ಫರೂಕಾಬಾದ್(ಉತ್ತರ ಪ್ರದೇಶ): ಹೊಟ್ಟೆಯೊಳಗಿಳಿದ ಮದ್ಯ ಆಡಿಸುವ ಆಟ ಅಂತಿಂಥದ್ದಲ್ಲ. ಕುಡಿದು ಟೈಟಾಗಿದ್ದ ಶಿಕ್ಷಕನೋರ್ವ ಬಟ್ಟೆ ಕಳಚಿ ಶಾಲೆಯ ನೆಲದ ಮೇಲೆ ಮಲಗಿರುವ ಘಟನೆ ಪರೂಕಾಬಾದ್ನಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿನ ಡೆವಲಪ್‌ಮೆಂಟ್ ಬ್ಲಾಕ್‌ನ ರಾಜೇಪುರದ ಪರಮಾಪುರ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕ ಅನಂತರಾಮನ ಅವಾಂತರ ನೋಡಿರುವ ಮಕ್ಕಳು ಭಯಗೊಂಡಿದ್ದಾರೆ.
ಇದನ್ನೂ ಓದಿ: ಕಂಠಪೂರ್ತಿ ಕುಡಿದು ಶಾಲೆಗೆ ಬಂದ ಪ್ರಾಂಶುಪಾಲ: ಗ್ರಾಮಸ್ಥರ ಛೀಮಾರಿ
ಗ್ರಾಮಸ್ಥರು ಹೇಳುವ ಪ್ರಕಾರ, ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಭಾರಿ ಮುಖ್ಯಶಿಕ್ಷಕ ಅನಂತರಾಮ್ ಕುಡಿತದ ಚಟ ಹೊಂದಿದ್ದಾನೆ. ಇಂದು ಮಧ್ಯಾಹ್ನ ಮಕ್ಕಳು ಶಾಲೆಯಲ್ಲಿ ಊಟ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಬಟ್ಟೆ ಕಳಚಿ ಜೋರಾಗಿ ಕೂಗಾಡತೊಡಗಿದ. ಇದರಿಂದ ಭಯಗೊಂಡಿರುವ ಮಕ್ಕಳು ಮನೆಗೆ ಓಡಿ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಶಾಲೆಗೆ ಧಾವಿಸಿದ ಪೋಷಕರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಶಿಕ್ಷಕನ ಮೇಲೆ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ಪ್ರತಿದಿನ ಶಾಲೆಗೆ ಕುಡಿದು ಬರುತ್ತಾರೆ. ಹೀಗಾಗಿ, ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎನ್ನುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಜಾರ್ಖಂಡ್ನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಮದ್ಯ ಸೇವಿಸಿದ ಪ್ರಾಂಶುಪಾಲನೋರ್ವ ಶಾಲೆಗೆ ಆಗಮಿಸಿ, ಶಾಲಾವರಣದಲ್ಲಿಯೇ ಬಿದ್ದು ಹೊರಳಾಡಿದ್ದ.