ಅನ್ನಮಯ್ಯ (ಆಂಧ್ರಪ್ರದೇಶ): ಟಿಡಿಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ದು ಧರಿಸಿದ ಉಂಗುರ ಈಗ ಭಾರಿ ಸದ್ದು ಮಾಡುತ್ತಿದೆ. ನಾಯ್ಡು ಉಂಗುರ ಧರಿಸಿದ್ದಾರೆ ಎಂಬ ವಿಷಯಕ್ಕಿಂತ ಆ ಉಂಗುರದ ಬಗ್ಗೆ ಅವರು ಕೊಟ್ಟ ವಿವರಣೆಗೆ ಗಮನ ಸೆಳೆದಿದೆ.
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಪಾಲ್ಗೊಂಡಿದ್ದರು. ಈ ವೇಳೆ, ಅವರು ಧರಿಸಿದ್ದ ಉಂಗುರ ಕಾರ್ಯಕರ್ತರ ಗಮನ ಸೆಳೆದಿದೆ. ಅಲ್ಲದೇ, ಉಂಗುರದ ಬಗ್ಗೆ ಕುತೂಹಲದಿಂದ ಟಿಡಿಪಿ ಕಾರ್ಯಕರ್ತರು ನಾಯ್ಡು ಅವರನ್ನು ಪ್ರಶ್ನಿಸಿದ್ದಾರೆ. ಆಗ ಉಂಗುರದ ವಿಶಿಷ್ಟತೆಯನ್ನು ಚಂದ್ರಬಾಬು ವಿವರಿಸಿದ್ದಾರೆ.
ಉಂಗುರದಲ್ಲಿ ಕಂಪ್ಯೂಟರ್‌ಗೆ ಸಂಪರ್ಕಿಸುವ ಚಿಪ್ ಇದೆ. ಇದು ಹೃದಯ ಬಡಿತ ಮತ್ತು ಅವರು ಮಲಗುವ ರೀತಿಯನ್ನು ದಾಖಲಿಸುತ್ತದೆ ಎಂದು ನಾಯ್ಡು ಹೇಳಿದ್ದಾರೆ. ಇಷ್ಟೇ ಅಲ್ಲ, ಮರುದಿನ ಅದು ಲೋಪ - ದೋಷಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಹಜವಾಗಿ ಜನರು ತಪ್ಪು ಮಾಡುತ್ತಾರೆ; ಆದರೆ ಅದನ್ನು ಸರಿಪಡಿಕೊಳ್ಳಬೇಕು - ಮಮತಾ ಬ್ಯಾನರ್ಜಿ