ETV Bharat / bharat

ಪಂಚಾಯತ್ ಚುನಾವಣೆಗೂ ಮುನ್ನ ರಾಜಾರೋಷವಾಗಿ ಜನರಿಗೆ ಹಣ ಹಂಚಿದ ಲಾಲೂ ಪುತ್ರ: ವಿಡಿಯೋ

ಜೆಡಿಯು ಪಕ್ಷದ ಪರಿಷತ್ ನಾಯಕ ನೀರಜ್ ಕುಮಾರ್ ಶುಕ್ರವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ 21 ಸೆಕೆಂಡುಗಳ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಇದರಲ್ಲಿ ತೇಜಸ್ವಿ ತನ್ನ ಕಾರಿನಲ್ಲಿ ಕುಳಿತಿದ್ದು, ಅವರ ಬಳಿ ಬಂದ ಮಹಿಳೆಯರಿಗೆ ಹಣವನ್ನು ಹಂಚಿದ್ದಾರೆ.

Tejashwi 'caught' distributing money to villagers ahead of polls
ಗ್ರಾಮಸ್ಥರಿಗೆ ಹಣ ಹಂಚುತ್ತಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿಡಿಯೋ ವೈರಲ್
author img

By

Published : Sep 10, 2021, 3:59 PM IST

ಪಾಟ್ನಾ(ಬಿಹಾರ): ಗ್ರಾಮ ಪಂಚಾಯಿತಿ ಚುನಾವಣೆಗೆ ಮುಂಚಿತವಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗ್ರಾಮಸ್ಥರಿಗೆ ಹಣ ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ.

ಜೆಡಿಯು ಎಂಎಲ್‌ಸಿ ನೀರಜ್ ಕುಮಾರ್ ಶುಕ್ರವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ 21 ಸೆಕೆಂಡುಗಳ ವಿಡಿಯೋ ಪೋಸ್ಟ್ ಮಾಡಿದ್ದು, ತೇಜಸ್ವಿ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಬಡ ಗ್ರಾಮಸ್ಥರ ಮಡಿಲಲ್ಲಿ ಹಣವನ್ನು ಹಾಕುತ್ತಿರುವ ಯುವರಾಜ ಲಾಲೂ ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್' ಎಂದು ಅವರು ಬರೆದುಕೊಂಡಿದ್ದಾರೆ.

  • पीछे से कोई कहता है, कि ये लाल उन्हीं का है.... जिन्होंने लिखवा ली थी उनकी ज़मीन
    बदले उसके चंद नोट के टुकड़े, आँचल में सबके डाल आया था...
    लालू के लाल से पूछो गरीबी का माखौल क्यों उड़ाया... वोट को नोट क्यों दिखलाया
    इंसानों की मज़बूरी का कुछ तो लिहाज़ कर लो...शर्म करलो बबुआ pic.twitter.com/xEYC6KaH8t

    — Neeraj kumar (@neerajkumarmlc) September 10, 2021 " class="align-text-top noRightClick twitterSection" data=" ">

ಮಹಿಳೆಯರಿಗೆ ತೇಜಸ್ವಿ ಹಣ ಹಂಚಿರುವ ವೈರಲ್​ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ, 'ಬಡವರಿಗೆ ಸಹಾಯ ಮಾಡುವುದರಲ್ಲಿ ತಪ್ಪೇನು?' ಎಂದು ಸಮಜಾಯಿಷಿ ಕೊಟ್ಟಿದೆ.

ಈ ವಿಡಿಯೋದಲ್ಲಿ ತೇಜಸ್ವಿ ತನ್ನ ಕಾರಿನಲ್ಲಿ ಕುಳಿತಿದ್ದು, ಅವರ ಬಳಿ ಬಂದ ಮಹಿಳೆಯರಿಗೆ ಹಣ ನೀಡಿದ್ದಾರೆ. ಗುರುವಾರ ಸಂಜೆ ಗೋಪಾಲಗಂಜ್‌ನಲ್ಲಿ ತೇಜಸ್ವಿ ಯಾದವ್​ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ವಿಡಿಯೋವನ್ನು ಜೆಡಿಯು ಎಂಎಲ್‌ಸಿ ನೀರಜ್ ಕುಮಾರ್ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಭವಾನಿಪುರ ಬೈ ಎಲೆಕ್ಷನ್: ಉಮೇದುವಾರಿಕೆ ಸಲ್ಲಿಕೆ ಮಾಡಿದ ಮಮತಾ ಬ್ಯಾನರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.