ಕೇರಳ/ತಮಿಳುನಾಡು: ಕೊರೊನಾದಿಂದಾಗಿ ಮನೆಯಲ್ಲಿಯೇ ಉಳಿದುಕೊಂಡಿದ್ದ ಮಕ್ಕಳಿಗೆ ತಮಿಳುನಾಡು ಮತ್ತು ಕೇರಳದಲ್ಲಿ ಶಾಲೆಗಳು ಆರಂಭವಾಗಿವೆ. ಸಾಕಷ್ಟು ದಿನಗಳ ನಂತರ ಶಾಲೆಗಳಿಗೆ ಸ್ವಲ್ಪ ಆತಂಕದಲ್ಲಿಯೇ ವಿದ್ಯಾರ್ಥಿಗಳು ಬರುತ್ತಾರೆ ಎಂಬ ಕಾರಣಕ್ಕೆ ಕೆಲವು ಶಾಲೆಗಳು ಅದ್ದೂರಿಯಾಗಿ ಮಕ್ಕಳನ್ನು ಬರಮಾಡಿಕೊಂಡಿವೆ.
ತಮಿಳುನಾಡಿನ ಶಿವಗಂಗೈನಲ್ಲಿರುವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ವಿಭಿನ್ನವಾಗಿ ಸ್ವಾಗತ ಮಾಡಲಾಗಿದೆ. ಅಂದಹಾಗೆ ಇಲ್ಲಿಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರಿಗೂ ಮೊದಲು ಸ್ವಾಗತಿಸಿದ್ದು ಸ್ಥಳೀಯ ದೇವಸ್ಥಾನದಲ್ಲಿದ್ದ ಗಜರಾಜ. ಅದಾದ ನಂತರವೇ ಶಿಕ್ಷಕರು ಕೋವಿಡ್ ಮಾರ್ಗಸೂಚಿ ಪಾಲಿಸಿ ಮಕ್ಕಳನ್ನು ಸ್ವಾಗತಿಸಿದ್ದಾರೆ.
ಕೇರಳದ ಕೋಯಿಕ್ಕೋಡ್‌ನಲ್ಲಿರುವ ಎಂಐಯುಪಿ ಶಾಲೆಯ ವಿದ್ಯಾರ್ಥಿಗಳಿಗೂ ಇದೇ ರೀತಿಯ ಆತ್ಮೀಯ ಸ್ವಾಗತ ದೊರೆತಿದೆ. ವಾದ್ಯಗೋಷ್ಢಿ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗಿದ್ದು, ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೂಗಳನ್ನು ಎಸೆದು ಸ್ವಾಗತಿಸಿದ್ದಾರೆ.
ಬಹಳ ದಿನಗಳ ನಂತರ ವಿದ್ಯಾರ್ಥಿಗಳು ಆತಂಕ, ನಿರಾಸಕ್ತಿ, ಒತ್ತಡದಂತಹ ಮಾನಸಿಕ ಸಮಸ್ಯೆಗಳೊಂದಿಗೆ ಶಾಲೆಗೆ ಬರುತ್ತಾರೆ. ಅವರಲ್ಲಿರುವ ದುಗುಡವನ್ನು ಹೋಗಲಾಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಲವು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸೋನಿಯಾಗೆ ಪತ್ರ ಬರೆದು ಕಾಂಗ್ರೆಸ್‌ಗೆ ಅಮರೀಂದರ್ ಸಿಂಗ್ ಗುಡ್ ಬೈ; ಹೊಸ ಪಕ್ಷದ ಹೆಸರು ಘೋಷಣೆ