ETV Bharat / bharat

ವೈಯಕ್ತಿಕ ಸಾಲ ಕೊಡುವುದಾಗಿ ಪಂಗನಾಮ : ಹೈದರಾಬಾದ್​ನಲ್ಲಿ ಆರು ಮಂದಿ ಅರೆಸ್ಟ್​ - ಆನಿಯನ್​ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್

ಕ್ಯಾಶ್​ ಮಾಮಾ, ಲೋನ್​ ಝೋನ್​ ಮತ್ತು ಧನಾ ಧನ್ ಆ್ಯಪ್​ಗಳ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದ ಆರು ಮಂದಿ ಖದೀಮರನ್ನು ಸೈಬರಾಬಾದ್‌ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸೈಬರ್​ ಕ್ರೈಂ ಪ್ರಕರಣ
ಸೈಬರ್​ ಕ್ರೈಂ ಪ್ರಕರಣ
author img

By

Published : Dec 23, 2020, 7:38 AM IST

ಹೈದರಾಬಾದ್: ತ್ವರಿತ ವೈಯಕ್ತಿಕ ಸಾಲ ಆ್ಯಪ್‌ಗಳ ಮೂಲಕ ವಂಚನೆ ಮಾಡುತ್ತಿದ್ದ ಪ್ರಕರಣ ಭೇದಿಸಿದ ಸೈಬರಾಬಾದ್‌ ಸೈಬರ್ ಅಪರಾಧ ವಿಭಾಗದ ಪೊಲೀಸರು 6 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆ್ಯಪ್‌ಗಳನ್ನು ಕ್ಯಾಶ್​ ಮಾಮಾ, ಲೋನ್​ ಝೋನ್​ ಮತ್ತು ಧನಾಧನ್ ಎಂದು ಗುರುತಿಸಲಾಗಿದೆ.

ಕ್ಯಾಶ್​ ಮಾಮಾ, ಲೋನ್​ ಝೋನ್ ಆ್ಯಪ್​ಗಳು 9 ಬ್ಯಾಂಕೇತರ ಹಣಕಾಸು ಕಂಪನಿಗಳ ಜೊತೆ ಒಡನಾಟ ಹೊಂದಿದ್ದು, ಧನಾಧನ್​ಗೆ ಯಾವುದೇ ಕಂಪನಿಗಳ ಅನುಮೋದನೆ ಇರಲಿಲ್ಲ. ಕೊಕಪೇಟೆಯ ಆನಿಯನ್​ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ರೆಡಿಟ್ ಫಾಕ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ನಿರ್ದೇಶಕ ಕೊನಾತಹಮ್​ ಶರತ್​ ಚಂದ್ರ, ನಿರ್ದೇಶಕಿ ಪುಷ್ಪಲತಾ, ಬಿ.ವಾಸವ ಚೈತನ್ಯ, ಚಿಲ್ಕಗೂಡದ ಕಲೆಕ್ಷನ್​ ಏಜೆಂಟ್​ ಬಿ.ವೆಂಕಟೇಶ್​, ಶಿಲ್ಪರಾಮ​ನ್​ ಸಚಿನ್​ ದೇಶ್​ ಮುಖ್​, ಸಯ್ಯದ್​ ಆಶಿಕ್​ರನ್ನು ಪೊಲೀಸರು ಬಂಧಿಸಿದ್ದಾರೆ.

ಹಣಕಾಸಿನ ಅವಶ್ಯತೆ ಹಿನ್ನೆಲೆಯಲ್ಲಿ ಗೂಗಲ್ ಪ್ಲೇ ಸ್ಟೋರ್‌ ಮೂಲಕ ವ್ಯಕ್ತಿವೋರ್ವ ಜನವರಿ 8ರಂದು "ಕ್ಯಾಶ್ ಮಾಮಾ" ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಬಳಿಕ ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಫೋಟೋ, 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿಗಳನ್ನು ಅಪ್‌ಲೋಡ್ ಮಾಡಿದ್ದಾನೆ. ಅದರ ಆಧಾರದ ಮೇಲೆ 7 ದಿನಗಳ ಅವಧಿಗೆ 5,000 ರೂ. ಸಾಲವನ್ನು ಜಿಎಸ್‌ಟಿ ಮತ್ತು ಸಂಸ್ಕರಣಾ ಶುಲ್ಕಕ್ಕೆ 1,180 ರೂ.ಗಳನ್ನು ಕಡಿತಗೊಳಿಸಿ 3,820 ರೂ. ತನ್ನ ಎಸ್‌ಬಿಐ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ. ಅದೇ ರೀತಿ "ಕ್ಯಾಶ್ ಮಾಮಾ" ಮೂಲಕ 6 ಬಾರಿ ಸಾಲ ತೆಗೆದುಕೊಂಡಿದ್ದಾಗಿ ದೂರಿನಲ್ಲಿ ಆತ ತಿಳಿಸಿದ್ದಾನೆ.

ಇದನ್ನು ಓದಿ: ಪಂಜಾಬ್‌ನ ಹೆಮ್ಮೆ ಬಟಿಂಡಾದ ಐತಿಹಾಸಿಕ ಕಿಲಾ ಮುಬಾರಕ್

ಇದಾದ ಬಳಿಕ ಬೇರೆ ಬೇರೆ ಆ್ಯಪ್​ಗಳಿಂದ ಕರೆ ಬರತೊಡಗಿದ್ದು, ಸಾಲ ಸ್ವೀಕಾರ ಮಾಡುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಂಬಿಕೆಯಿಟ್ಟ ಆತ 30,000 ರೂ.ಗೆ ಸಾಲ ಪಡೆಯಲು ಅರ್ಜಿ ಹಾಕಿದ್ದಾನೆ. ಆದರೆ ಜನವರಿಯಿಂದ ಸೆಪ್ಟೆಂಬರ್​ ತಿಂಗಳೊಳಗೆ ಆತ ಸ್ವೀಕರಿಸಲು ಅನುಮತಿ ಇದ್ದದ್ದು ಕೇವಲ 20 ಸಾವಿರ ರೂ. ಮಾತ್ರ. ನಂತರ ಸೆ.12ರೊಳಗೆ ಆತ 29 ಸಾವಿರ ರೂ. ಸಾಲ ಮರುಪಾವತಿ ಮಾಡಿದ್ದಾನೆ. ಆದರೆ ಆ್ಯಪ್​ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿ ವಿವಿಧ ಆ್ಯಪ್‌ಗಳಿಗೆ ಒಟ್ಟು 8,634 ರೂ.ಗಳನ್ನು ಪಾವತಿಸುವಂತೆ ಹೇಳಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರ ಪ್ರಕಾರ, ಆ್ಯಪ್‌ಗಳು ತಮ್ಮ ಗ್ರಾಹಕರಿಗೆ ಬೆದರಿಕೆ ಹಾಕಲು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಹೆಸರಿನಲ್ಲಿ ನಕಲಿ ಕಾನೂನು ನೋಟಿಸ್‌ಗಳನ್ನು ಸಹ ಕಳುಹಿಸಿವೆ. ಐದು ದೂರುಗಳ ಆಧಾರದ ಮೇಲೆ ಐದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.