ETV Bharat / bharat

ಇನ್ಮುಂದೆ ಕೈಕಟ್ಟಿ ಕುಳಿತುಕೊಳ್ಳಲ್ಲ, ನಾಲಿಗೆ ಹದ್ದುಬಸ್ತಿನಲ್ಲಿ ಇರ್ಲಿ: ವೈಎಸ್​ಆರ್​ ನಾಯಕರಿಗೆ 'ಬಾಲಯ್ಯ ವಾರ್ನಿಂಗ್​​​' - YSR Congress leaders

ಟಿಡಿಪಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Ex CM Chandrababu Naidu) ಪತ್ನಿ ಭುವನೇಶ್ವರಿ ಕುರಿತು ವೈಎಸ್​​ಆರ್​​ ನಾಯಕರ(YSR Congress leaders) ಹೇಳಿಕೆಯನ್ನು ಶಾಸಕ, ನಟ ನಂದಮೂರಿ ಬಾಲಕೃಷ್ಣ(Tollywood star Nandamuri Balakrishna) ತೀವ್ರವಾಗಿ ಖಂಡಿಸಿದ್ದಾರೆ. ಹಿರಿಯರ ಮಾತಿನ ಮೇಲೆ ಇಷ್ಟು ದಿನ ಸಂಯಮದಿಂದ ಇದ್ದೆವು. ಇನ್ಮುಂದೆ ನಮ್ಮ ಕುಟುಂಬಸ್ಥರ ಕುರಿತು ಟೀಕೆಗೆ ಮುಂದಾದ್ರೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

tdp-mla-balakrishna-fires-on-ycp-leaders-about-comments-in-ap-assembly
ನಂದಮೂರಿ ಬಾಲಕೃಷ್ಣ
author img

By

Published : Nov 20, 2021, 7:29 PM IST

ಹೈದರಾಬಾದ್(ತೆಲಂಗಾಣ): ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು(Ex CM Chandrababu Naidu) ಪತ್ನಿ ಭುವನೇಶ್ವರಿ ಕುರಿತು ವೈಎಸ್​​ಆರ್​​ ಕಾಂಗ್ರೆಸ್​ ನಾಯಕರ ಹೇಳಿಕೆಯನ್ನು ಶಾಸಕ, ನಟ ನಂದಮೂರಿ ಬಾಲಕೃಷ್ಣ(Tollywood star Nandamuri Balakrishna) ಹಾಗೂ ಕುಟುಂಬಸ್ಥರು ತೀವ್ರವಾಗಿ ಖಂಡಿಸಿದ್ದಾರೆ.

ತಮ್ಮ ಸಹೋದರಿ ಭುವನೇಶ್ವರಿ ಬಗ್ಗೆ ವೈಯಕ್ತಿಕ ಟೀಕೆ ಹಿನ್ನೆಲೆ ಬೇಸರಗೊಂಡು ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿದ ಬಾಲಯ್ಯ, ಇನ್ಮುಂದೆ ನಮ್ಮ ಕುಟುಂಬಸ್ಥರ ಕುರಿತು ವೈಯಕ್ತಿಕವಾಗಿ ಟೀಕೆ ಮಾಡಿದ್ರೆ ನಾವು ಕೈಕಟ್ಟಿ ಕುಳಿತುಕೊಳ್ಳಲ್ಲ ಎಂದು ವೈಎಸ್​ಆರ್​​​ ಕಾಂಗ್ರೆಸ್​ ಪಕ್ಷದ ನಾಯಕರಿ(YSR Congress leaders)ಗೆ ಎಚ್ಚರಿಕೆ ನೀಡಿದ್ದಾರೆ.

ವೈಎಸ್​ಆರ್​ ನಾಯಕರಿಗೆ 'ಬಾಲಯ್ಯ ವಾರ್ನಿಂಗ್​​​'

ಇವರೆಲ್ಲ ವಿಧಾನಸಭೆಯಲ್ಲಿದ್ದಾರೋ, ಪಶು ದೊಡ್ಡಿಯಲ್ಲಿದ್ದಾರೋ ಅರ್ಥವಾಗುತ್ತಿಲ್ಲ. ಜನರ ಸಮಸ್ಯೆಗಳ ಕುರಿತು ಆಡಳಿತ ಪಕ್ಷ- ಪ್ರತಿಪಕ್ಷ ಮಧ್ಯೆ ವಾದ-ವಿವಾದ ಮಾಡುವುದು ಸಾಮಾನ್ಯ. ಅದ್ರೆ ವಿಧಾನಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ, ಅಭಿವೃದ್ಧಿಗೆ ಒತ್ತು ನೀಡುವ ಬದಲು ವೈಯಕ್ತಿಕ ಅಜೆಂಡಾ ತಂದಿದ್ದಾರೆ. ಈ ಬೆಳವಣಿಗೆ ಹೊಸ ನೀಚ ಸಂಸ್ಕೃತಿಗೆ ಸಾಕ್ಷಿಯಾಗಿದೆ. ರಾಜ್ಯದ ಜನರು ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಬಾಲಕೃಷ್ಟ ಅವರು ವೈಎಸ್​ಆರ್​​ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಮಂಗಳಗಿರಿಯ ಟಿಡಿಪಿ ಪಕ್ಷದ ಕಚೇರಿ ಮೇಲೆ ದಾಳಿ ಮಾಡಿದ್ರು. ಚಂದ್ರಬಾಬು ನಾಯ್ಡು ಅವರ ಮೇಲೆ ದಾಳಿಗೂ ಯತ್ನಿಸಿದ್ರು. ಆದ್ರೂ ಅವರು ಸಂಯಮದಿಂದ ಇದ್ದಾರೆ. ಆದ್ರೆ ಕುಟುಂಬಸ್ಥರ ವಿರುದ್ಧ ಬೇಕಾಬಿಟ್ಟಿ ಮಾತನಾಡಿದರೆ ನಾವು ಸುಮ್ಮನಿರಲ್ಲ ಎಂದು ಬಾಲಕೃಷ್ಣ ಎಚ್ಚರಿಕೆ ಸಂದೇಶ ರವಾನಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.