ETV Bharat / bharat

ಮುಖ್ಯಮಂತ್ರಿಗೆ ತಣ್ಣಗಾದ, ರುಚಿಯಿಲ್ಲದ ಟೀ ಪೂರೈಕೆ.. ಅಧಿಕಾರಿಗೆ ನೋಟಿಸ್ ಜಾರಿ - ತಣ್ಣಗಾದ ರುಚಿಯಿಲ್ಲದ ಟೀ ನೀಡಿಕೆ

ಮುಖ್ಯಮಂತ್ರಿಗೆ ತಣ್ಣಗಾದ ಮತ್ತು ರುಚಿಯಿಲ್ಲದ ಟೀ ಪೂರೈಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಯೊಬ್ಬನಿಗೆ ನೋಟಿಸ್ ಜಾರಿ ಮಾಡಲಾಗಿದೆ.

Tasteless and cold tea to CM Shivraj
Tasteless and cold tea to CM Shivraj
author img

By

Published : Jul 12, 2022, 5:39 PM IST

Updated : Jul 12, 2022, 6:17 PM IST

ಛತರ್​​​ಪುರ್​(ಮಧ್ಯಪ್ರದೇಶ): ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಅವರಿಗೆ ವಿಮಾನ ನಿಲ್ದಾಣದಲ್ಲಿ ರುಚಿಯಿಲ್ಲದ ಮತ್ತು ತಣ್ಣನೆಯ ಟೀ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಮೂರು ದಿನಗಳಲ್ಲಿ ನೋಟಿಸ್​​ಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ.

ನಗರ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕಾಗಿ ಛತ್ತರ್​ಪುರ್ ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ರುಚಿಯಿಲ್ಲದ ಮತ್ತು ತಣ್ಣನೆಯ ಟೀ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಿಡಬ್ಲೂಡಿ ಇಲಾಖೆಯ ಅಧಿಕಾರಿ ರಾಕೇಶ್​ ಕನೌಹಾಗೆ ನೋಟಿಸ್ ನೀಡಲಾಗಿದೆ ಎಂದು ರಾಜನಗರ್​​ ವಿಭಾಗದ ಸಹಾಯಕ ಕಮೀಷನರ್​​ ಡಿ.ಪಿ ದ್ವಿವೇದಿ ತಿಳಿಸಿದ್ದಾರೆ.

Tasteless and cold tea to CM Shivraj
ಅಧಿಕಾರಿಗೆ ನೋಟಿಸ್ ಜಾರಿ

ಜುಲೈ 11ರಂದು ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ರೇವಾಗೆ ಹೋಗುವ ಸಂದರ್ಭದಲ್ಲಿ ಛತ್ತರ್​ಪುರ್ ಜಿಲ್ಲೆಯ ಖಜುರಾಹೋ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳಲು ಉಳಿದುಕೊಂಡಿದ್ದರು. ಈ ವೇಳೆ ಉಪಹಾರ, ಟೀ ಪೂರೈಕೆ ಮಾಡಲಾಗಿತ್ತು.ಪೂರೈಕೆ ಮಾಡಿರುವ ಟೀ ರುಚಿಯಿಲ್ಲದ ಹಾಗೂ ತಣ್ಣಗಾಗಿತ್ತು.

ಇದನ್ನೂ ಓದಿರಿ: ಗುಜರಾತ್​​ನಲ್ಲಿ ನಕಲಿ IPL​ ಟೂರ್ನಿ: ರಷ್ಯಾ ಟೆಕ್ಕಿಗಳಿಗೆ ಟೋಪಿ; ಖತರ್​ನಾಕ್​ ಗ್ಯಾಂಗ್​ ಬಂಧಿಸಿದ ಪೊಲೀಸ್​

ಮೂರು ದಿನಗಳಲ್ಲಿ ಉತ್ತರಿಸುವಂತೆ ನೋಟಿಸ್​​: ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಮೂರು ದಿನಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ವಿಐಪಿ ಒಬ್ಬರ ಶಿಷ್ಟಾಚಾರದ ಉಲ್ಲಂಘನೆ ಎಂದು ಉಲ್ಲೇಖ ಮಾಡಲಾಗಿದೆ. ಸೂಕ್ತವಾದ ಕಾರಣ ನೀಡದಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಈ ಪ್ರಕರಣ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗ್ತಿದ್ದು,ಪ್ರತಿಪಕ್ಷಗಳು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿವೆ.

ನೋಟಿಸ್​ ರದ್ದು: ಅಧಿಕಾರಿಗೆ ಶೋಕಾಸ್ ನೋಟಿಸ್​ ಪ್ರಕರಣ ಹೆಚ್ಚು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗುತ್ತಿದ್ದಂತೆ, ವಾಪಸ್​ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಕಳಪೆ ಟೀ ನೀಡಿದ್ದಕ್ಕಾಗಿ ರಾಕೇಶ್ ಕನ್ಹುವಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ರೋಶಕ್ಕೆ ಕಾರಣವಾದರಿಂದ ಜಿಲ್ಲಾಧಿಕಾರಿ ಸಂದೀಪ್ ಜಿ.ಆರ್ ದ್ವಿವೇದಿ ನೀಡಿದ್ದ ನೋಟಿಸ್ ರದ್ದುಗೊಳಿಸಲಾಗಿದೆ.

Last Updated : Jul 12, 2022, 6:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.