ETV Bharat / bharat

'ದಿ ಲೈಟ್ ಆಫ್ ಸ್ಪಾರ್ಕ್ಸ್' - ಚಿಕ್ಕ ವಯಸ್ಸಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಪೋರಿ

'ದಿ ಲೈಟ್ ಆಫ್ ಸ್ಪಾರ್ಕ್ಸ್' ಎಂಬ ಕವನ ಸಂಕಲನದ ಮೂಲಕ ಕೇರಳದ ಕಾಸರಗೋಡು ಜಿಲ್ಲೆಯ ಚೂರಿಯ ಬಾಲಕಿ ಇಂಗ್ಲಿಷ್ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ.

author img

By

Published : Feb 19, 2021, 3:10 PM IST

ಆಂಗ್ಲ ಸಾಹಿತ್ಯದಲ್ಲಿ ಛಾಪು ಮೂಡಿಸಿದ ಕೇರಳದ ಪೋರಿ
Penning the The Light of Sparks

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಚೂರಿಯ ಈ ಹದಿನಾರು ವರ್ಷದ ಬಾಲಕಿ ಮರಿಯಮ್ ರಿಧಾ 'ದಿ ಲೈಟ್ ಆಫ್ ಸ್ಪಾರ್ಕ್ಸ್' ಎಂಬ ಕವನ ಸಂಕಲನದ ಮೂಲಕ ಇಂಗ್ಲಿಷ್ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ್ದಾಳೆ.

ಕಲ್ಪನೆ ಮತ್ತು ನಿರೂಪಣಾ ಕೌಶಲ್ಯಗಳ ಮೂಲಕ ಓದುಗರನ್ನು ತನ್ನ ಬರವಣಿಗೆಯತ್ತ ಸೆಳೆದಿದ್ದಾರೆ. ರಿಧಾ ಬರೆದ ಕಾವ್ಯವು ಹೆಚ್ಚಾಗಿ ಪ್ರಸ್ತುತ ವಿಷಯಗಳನ್ನು ಆಧರಿಸಿದೆ ಎಂಬುದು ಗಮನಾರ್ಹ. ದೈನಂದಿನ ಜೀವನದ ಅನುಭವಗಳು ರಿಧಾ ಕೃತಿಗಳ ಸಾರವನ್ನು ಸಮಾಜಕ್ಕೆ ಕೊಡುಗೆ ನೀಡುತ್ತಿದೆ.

ಮರಿಯಮ್ ರಿಧಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನಿಂದಲೂ ಸಾಹಿತ್ಯದತ್ತ ಅತ್ಯಾಸಕ್ತಿ ಹೊಂದಿದ್ದಳು. ಈಗಾಗಲೇ 500 ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದಾಳೆ. ಹೆಚ್ಚಾಗಿ ಇಂಗ್ಲಿಷ್ ಕಾದಂಬರಿಗಳನ್ನು ಓದುವ ರಿಧಾ ಹದಿನಾರನೇ ವಯಸ್ಸಿಗೆ ಕವಯಿತ್ರಿಯಾಗಿ ಜನರ ಮನಸೆಳೆದಿದ್ದಾಳೆ.

ಏಳನೇ ತರಗತಿಯಲ್ಲಿ, ಕವನ ಬರವಣಿಗೆ ಸ್ಪರ್ಧೆಯಲ್ಲಿ ಮರಿಯಮ್ ಬಹುಮಾನವನ್ನು ಗೆದ್ದಳು. ಅದು ಸೃಜನಶೀಲ ಬರವಣಿಗೆಯಲ್ಲಿ ಮುಂದುವರಿಯಲು ಪ್ರೇರೇಪಿಸಿತು. ಕಳೆದ ಮೂರು ವರ್ಷಗಳಲ್ಲಿ ರಿಧಾ ಬರೆದ 56 ಕವನಗಳ ಸಂಕಲನಗಳು ಈಗ ಮುದ್ರಣಗೊಂಡಿವೆ.

ಇದನ್ನೂ ಓದಿ: ನಾಳೆ ಭಾರತ - ಚೀನಾ ನಡುವೆ 10ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ಪ್ರಸ್ತುತ, ಮರಿಯಮ್ ಕಾಸರಗೋಡಿನ ಜಿಹೆಚ್ಎಸ್ಎಸ್​ನಲ್ಲಿ ಹನ್ನೆರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ‘ದಿ ಲೈಟ್ ಆಫ್ ಸ್ಪಾರ್ಕ್ಸ್’ ಅನ್ನು ತಮಿಳುನಾಡಿನಲ್ಲಿ ನೋಷನ್ ಪ್ರೆಸ್ ಪ್ರಕಟಿಸಿದೆ. ಪುಸ್ತಕವನ್ನು ಆನ್‌ಲೈನ್ ಮಳಿಗೆಗಳಿಂದ ಖರೀದಿಸಬಹುದು. ಇ-ಬುಕ್ ಆವೃತ್ತಿಯು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇಂಟರ್ನ್ಯಾಷನಲ್ ಮಾರ್ಕೆಟ್ ಪ್ಲಸ್‌ನಲ್ಲೂ ಲಭ್ಯವಿದೆ.

ಮರಿಯಮ್ ಅವರ ಪೋಷಕರಾದ ನೌಶಾದ್ ಮತ್ತು ರಾಮ್ಸೀನಾ ಪ್ರೋತ್ಸಾಹ, ಶಿಕ್ಷಕರು ಮತ್ತು ಸ್ನೇಹಿತರು, ಸಂಬಂಧಿಕರು ಬೆಂಬಲ ಮರಿಯಮ್​ ಸಾಧನೆಗೆ ಸಹಾಯ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.