ETV Bharat / bharat

ಸವ್ಯಸಾಚಿ ಶಿಕ್ಷಕ.. 35 ವರ್ಷದಿಂದ ಸೈಕಲ್​ನಲ್ಲಿ ಊರೂರು ಸುತ್ತಿ ಪರಿಸರ ಜಾಗೃತಿ - ಈಟಿವಿ ಭಾರತ ಕನ್ನಡ ನ್ಯೂಸ್

ಪಶ್ಚಿಮಬಂಗಾಳದ ಶಿಕ್ಷಕರೊಬ್ಬರು ಸೈಕಲ್​ ಮೇಲೆ ಹತ್ತಿಕೊಂಡು ಊರೂರು ಸುತ್ತಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಜನರು ಪ್ಲಾಸ್ಟಿಕ್​ ತ್ಯಜಿಸಿ ಸಸಿಗಳನ್ನು ನೆಟ್ಟು ಪರಿಸರ ಉಳಿಸಬೇಕು ಎಂಬುದು ಅವರ ಮಾತಾಗಿದೆ.

teacher-environmentalist
ಸೈಕಲ್​ನಲ್ಲಿ ಊರೂರು ಸುತ್ತಿ ಪರಿಸರ ಜಾಗೃತಿ
author img

By

Published : Sep 5, 2022, 9:55 PM IST

ಬೋಲ್​​ಪುರ್ ​(ಪಶ್ಚಿಮ ಬಂಗಾಳ): ಶಿಕ್ಷಕ ವೃತ್ತಿಯೇ ಹಾಗೆ. ಶಿಕ್ಷಕರಾದವರು ನಾಲ್ಕು ಗೋಡೆಗಳ ಮಧ್ಯೆ ಮಕ್ಕಳಿಗೆ ಮಾತ್ರವಲ್ಲ, ಸಮಾಜಕ್ಕೂ ಆತ ಮಾರ್ಗದರ್ಶಕನೇ. ಪಶ್ಚಿಮ ಬಂಗಾಳದ ಈ ಸವ್ಯಸಾಚಿ ಶಿಕ್ಷಕ 35 ವರ್ಷಗಳಿಂದ ಸೈಕಲ್​ನಲ್ಲೇ ಪ್ರಯಾಣಿಸಿ ವೃತ್ತಿ ಮಾಡುವುದಲ್ಲದೇ, ಊರೂರು ಅಲೆದು ಪರಿಸರದ ಅರಿವು ಮೂಡಿಸುತ್ತಿದ್ದಾರೆ.

ಆ ಸವ್ಯಸಾಚಿ ಶಿಕ್ಷಕರ ಹೆಸರು ಡಾ.ಸುಪ್ರಿಯೋ ಕುಮಾರ್ ಸಾಧು. ಇವರು ಪಶ್ಚಿಮ ಬಂಗಾಳದ ಬೋಲ್​ಪುರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 35 ವರ್ಷಗಳಿಂದ ಸೈಕಲ್ ಹತ್ತಿ ಸುತ್ತಲಿನ ಊರುಗಳಿಗೆ ಭೇಟಿ ನೀಡಿ ಗಿಡ ನೆಡುವ ಪ್ರಚಾರ ಮಾಡುತ್ತಿದ್ದಾರೆ. ಡಾ.ಸಾಧು ಅವರು ತಮ್ಮ ಸೈಕಲ್ ಮೇಲೆ ಪರಿಸರ ಕಾಳಜಿಯ ಘೋಷಣೆಗಳನ್ನು ಬರೆದಿದ್ದಾರೆ.

35 ವರ್ಷಗಳಿಂದ ಪರಿಸರ ಜಾಗೃತಿ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಅದೇ ರಾಜ್ಯದ ಡಾ.ಸಾಧು ಅವರು ಮೆರೆದ ಸಾಮಾಜಿಕ ಕಳಕಳಿ ಎಲ್ಲರಿಗೂ ಆದರ್ಶ. ಇವರು ತಮ್ಮ ಶಾಲೆಯನ್ನೇ ಹಸಿರುಮಯ ಮಾಡಿದ್ದಾರೆ. ಸಸಿಗಳನ್ನು ಬೆಳೆಸಿ ಹೆಮ್ಮರವನ್ನಾಗಿ ಮಾಡಿದ್ದಾರೆ.

