ETV Bharat / bharat

ಜೀ5 ಇಂಡಿಯಾ ಸಿಇಒ ಹುದ್ದೆಗೆ ತರುಣ್ ಕಟಿಯಾಲ್ ರಾಜೀನಾಮೆ

ಜೀ5 ಇಂಡಿಯಾ ಸಿಇಒ ಹುದ್ದೆಗೆ ತರುಣ್ ಕಟಿಯಾಲ್​ ರಾಜೀನಾಮೆ ನೀಡಿದ್ದಾರೆ. ಇನ್ಮುಂದೆ ಅಮಿತ್ ಗೋಯೆಂಕಾ ಸಿಇಒ ಆಗಿ ಜೀ5 ತಂಡವನ್ನ ಮುನ್ನಡೆಸಲಿದ್ದಾರೆ.

Tarun Katial steps down as CEO of ZEE5 India
ಜೀ5 ಇಂಡಿಯಾ ಸಿಇಒ ಹುದ್ದೆಗೆ ತರುಣ್ ಕಟಿಯಾಲ್ ರಾಜೀನಾಮೆ
author img

By

Published : Nov 19, 2020, 9:06 AM IST

ನವದೆಹಲಿ: ತರುಣ್ ಕಟಿಯಾಲ್ ಅವರು​ ಜೀ5 ಇಂಡಿಯಾ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಮಿತ್ ಗೋಯೆಂಕಾ ನೂತನ ಸಿಇಒ ಆಗಿ ಜೀ5 ತಂಡವನ್ನ ಮುನ್ನಡೆಸಲಿದ್ದಾರೆ.

"ನಾವು ಇತ್ತೀಚೆಗೆ ಘೋಷಿಸಿದ ಸಂಘಟನೆಯ ಕಾರ್ಯತಂತ್ರದ ಪುನರ್ರಚನೆಗೆ ಅನುಗುಣವಾಗಿ, ಡಿಜಿಟಲ್ ಬ್ಯುಸಿನೆಸ್ ಮತ್ತು ಪ್ಲಾಟ್‌ಫಾರ್ಮ್‌ಗಳ ಅಧ್ಯಕ್ಷರಾಗಿ ಅಮಿತ್ ಗೋಯೆಂಕಾ, ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಜೀ5 ತಂಡವನ್ನು ಮುನ್ನಡೆಸಲಿದ್ದಾರೆ" ಎಂದು ಕಂಪನಿಯ ವಕ್ತಾರರು ತಿಳಿಸಿದರು.

ತರುಣ್ ಕಟಿಯಾಲ್ ​ಜೀ5 ಬೆಳವಣಿಗೆಗೆ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ ನಾವು ಅವರಿಗೆ ಧನ್ಯವಾದಗಳ ತಿಳಿಸುತ್ತೇವೆ. ಅವರ ಸಮರ್ಥ ನಾಯಕತ್ವದಲ್ಲಿ, ಅಲ್ಪಾವಧಿಯಲ್ಲಿಯೇ, ಜೀ5 ಭಾರತದ ಅತಿದೊಡ್ಡ ಕಾನ್​ಟೆಕ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ಅತ್ಯಾಧುನಿಕ ತಂತ್ರಜ್ಞಾನ ಡಿಜಿಟಲ್ ಪ್ಲಾಟ್‌ಫಾರ್ಮ್ ನಿರ್ಮಿಸುವಲ್ಲಿ ಅವರ ಅನುಭವ ಮತ್ತು ಪರಿಣತಿ ಅಮೂಲ್ಯವಾದದ್ದು ಎಂದು ಕಂಪನಿಯ ವಕ್ತಾರರು ಕೃತಜ್ಞತೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.