ಭುವನೇಶ್ವರ (ಒಡಿಶಾ): ಕೊರೊನಾ ಕಾಲದಲ್ಲಿ ಕೆಲಸವಿಲ್ಲದೆ ಜನರು ಜೀವನ ನಿರ್ವಹಣೆಗಾಗಿ ಪರಿತಪಿಸುವಂತಾಗಿತ್ತು. ಅಲ್ಲದೆ ಹಲವರು ತಮ್ಮ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಅದೇ ರೀತಿ ಇಲ್ಲೊಬ್ಬ ಶಿಕ್ಷಕಿ ಕುಟುಂಬ ನಿರ್ವಹಣೆಗಾಗಿ ಪೌರಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಪದವೀಧರೆ ಸ್ಮೃತಿರೇಖಾ ಬೆಹೆರಾ ಎಂಬಾಕೆ ನರ್ಸರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಆದರೆ ಕೊರೊನಾ, ಲಾಕ್ಡೌನ್ನಿಂದಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದ ಶಾಲೆಯನ್ನು ಮುಚ್ಚಲಾಗಿದೆ. ಆ ಬಳಿಕ ಮನೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್ ನಡೆಸುತ್ತಿದ್ದು, ಕೊರೊನಾ ಹರಡುವಿಕೆ ಹೆಚ್ಚಾಗಿದ್ದರಿಂದ ಮನೆ ತರಗತಿಯನ್ನೂ ನಿಲ್ಲಿಸಲಾಯಿತು.
ಇದಾದ ಬಳಿಕ ಸ್ಮೃತಿರೇಖಾ ಹಲವೆಡೆ ಕೆಲಸಕ್ಕಾಗಿ ಅಲೆದಾಡಿದ್ದಾರೆ. ಆದರೆ ಲಾಕ್ಡೌನ್ ಸಮಯವಾಗಿದ್ದರಿಂದ ಎಲ್ಲಿಯೂ ಕೆಲಸ ಸಿಗಲಿಲ್ಲ. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ಬಿಎಂಸಿಯಲ್ಲಿ ಪೌರಕಾರ್ಮಿಕರಾಗಿ, ಕಸದ ವಾಹನವನ್ನು ಓಡಿಸಿ ಬದುಕು ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: 9 ವರ್ಷದ ಮಗಳ ಕತ್ತು ಹಿಸುಕಿ ಕೊಲೆಗೈದ ಹೃದಯಹೀನ ತಾಯಿ