ETV Bharat / bharat

ತಡವಾಗಿ ಬಂದಿದ್ದಕ್ಕೆ ವಿದ್ಯಾರ್ಥಿಗಳಿಗೆ ಥಳಿಸಿದ ಶಿಕ್ಷಕ: ಶಾಲೆಗೆ ಬೀಗ ಜಡಿದು ಪೋಷಕರ ಆಕ್ರೋಶ

ತಡವಾಗಿ ಬಂದಿದ್ದಕ್ಕೆ 40 ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರು ಕೋಲಿನಿಂದ ಥಳಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

author img

By

Published : Jan 9, 2023, 5:50 PM IST

representative image
ಸಾಂದರ್ಭಿಕ ಚಿತ್ರ

ವಲ್ಸಾದ್ (ಗುಜರಾತ್): ಗುಜರಾತ್​ನ ವಲ್ಸಾದ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಾಮೋಹಿಕವಾಗಿ ನಡೆಯುವ ಪ್ರಾರ್ಥನೆಗೆ ತಡವಾಗಿ ಬಂದಿದ್ದಕ್ಕಾಗಿ ಶಾಲಾ ಶಿಕ್ಷಕರೊಬ್ಬರು 40 ವಿದ್ಯಾರ್ಥಿಗಳಿಗೆ ಥಳಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಧರ್ಮಪುರದಿಂದ 35 ಕಿ.ಮೀ ದೂರದಲ್ಲಿರುವ ವಲ್ಸಾದ್​ ಜಿಲ್ಲೆ ಖಡ್ಕಿ ಗ್ರಾಮದಲ್ಲಿ ಮಹಾರಾಷ್ಟ್ರ ಗಡಿಗೆ ಸಮೀಪದಲ್ಲಿ ಈ ಘಟನೆ ನಡೆದಿದೆ. ಶಾಲೆಯನ್ನು ಸರ್ವೋದಯ ಪರಿವಾರ ಟ್ರಸ್ಟ್ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳು ಶಾಲೆಯ ಸಮೀಪದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಪ್ರಾರ್ಥನೆ ಪ್ರಾರಂಭವಾದ ನಂತರ ಅವರು ಶಾಲೆಗೆ ಬಂದರು. ಇದರಿಂದ ಅಸಮಾಧಾನಗೊಂಡ ಮುಖ್ಯೋಪಾಧ್ಯಾಯರು ಅವರಿಗೆ ಹೊಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶುಕ್ರವಾರ ತಮ್ಮ ಮಕ್ಕಳು ಶಾಲೆಗೆ ಬಂದಾಗ ಬೆಳಗ್ಗೆ ಪ್ರಾರ್ಥನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒಂದು ಸಾಲಿನಲ್ಲಿ ನಿಂತಿದ್ದರು. ಇದರಿಂದ ಸಿಟ್ಟಿಗೆದ್ದ ಶಾಲಾ ಶಿಕ್ಷಕರು ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

40 ವಿದ್ಯಾರ್ಥಿಗಳಿಗೆ ಥಳಿಸಿದ ಗಂಭೀರ ದೂರು: ಮಕ್ಕಳ ವರ್ತನೆಯಿಂದ ರೊಚ್ಚಿಗೆದ್ದ ಶಿಕ್ಷಕರು ಕನಿಷ್ಠ 40 ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಇದರಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸುಮಾರು 10 ಮಕ್ಕಳ ಕೈ ಮತ್ತು ಕಾಲುಗಳು ಊದಿಕೊಂಡಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಪೋಷಕರು, ಶಿಕ್ಷಕರಿಂದ ಏಟು ತಿಂದ ಕೆಲ ಮಕ್ಕಳಿಗೆ ನಡೆಯಲೂ ಸಹ ಸಾಧ್ಯವಾಗಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಶಿಕ್ಷಕರಿಂದ ಏಟು ತಿಂದ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದ ತಕ್ಷಣ ಪೋಷಕರು ಶಾಲೆಗೆ ಧಾವಿಸಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದರು.

ಶಾಲೆಗೆ ಬೀಗ ಜಡಿದು ಆಕ್ರೋಶ: ಘಟನೆ ಕುರಿತು ಆಕ್ರೋಶಗೊಂಡ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿ ಶಿಕ್ಷಣ ಸಮಿತಿ ಅಧ್ಯಕ್ಷೆ ನಿರ್ಮಲಾ ಬೆನ್ ಜಾಧವ್ ಅವರನ್ನು ಸಂಪರ್ಕಿಸಿ, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ದೂರು ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಜಾಧವ್​ ಅವರ ಗಮನಕ್ಕೆ ತಂದಿದ್ದಾರೆ. ಇದನ್ನು ಗಮನಿಸಿದ ಜಾದವ್ ಅಗತ್ಯ ಕ್ರಮಕ್ಕಾಗಿ ಘಟನೆಯ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗೆ ಬರುವ ಮುನ್ನವೇ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಬೀಗ ಕೂಡಾ ಜಡಿದಿದ್ದು, ಪ್ರತಿಭಟನೆ ನಡೆಸಿದ್ದಾರೆ.

ಮುಖ್ಯೋಪಾಧ್ಯಾಯರನ್ನು ಹೊರ ಹಾಕುವವರೆಗೂ ಶಾಲೆಯ ಬೀಗ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಮಕ್ಕಳನ್ನು ಈ ರೀತಿ ಹೊಡೆಯುವಂತಿಲ್ಲ ಎಂದು ಎಸ್​ಪಿ ಡಾ.ರಾಜದೀಪ್ ಸಿಂಗ್ ಝಾಲಾ ಹೇಳಿದರು. ಸಂತ್ರಸ್ತ ವಿದ್ಯಾರ್ಥಿಗಳ ಪೋಷಕರು ಮುಖ್ಯೋಪಾಧ್ಯಾಯರ ವಿರುದ್ಧ ದೂರು ನೀಡಿದ ನಂತರ ವಲ್ಸಾದ್​ ಜಿಲ್ಲೆಯ ಡಿಎಸ್​ಪಿ ಡಾ.ರಾಜದೀಪ್ ಸಿಂಗ್ ಝಾಲಾ ಕೂಡ ಧರ್ಮಪುರ ತಲುಪಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಪತ್ನಿ, ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಹೊರದಬ್ಬಿದ ಶಿಕ್ಷಕ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.