ಪಾಟ್ನಾ(ಬಿಹಾರ): ಬಿಹಾರ ಶಿಕ್ಷಕರ ಅರ್ಹತಾ ಪರೀಕ್ಷಾ ಫಲಿತಾಂಶದಲ್ಲಿನ ಗೊಂದಲ ಹಾಗೂ ವಿವಾದ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣ ಗೋಚರವಾಗುತ್ತಿಲ್ಲ. ಸದ್ಯ ಅಭ್ಯರ್ಥಿಯೊಬ್ಬನ ಫಲಿತಾಂಶದೊಂದಿಗೆ ದಕ್ಷಿಣ ಚಲನಚಿತ್ರ ನಟಿ ಅನುಪಮಾ ಪರಮೇಶ್ವರನ್ (Anupama Parmeshwaran) ಫೋಟೋ ಕಾಣಿಸಿಕೊಂಡಿದೆ.
ಎಸ್ಟಿಇಟಿ ಪರೀಕ್ಷೆ ಫಲಿತಾಂಶದ ಬಗ್ಗೆ ಈ ಹಿಂದಿನಿಂದಲೂ ಗೊಂದಲ ಕಾಣಿಸಿಕೊಂಡಿದ್ದು, ಇದರ ಮಧ್ಯೆ ನಟಿ ಫೋಟೋ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಟ್ವೀಟ್ ಮಾಡಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ಎಸ್ಟಿಇಟಿ ಪರೀಕ್ಷೆಯಲ್ಲಿ ಅಭ್ಯರ್ಥಿಯೋರ್ವನ ಫೋಟೋ ಬದಲಿಗೆ ನಟಿ ಫೋಟೋ ಬರುತ್ತಿದ್ದು, ಉಳಿದಂತೆ ಅಂಕಗಳೊಂದಿಗೆ ಅಭ್ಯರ್ಥಿ ಹೆಸರು ರಿಷಿ ಕುಮಾರ್ ಎಂದು ಬರೆಯಲಾಗಿದೆ. ಈತನನ್ನ ಪರೀಕ್ಷೆಯಲ್ಲಿ ಫೇಲ್ ಮಾಡಲಾಗಿದೆ.
ಇದನ್ನೂ ಓದಿರಿ: JIOPHONE NEXT... ಗಣೇಶ ಚತುರ್ಥಿ ದಿನ ಮಾರುಕಟ್ಟೆಗೆ ಲಗ್ಗೆ ಎಂದ ಅಂಬಾನಿ
ಸರ್ಕಾರದ ವಿರುದ್ಧ ತೇಜಸ್ವಿ ಆಕ್ರೋಶ
-
सनी लियोनी को बिहार की जूनियर इंजीनियर परीक्षा में टॉप कराने के बाद अब मलयालम अभिनेत्री अनुपमा परमेश्वरन को #STET परीक्षा पास करवा दी है।
— Tejashwi Yadav (@yadavtejashwi) June 24, 2021 " class="align-text-top noRightClick twitterSection" data="
नीतीश जी हर परीक्षा-बहाली में धाँधली करा करोड़ों युवाओं का जीवन बर्बाद कर रहे है। एक बहाली पूरा करने में एक दशक लगाते है वह भी धाँधली के साथ। https://t.co/1QJQ8ulqQ2
">सनी लियोनी को बिहार की जूनियर इंजीनियर परीक्षा में टॉप कराने के बाद अब मलयालम अभिनेत्री अनुपमा परमेश्वरन को #STET परीक्षा पास करवा दी है।
— Tejashwi Yadav (@yadavtejashwi) June 24, 2021
नीतीश जी हर परीक्षा-बहाली में धाँधली करा करोड़ों युवाओं का जीवन बर्बाद कर रहे है। एक बहाली पूरा करने में एक दशक लगाते है वह भी धाँधली के साथ। https://t.co/1QJQ8ulqQ2सनी लियोनी को बिहार की जूनियर इंजीनियर परीक्षा में टॉप कराने के बाद अब मलयालम अभिनेत्री अनुपमा परमेश्वरन को #STET परीक्षा पास करवा दी है।
— Tejashwi Yadav (@yadavtejashwi) June 24, 2021
नीतीश जी हर परीक्षा-बहाली में धाँधली करा करोड़ों युवाओं का जीवन बर्बाद कर रहे है। एक बहाली पूरा करने में एक दशक लगाते है वह भी धाँधली के साथ। https://t.co/1QJQ8ulqQ2
ಇದೇ ವಿಚಾರವನ್ನಿಟ್ಟುಕೊಂಡು ತೇಜಸ್ವಿ ಯಾದವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಬಿಹಾರದ ಜೂನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ಗೆ ಅಗ್ರಸ್ಥಾನ ನೀಡಲಾಗಿತ್ತು. ಆದರೆ, ಇದೀಗ ಮಲಯಾಳಂ ನಟಿ ಅನುಪಮಾ ಪರಮೇಶ್ವರ್ ಅವರ ಫೋಟೋ ಇದೆ. ಇಲ್ಲಿನ ಶಿಕ್ಷಣ ಮಂಡಳಿ ಯಾತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನ ಆರ್ಜೆಡಿ ಮುಖಂಡ ಜೈಸ್ವಾಲ್ ಕೂಡ ರಿಟ್ವೀಟ್ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರವಾಗಲಿ ಅಥವಾ ಶಿಕ್ಷಣ ಇಲಾಖೆ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.