ನಾಡಿಯಾ (ಪಶ್ಚಿಮ ಬಂಗಾಳ): ಎರಡೂವರೆ ವರ್ಷಗಳ ಹಿಂದೆ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ರಾಣು ಮಂಡಲ ಎಂಬ ಭಿಕ್ಷುಕಿಯ ಕಂಠಸಿರಿಗೆ ಜನರು ಮನಸೋತಿದ್ದರು. ಅಂತೆಯೇ ಇಲ್ಲೊಬ್ಬ ಮಹಿಳೆ ತಮ್ಮ ಸುಮಧುರ ಕಂಠದಿಂದ ಮತ್ತೊಮ್ಮೆ ನೆಟ್ಟಿಗರನ್ನು ಆಕರ್ಷಿಸಿದ್ದಾರೆ.
ಪಶ್ಚಿಮ ಬಂಗಾಳದ ನಾಡಿಯಾದ ಬಿಪಾಶಾ ದಾಸ್, ಟೀ ಸ್ಟಾಲ್ ನಡೆಸುತ್ತಿದ್ದಾರೆ. ಚಹಾ ಮಾರಿ ಜೀವನ ನಿರ್ವಹಿಸುವ ಇವರದ್ದು ಕೋಗಿಲೆಯ ಕಂಠ.
ಅವರ ಗಾನ ಪ್ರತಿಭೆಗೆ ಬಡತನ ಅಡ್ಡಿಯಾಗಿದೆ. ಆದರೆ ಇವರು ರೇಡಿಯೋ ಮತ್ತು ಟೆಲಿವಿಷನ್ ಮೂಲಕ ಹಾಡಲು ಕಲಿಯಲು ಪ್ರಾರಂಭಿಸಿದರಂತೆ. ಇದೀಗ ಇವರ ಹಾಡಿನ ಮೋಡಿಗೆ ಜನರು ತಲೆದೂಗುತ್ತಿದ್ದಾರೆ.