ETV Bharat / bharat

ಪತಿಯನ್ನು ಜೀವಂತವಾಗಿ ಸುಟ್ಟ ಆರೋಪ: ಪತ್ನಿ ಸೇರಿ 6 ಜನರ ಬಂಧನ - ಪತ್ನಿ ಯಿಂದ ಪತಿಯ ಕೊಲೆ

38 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್​ನನ್ನು ಜೀವಂತವಾಗಿ ಸುಟ್ಟಿರುವ ಆರೋಪದ ಮೇಲೆ ಆತನ ಪತ್ನಿ ಮತ್ತು ಆಕೆಯ ಮನೆಯವರನ್ನು ಪೊಲೀಸರು ಬಂಧಿಸಿದ್ದಾರೆ.

Techie burnt alive in Telangana
ಪತಿಯನ್ನು ಜೀವಂತವಾಗಿ ಸುಟ್ಟ ಆರೋಪ
author img

By

Published : Nov 25, 2020, 7:24 PM IST

ಜಗ್ತಿಯಲ್ (ತೆಲಂಗಾಣ): ಮಾಟಮಂತ್ರ ಮಾಡಿರುವ ಅರೋಪದ ಮೇಲೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಬಲ್ವಂತಪುರದ 38 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್​ನನ್ನು ಜೀವಂತವಾಗಿ ಸುಟ್ಟಿರುವ ಆರೋಪ ಕೇಳಿ ಬಂದಿದ್ದು, ಆತನ ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಪವನ್ ಅವರ ಪತ್ನಿ ಕೃಷ್ಣವೇಣಿ ಸೇರಿದಂತೆ ಆರು ಜನರನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

"ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಪವನ್ ಪತ್ನಿ ಕೃಷ್ಣವೇಣಿ ಸಹ ಈ ಹತ್ಯೆಯಲ್ಲಿ ಭಾಗಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಪವನ್ ಅವರನ್ನು ಜೀವಂತವಾಗಿ ಸುಟ್ಟಿರುವ ಅನುಮಾನ ಇದೆ" ಎಂದು ಜಗ್ತಿಯಲ್ ಸರ್ಕಲ್ ಇನ್ಸ್‌ಪೆಕ್ಟರ್ ಕಿಶೋರ್‌ ಮಾಹಿತಿ ನೀಡಿದ್ದಾರೆ.

"ಪವನ್ ತನ್ನ ಹೆಂಡತಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ತನ್ನ ಪತ್ನಿಯ ಅಣ್ಣ ಜಗನ್, ಪವನ್​ ಮನೆಯಿಂದ ಹಣ ಮತ್ತು ಚಿನ್ನ ಕದ್ದಿದ್ದಾನೆ ಎಂಬ ಅನುಮಾನದ ಮೇಲೆ ಅವನು ತನ್ನ ಹೆಂಡತಿಯನ್ನು ದೂಷಿಸುತಿದ್ದ" ಎಂದು ಹೇಳಿದ್ದಾರೆ.

"ಪವನ್ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಪವನ್ ಪತ್ನಿಯ ಸಹೋದರ ಜಗನ್, ನವೆಂಬರ್ 12ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಕೃಷ್ಣವೇಣಿಯ ಸಹೋದರನಾದ ವಿಜಯಸ್ವಾಮಿ, ಪವನ್ ನಡೆಸಿದ ವಾಮಾಚಾರದಿಂದಾಗಿ ಜಗನ್ ಸಾವನ್ನಪ್ಪಿದ್ದಾನೆ ಎಂದು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾನೆ. ಇದೇ ಕಾರಣಕ್ಕೆ ಅವರು ಪವನ್​ನನ್ನು ಕೊಲ್ಲಲು ಯೋಜಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

"ಸೋಮವಾರ, ಪವನ್ ಪತ್ನಿ ಕೃಷ್ಣವೇಣಿ ಮತ್ತು ಮಕ್ಕಳು ಹನ್ನೆರಡನೇ ದಿನದ ಆಚರಣೆಯಲ್ಲಿ ಪಾಲ್ಗೊಳ್ಳಲು ಬಲ್ವಂತಪುರಕ್ಕೆ ಬಂದಿದ್ದಾರೆ. ಪವನ್ ಕೂಡ ಬಲವಂತಪುರವನ್ನು ತಲುಪಿದ್ದಾರೆ. ಜಗನ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸುತ್ತಿದ್ದ ವೇಳೆ ಅವರ ಅಳಿಯಂದಿರು ಅವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಠಡಿಯನ್ನು ಲಾಕ್ ಮಾಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.

"ಸಹಾಯಕ್ಕಾಗಿ ಪವನ್ ಕುಮಾರ್ ಅವರ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ, ಬಾಗಿಲು ತೆರೆದ ನೋಡಿದಾಗ ಪವನ್ ಮೃತಪಟ್ಟಿದ್ದ" ಎಂದು ತಿಳಿಸಿದ್ದಾರೆ.

ಪವನ್ ತಂದೆ ಗಂಗಾಧರ್, ಕೃಷ್ಣವೇಣಿಯ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ನಂತರವೇ ಕೊಲೆಯ ಹಿಂದಿನ ಉದ್ದೇಶ ಬಹಿರಂಗವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.