ETV Bharat / bharat

ಟಾಟಾ ಮೋಟಾರ್ಸ್ ಮತ್ತು ಫೋರ್ಡ್ ಇಂಡಿಯಾ ನಡುವಿನ ಒಪ್ಪಂದ ಪೂರ್ಣ - ಫೋರ್ಡ್ ಇಂಡಿಯಾ

ಗುಜರಾತ್‌ನ ಸನಂದ್‌ನಲ್ಲಿರುವ ಫೋರ್ಡ್ ಇಂಡಿಯಾ ಘಟಕಕ್ಕೆ ಸಂಬಂಧಿಸಿದಂತೆ ಟಾಟಾ ಮೋಟಾರ್ಸ್ ಮತ್ತು ಫೋರ್ಡ್ ನಡುವಿನ ಒಪ್ಪಂದ ಪೂರ್ಣವಾಗಿದೆ.

ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್
author img

By

Published : Jan 11, 2023, 11:09 PM IST

ನವದೆಹಲಿ: ಟಾಟಾ ಮೋಟಾರ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂಎಲ್) ಮತ್ತು ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಟಿಪಿಇಎಂಎಲ್) ನಡುವಿನ ಒಪ್ಪಂದ ಪೂರ್ಣಗೊಂಡಿದೆ. ಇದರೊಂದಿಗೆ ಗುಜರಾತ್‌ನ ಸನಂದ್‌ನಲ್ಲಿರುವ ಫೋರ್ಡ್ ಇಂಡಿಯಾ ಘಟಕದ ಮಾಲೀಕತ್ವವು ಟಾಟಾ ಸಮೂಹ ತೆಕ್ಕೆಗೆ ಜಾರಿದೆ.

ಫೋರ್ಡ್ ಇಂಡಿಯಾ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ 2022ರ ಆಗಸ್ಟ್ 7ರಂದು 725.7 ಕೋಟಿ ರೂಪಾಯಿಗಳಿಗೆ ಫೋರ್ಡ್ ಮೋಟಾರ್ಸ್ ಮತ್ತು ಟಾಟಾ ಮೋಟಾರ್ಸ್ ನಡುವೆ ಒಪ್ಪಂದವಾಗಿತ್ತು. ಜನವರಿ 10ರಂದು ಟಾಟಾ ಮೋಟಾರ್ಸ್ ಈ ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು ಪೂರ್ಣವಾಗಿದೆ ಎಂದು ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಎರಡೂ ಕಡೆ ಕೂಡ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡು, ಇದಕ್ಕೆ ಸಂಬಂಧಿಸಿದ ಎಲ್ಲ ನಿಯಂತ್ರಕರಿಂದ ಅನುಮೋದನೆ ಪಡೆದ ಬಳಿಕವೇ ಈ ಒಪ್ಪಂದವನ್ನು ಪೂರ್ಣಗೊಂಡಿದೆ ಎಂದು ತಿಳಿಸಿದೆ.