ಡಾ.ಸಾಧು ಅವರು ಮುರ್ಷಿದಾಬಾದ್​ ಜಿಲ್ಲೆಯ ಶಾಲೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ ಅವರು ಬೋಲ್​ಪುರ ಶಾಲೆಗೆ ವರ್ಗವಾಗಿದ್ದು, ಇಲ್ಲಿಯೇ ಅವರು 25 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡಿರುವ ಅವರು, ಮುಂದಿನ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಈ ಪರಿಸರ ಪ್ರೇಮಿಗೆ 2018 ರಲ್ಲಿ 'ಶಿಕ್ಷಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿಕ್ಷಕ ಸಾಧು ಅವರು ಪಶ್ಚಿಮ ಬಂಗಾಳದ ವಿಜ್ಞಾನ ವೇದಿಕೆಯ ಸದಸ್ಯರೂ ಆಗಿದ್ದಾರೆ.

ಡಾ.ಸಾಧು ಅವರು 35 ವರ್ಷಗಳ ವೃತ್ತಿಜೀವನದಲ್ಲಿ ಪರಿಸರ ಸಂರಕ್ಷಣೆಯ ಕಾರ್ಯಕರ್ತ ಎಂದು ಪ್ರಸಿದ್ಧರಾಗಿದ್ದಾರೆ. ಮನೆಯಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಶಾಲೆಗೆ ಬೈಕ್ ಓಡಿಸಲು ಬಂದರೂ ಸೈಕಲ್​ನಲ್ಲೇ ಬಂದು ಮಕ್ಕಳಿಗೆ ಪಾಠ ಮಾಡುತ್ತಾರೆ. ಅಲ್ಲದೇ, ತಾವು ಪರಿಸರದ ಆಡುವ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ.

ಸೈಕಲ್​ ಮೇಲೆ ಪರಿಸರ ಕಾಳಜಿ ಘೋಷವಾಕ್ಯಗಳು: ಸೈಕಲ್​ ಹತ್ತಿ ಪ್ರಚಾರ ಮಾಡುವ ಶಿಕ್ಷಕ ಸಾಧು ಅವರು ಅದರ ಮೇಲೆ ಪರಿಸರ ಕಾಳಜಿಯ ಘೋಷ ವಾಕ್ಯಗಳನ್ನು ವಿಶಿಷ್ಟ ಶೈಲಿಯಲ್ಲಿ ಬರೆಸಿದ್ದಾರೆ. "ಪ್ಲಾಸ್ಟಿಕ್ ತ್ಯಜಿಸಿ, "ಮರಗಳನ್ನು ನೆಡಿ," "ಪರಿಸರ ಉಳಿಸಿ" ಎಂಬ ಜಾಗೃತಿ ವಾಕ್ಯಗಳು ಅದರ ಮೇಲಿವೆ.

ತಮ್ಮ ಶಾಲೆ ಮಾತ್ರವಲ್ಲದೇ, ಪಕ್ಕದ ಶಾಲೆಗಳಿಗೂ ರಜೆ ದಿನಗಳಲ್ಲಿ ಭೇಟಿ ನೀಡುವ ಈ ಶಿಕ್ಷಕ ಮಕ್ಕಳನ್ನು ಒಗ್ಗೂಡಿಸಿ ಪರಿಸರದ ಬಗ್ಗೆ ಪಾಠ ಮಾಡಿ, ಅವರ ಮೂಲಕ ಜನರಿಗೂ ಅರಿವು ಮೂಡಿಸುತ್ತಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಸಿಗಳನ್ನು ಹಸ್ತಾಂತರಿಸಿದ್ದಾರೆ.

ಪ್ಲಾಸ್ಟಿಕ್​ ಬಳಕೆ ಮಾಡಬಾರದು ಎಂಬುದು ಗೊತ್ತಿದ್ದರೂ ಜನರು ಅದರ ಮೊರೆ ಹೋಗುತ್ತಾರೆ. ಪ್ಲಾಸ್ಟಿಕ್​ ಬಿಟ್ಟು, ಸಸಿಗಳನ್ನು ನೆಟ್ಟರೆ ಅದುವೇ ತೃಪ್ತಿ. ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಈ ಕೆಲಸವನ್ನು ಮಾಡುತ್ತಿದ್ದೇನೆ. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ನನಗೆ ಸಹಾಯ ಮಾಡುತ್ತಿದ್ದಾರೆ ಎಂದು ಡಾ.ಸುಪ್ರಿಯೋ ಕುಮಾರ್​ ಸಾಧು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಓದಿ: ಈ ಗ್ರಾಮದ ಮೇಲೆ ಕೆಂಪಿರುವೆ ದಾಳಿ.. ಇದು ಹಾಲಿವುಡ್​ ಸಿನಿಮಾ ಕತೆಯಲ್ಲ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.