ವರಂಗಲ್ (ತೆಲಂಗಾಣ): ಹಿಂದಿ ಎಸ್‌ಎಸ್‌ಸಿ(ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್) ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿದ್ದ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರನ್ನು ಕರೀಂ ನಗರ ಜಿಲ್ಲಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಳಿಕ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು
ಸಂಜಯ್ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ ಎಂದು ಬಂಡಿ ಸಂಜಯ್ ಪರ ವಕೀಲ ಶ್ಯಾಮ್ ಸುಂದರ್ ರೆಡ್ಡಿ ತಿಳಿಸಿದ್ದಾರೆ. "ಕೋರ್ಟ್ ನಮ್ಮ ಮನವಿ ಸ್ವೀಕರಿಸಿ ಬಂಡಿ ಸಂಜಯ್‌ಗೆ ಜಾಮೀನು ನೀಡಿದೆ. 20 ಸಾವಿರ ರೂ. ಶ್ಯೂರಿಟಿ ಒದಗಿಸಿದ ನಂತರ ಇಂದು ಬೆಳಗ್ಗೆ ಅವರನ್ನು ಕರೀಂ ನಗರ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಜತೆಗೆ ಅನುಮತಿ ಇಲ್ಲದೇ ಭಾರತವನ್ನು ತೊರೆಯುವಂತಿಲ್ಲ ಎಂದು ನ್ಯಾಯಾಲಯವು ಷರತ್ತು ವಿಧಿಸಿದೆ" ಎಂದು ಅವರು ತಿಳಿಸಿದರು.
ಬುಧವಾರದಂದು ಎಸ್‌ಎಸ್‌ಸಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಡಿ ಸಂಜಯ್ ಮತ್ತು ಇತರ ಮೂವರನ್ನು ಏಪ್ರಿಲ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಗೆ ಮುನ್ನ ಬಂಡಿ ಸಂಜಯ್ ಕುಮಾರ್ ಅವರನ್ನು ಕರೀಂ ನಗರದಲ್ಲಿರುವ ಅವರ ನಿವಾಸದಿಂದ ಬುಧವಾರ (ಏ.5) ಮಧ್ಯರಾತ್ರಿ ಬಂಧಿಸಲಾಗಿತ್ತು.
-
Telangana BJP president & MP Bandi Sanjay offers prayers at a temple after being released on bail from Karimnagar district jail in the SSC paper leak case pic.twitter.com/Xd6f8IcmzU
— ANI (@ANI) April 7, 2023 " class="align-text-top noRightClick twitterSection" data="
">Telangana BJP president & MP Bandi Sanjay offers prayers at a temple after being released on bail from Karimnagar district jail in the SSC paper leak case pic.twitter.com/Xd6f8IcmzU
— ANI (@ANI) April 7, 2023Telangana BJP president & MP Bandi Sanjay offers prayers at a temple after being released on bail from Karimnagar district jail in the SSC paper leak case pic.twitter.com/Xd6f8IcmzU
— ANI (@ANI) April 7, 2023
ವರದಿಯ ಪ್ರಕಾರ "ಪೊಲೀಸರ ತಂಡ ಕರೀಂ ನಗರದಲ್ಲಿರುವ ನಿವಾಸಕ್ಕೆ ತಲುಪಿದಾಗ ಸಂಜಯ್ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಪೊಲೀಸರನ್ನು ತಡೆಯಲು ಪ್ರಯತ್ನಿಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಮೊದಲು ಪೊಲೀಸರು ಬಿಜೆಪಿ ಮುಖಂಡ ಬಂಡಿ ಸಂಜಯ್ ಕುಮಾರ್ ವಿರುದ್ಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಒತ್ತಡ, ಮನವಿಗೆ ಪಠ್ಯ ಪರಿಷ್ಕರಣೆ ಮಾಡಿಲ್ಲ: ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್
ಬಂಧನದ ಕುರಿತು ಪ್ರತಿಕ್ರಿಯಿಸಿದ ಬಂಡಿ ಸಂಜಯ್ ಕುಮಾರ್ ಅವರ ಕಚೇರಿ "ಎಸ್‌ಎಸ್‌ಸಿ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಡಿ ಸಂಜಯ್ ಬಂಧನವಾಗಿದೆ. ಅವರ ಬಂಧನ "ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ರಾಜಕೀಯ ಪಿತೂರಿ" ಎಂದು ಆರೋಪಿಸಿದೆ. "ಸಂಜಯ್ ಕುಮಾರ್ ಅವರನ್ನು ಕರೀಂ ನಗರದಲ್ಲಿರುವ ಅವರ ನಿವಾಸದಿಂದ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಯಾವ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಬಿಆರ್‌ಎಸ್ ಸರ್ಕಾರ ಕ್ರಮೇಣ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಅವರು ಈ ಸಾಹಸಗಳನ್ನು ಮಾಡುತ್ತಿದೆ. ಪತ್ರಿಕೆ ಸೋರಿಕೆ ಬಿಆರ್‌ಎಸ್ ಸರ್ಕಾರದ ವೈಫಲ್ಯದಿಂದ ಹೊರಬಂದಿದೆ" ಎಂದು ಸಂಜಯ್ ಕುಮಾರ್ ಕಚೇರಿ ತಿಳಿಸಿದೆ.
"ಶಾಲೆ ಮತ್ತು ಉದ್ಯೋಗ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರದ ಇತ್ತೀಚಿನ ವೈಫಲ್ಯಗಳನ್ನು ಮುಚ್ಚಿಹಾಕಲು ಸಂಜಯ್ ಕುಮಾರ್ ಅವರನ್ನು ಬಂಧಿಸಲಾಗಿದೆ" ಎಂದು ಸಂಜಯ್ ಕುಮಾರ್ ಅವರ ಕಚೇರಿಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಎಸ್‌ಎಸ್‌ಸಿ ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಂಗಳವಾರ(ಏ.4) ರಂದು ವಾರಂಗಲ್‌ನಲ್ಲಿ ಪರೀಕ್ಷೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ.. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಜೈಲಿಗೆ.. 14 ದಿನ ನ್ಯಾಯಾಂಗ ಬಂಧನ