ಇದನ್ನೂ ಓದಿ: 725.7 ಕೋಟಿಗೆ ಸಾನಂದ್ ಉತ್ಪಾದನಾ ಘಟಕ ಸ್ವಾಧೀನಕ್ಕೆ ಪಡೆದ ಟಾಟಾ ಮೋಟಾರ್ಸ್‌

ಟಾಟಾ ಕಂಪನಿಗೆ ಉದ್ಯೋಗಿಗಳು ವರ್ಗ: ಈ ಒಪ್ಪಂದದಲ್ಲಿ ಸಂಪೂರ್ಣ ಭೂಮಿ ಮತ್ತು ಕಟ್ಟಡಗಳು, ಯಂತ್ರೋಪಕರಣಗಳು ಮತ್ತು ವಾಹನ ತಯಾರಿಕಾ ಸ್ಥಾವರ ಒಳಗೊಂಡಿದೆ. ಎಫ್‌ಐಪಿಎಲ್‌ನ ಸನಂದ್ ಘಟಕವನ್ನು ಟಿಪಿಇಎಂಎಲ್ ಸ್ವಾಧೀನಪಡಿಸಿಕೊಂಡಿರುವ ಜೊತೆಗೆ ಟಿಪಿಇಎಂಎಲ್‌ನ ನಿಯಮಗಳನ್ನು ಒಪ್ಪಿಕೊಂಡ ಎಲ್ಲ ಉದ್ಯೋಗಿಗಳನ್ನೂ ಕಂಪನಿಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಈಗಿನ ಒಪ್ಪಂದವು ವರ್ಷಕ್ಕೆ ಮೂರು ಲಕ್ಷ ಯುನಿಟ್‌ಗಳ ಹೆಚ್ಚುವರಿ ಅತ್ಯಾಧುನಿಕ ಉತ್ಪಾದನಾ ಸಾಮರ್ಥ್ಯವನ್ನು ಒಳಗೊಂಡಿದ್ದು, ಈ ಮೂಲಕ ವರ್ಷಕ್ಕೆ 4.20 ಲಕ್ಷ ಯುನಿಟ್‌ಗಳಿಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಲಾಗಿದೆ ಎಂದು ಟಾಟಾ ಗ್ರೂಪ್ ಹೇಳಿದೆ. ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಪ್ರಯಾಣಿಕ ವಾಹನಗಳ ಮಾರುಕಟ್ಟೆಯಲ್ಲಿ ಅಗ್ರ ಮೂರಲ್ಲಿ ಒಂದಾಗಿದೆ. ಕಾರುಗಳು, ಯುಟಿಲಿಟಿ ವಾಹನಗಳು, ಪಿಕ್​ಅಪ್‌ಗಳು, ಟ್ರಕ್‌ಗಳು ಮತ್ತು ಟಾಟಾ ಬಸ್‌ಗಳು ಹಾಗೂ ಇ-ಮೊಬಿಲಿಟಿ ಸೇವೆಗಳನ್ನು ನೀಡುತ್ತದೆ.

ಅಲ್ಲದೇ, ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವಾಹನಗಳ ವ್ಯವಹಾರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಟಾಟಾ ಮೋಟಾರ್ಸ್​ ನಿರಂತರವಾಗಿ ಬೆಳೆಯುತ್ತಿದೆ. ಭಾರತ, ಬ್ರಿಟನ್​, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಮಧ್ಯಪ್ರಾಚ್ಯ, ದಕ್ಷಿಣ ಮತ್ತು ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಆಫ್ರಿಕಾ, ರಷ್ಯಾ ಸೇರಿದಂತೆ ಇತರೆಡೆ ಕೂಡ ಟಾಟಾ ಮೋಟಾರ್ಸ್ ತನ್ನ ವಾಹನಗಳನ್ನು ಮಾರಾಟ ಮಾಡುತ್ತದೆ.

ಇತ್ತ, ಅಮೆರಿಕದ ಜನಪ್ರಿಯ ಕಾರು ತಯಾರಿಕಾ ಕಂಪನಿಗಳ ಪೈಕಿ ಒಂದಾದ ಫೋರ್ಡ್‌ ಮೋಟ​ರ್​​ ಭಾರತದಲ್ಲಿರುವ ತನ್ನ ಎರಡೂ ಘಟಕಗಳನ್ನು ಸ್ಥಗಿತ ಮಾಡಿದೆ. ಕಾರು ಉತ್ಪಾದನಾ ಘಟಕ ನಷ್ಟದಲ್ಲಿರುವ ಕಾರಣದಿಂದ ಮುಚ್ಚುವ ನಿರ್ಧಾರವನ್ನು ಫೋರ್ಡ್‌ ಕೈಗೊಂಡಿತ್ತು. ಟಾಟಾ ಜೊತೆಗಿನ ಒಪ್ಪಂದ ಪ್ರಕ್ರಿಯೆಯು ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಂತೆ ನಡೆದಿದೆ.

ಇದನ್ನೂ ಓದಿ: ಬಿಲಿಯನ್ ಡಾಲರ್ ವೆಚ್ಚದಲ್ಲಿ 500 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.