ಮುಂಬೈ: ಎನ್.ಚಂದ್ರಶೇಖರ್ ಅವರು ಟಾಟಾ ಸನ್ಸ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷರಾಗಿ ಇನ್ನೂ 5 ವರ್ಷಗಳವರೆಗೆ ಮರು ನೇಮಕವಾಗಿದ್ದಾರೆ. ಇವರ ಆಡಳಿತಾವಧಿಯು ಕೊನೆಗೊಳ್ಳುವ ಸಂಬಂಧ ಟಾಟಾ ಸನ್ಸ್ ಸಂಸ್ಥೆಯಲ್ಲಿ ಇಂದು (ಶುಕ್ರವಾರ) ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಚಂದ್ರಶೇಖರ್ ಅವರನ್ನೇ ಮುಂದಿನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮುಂದುವರಿಸಲು ನಿರ್ಧರಿಸಲಾಗಿದೆ.
-
Tata Sons board renews N Chandrasekaran’s term as Executive Chairman for the next five years
— ANI (@ANI) February 11, 2022 " class="align-text-top noRightClick twitterSection" data="
(file photo) pic.twitter.com/txn1ZHuipV
">Tata Sons board renews N Chandrasekaran’s term as Executive Chairman for the next five years
— ANI (@ANI) February 11, 2022
(file photo) pic.twitter.com/txn1ZHuipVTata Sons board renews N Chandrasekaran’s term as Executive Chairman for the next five years
— ANI (@ANI) February 11, 2022
(file photo) pic.twitter.com/txn1ZHuipV
ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ರತನ್ ಟಾಟಾ ಅವರು ಟಾಟಾ ಗ್ರೂಪ್ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಮತ್ತು ಎನ್. ಚಂದ್ರಶೇಖರ್ ಅವರ ಕಾರ್ಯಾಧಿಕಾರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್ ಅವರ ಅಧಿಕಾರವಧಿಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲು ಶಿಫಾರಸು ಮಾಡಿದಾಗ ಸರ್ವಸದಸ್ಯರು ಇದನ್ನು ಅನುಮೋದಿಸಿದ್ದಾರೆ.
ಟಾಟಾ ಸನ್ಸ್ ಕಂಪನಿಯು 2020-21 ರಲ್ಲಿ 103 ಬಿಲಿಯನ್ ಡಾಲರ್ನಷ್ಟು ವಹಿವಾಟು ನಡೆಸಿದೆ. ಅಲ್ಲದೇ ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ ಪ್ರಮುಖ ಕಂಪನಿಯಾಗಿದೆ.
ಓದಿ: ಹಿಜಾಬ್ ವಿವಾದ: ಹೈಕೋರ್ಟ್ ಹೊರಡಿಸಿದ ಮಧ್ಯಂತರ ತೀರ್ಪಿನಲ್ಲಿ ಏನೇನಿದೆ.?