉಚಿತ ಕೋವಿಡ್ ಲಸಿಕೆ

ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದರ ಮಧ್ಯೆ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಕೇಂದ್ರ ಅನುಮತಿ ನೀಡಿದೆ. ಹೀಗಾಗಿ ಕೆಲವೊಂದು ರಾಜ್ಯಗಳು ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡ್ತಿವೆ.

CM KCR
CM KCR
author img

By

Published : Apr 24, 2021, 6:04 PM IST

ಹೈದರಾಬಾದ್​: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದೆ. ಇದರ ಮಧ್ಯೆ ಮೇ. 1ರಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರೂ ಕೊರೊನಾ ವ್ಯಾಕ್ಸಿನ್​ ಪಡೆದುಕೊಳ್ಳಲು ಅರ್ಹರು ಎಂಬ ಘೋಷಣೆ ಈಗಾಗಲೇ ಕೇಂದ್ರದಿಂದ ಹೊರಬಿದ್ದಿದೆ.

18 ವರ್ಷ ಮೇಲ್ಪಟ್ಟವರು ಕೋವಿಡ್​ ವ್ಯಾಕ್ಸಿನ್​ ಪಡೆದುಕೊಳ್ಳಲು ಕೇಂದ್ರ ಸರ್ಕಾರ ದರ ನಿಗದಿ ಮಾಡಿದೆ. ಆದರೆ, ಇದರ ಮಧ್ಯೆ ಅನೇಕ ರಾಜ್ಯಗಳು ತಮ್ಮ ರಾಜ್ಯದ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡುವುದಾಗಿ ಘೋಷಣೆ ಮಾಡ್ತಿದ್ದು, ಆ ಸಾಲಿಗೆ ಇದೀಗ ತೆಲಂಗಾಣ ಸಹ ಸೇರ್ಪಡೆಯಾಗಿದೆ.

ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸೋಂ, ಛತ್ತೀಸ್​​​ಗ​ಢ, ಕೇರಳ, ಜಾರ್ಖಂಡ್​ ಉಚಿತವಾಗಿ ಕೊರೊನಾ ವ್ಯಾಕ್ಸಿನ್​ ನೀಡುವುದಾಗಿ ಹೇಳಿಕೊಂಡಿದೆ. ಬೇರೆ ರಾಜ್ಯಗಳಿಂದ ತೆಲಂಗಾಣಕ್ಕೆ ಬಂದು ಕೆಲಸ ಮಾಡುವವರು ಈ ಲಸಿಕೆ ಪಡೆದುಕೊಳ್ಳಲು ಅರ್ಹರು ಎಂದು ಕೆಸಿಆರ್ ಘೋಷಣೆ ಮಾಡಿದ್ದಾರೆ. ಅದಕ್ಕಾಗಿ 2500 ಕೋಟಿ ರೂ. ಖರ್ಚು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜನರ ಪ್ರಾಣಕ್ಕಿಂತ ನಮಗೆ ಬೇರೆ ಯಾವುದು ಮಹತ್ವದ್ದಲ್ಲ. ಈಗಾಗಲೇ ರಾಜ್ಯದಲ್ಲಿ 35 ಲಕ್ಷ ಜನರಿಗೆ ವ್ಯಾಕ್ಸಿನ್​ ನೀಡಲಾಗಿದೆ ಎಂದಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಿಎಸ್​​ ಸೋಮೇಶ್​ ಕುಮಾರ್ ಎಲ್ಲ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಆದೇಶ ಪ್ರತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.