ETV Bharat / bharat

ಅಲಿಗಢ ಮಸೀದಿಗೆ ಟಾರ್ಪಾಲಿನ್ ಹೊದಿಕೆ: ಹೋಳಿಯಲ್ಲಿ ಬಣ್ಣ ಸಿಡಿಯದಂತೆ ಮುನ್ನೆಚ್ಚರಿಕೆ - ಅಲಿಗಢದ ಅತ್ಯಂತ ಸೂಕ್ಷ್ಮ ಹಲ್ವಾಯಿಯಾ ಕ್ರಾಸ್‌ರೋಡ್‌

ಹೋಳಿ ಹಬ್ಬದಲ್ಲಿ ಬಣ್ಣ ಸಿಡಿಯದಂತೆ ತಡೆಗಟ್ಟಲು ಮಸೀದಿಯೊಂದಕ್ಕೆ ಟಾರ್ಪಾಲಿನ್ ಹೊದಿಕೆಯಿಂದ ಮುಚ್ಚಲಾಗಿದೆ. ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಅಲಿಗಢ ಮಸೀದಿಗೆ ಟಾರ್ಪಾಲಿನ್ ಹೊದಿಕೆ: ಹೋಳಿಯಲ್ಲಿ ಬಣ್ಣ ಸಿಡಿಯದಂತೆ ಮುನ್ನೆಚ್ಚರಿಕೆ
tarpaulin-cover-for-aligarh-masjid-a-precaution-against-color-bursting-during-holi
author img

By

Published : Mar 7, 2023, 4:58 PM IST

ಅಲಿಗಢ( ಉತ್ತರಪ್ರದೇಶ): ಹೋಳಿ ಹಬ್ಬದಲ್ಲಿ ಮಸೀದಿಗೆ ಬಣ್ಣ ಬೀಳದಿರುವಂತೆ ತಡೆಗಟ್ಟಲು ಅಲಿಗಢಲ್ಲಿರುವ ಮಸೀದಿಯೊಂದಕ್ಕೆ ಹೋಳಿ ಹಬ್ಬದ ಮೊದಲು ಟಾರ್ಪಾಲಿನ್‌ ಹೊದಿಕೆ ಹಾಕಲಾಗಿದೆ. ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಅಲಿಗಢದ ಅತ್ಯಂತ ಸೂಕ್ಷ್ಮ ಹಲ್ವಾಯಿಯಾ ಕ್ರಾಸ್‌ರೋಡ್‌ನಲ್ಲಿರುವ ಅಬ್ದುಲ್ ಕರೀಮ್ ಮಸೀದಿಯನ್ನು ರಾತ್ರಿ ಟಾರ್ಪಾಲಿನ್​ನಿಂದ ಮುಚ್ಚಲಾಗಿದೆ.

ಕಳೆದ ಹಲವಾರು ವರ್ಷಗಳಿಂದ ಹೋಳಿ ಹಬ್ಬದಲ್ಲಿ ರಾತ್ರಿಯ ಸಮಯದಲ್ಲಿ ಈ ಮಸೀದಿಯನ್ನು ಇದೇ ರೀತಿ ಟಾರ್ಪಾಲಿನ್​ನಿಂದ ಮುಚ್ಚಲಾಗುತ್ತಿದೆ. ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಆಡಳಿತದ ಸೂಚನೆ ಮೇರೆಗೆ ಮಸೀದಿಗೆ ಯಾರೂ ಬಣ್ಣ ಅಥವಾ ಮಣ್ಣು ಎಸೆಯದಂತೆ ಟಾರ್ಪಾಲಿನ್‌ನಿಂದ ಮುಚ್ಚಿದ್ದೇವೆ ಎಂದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದಾಗಿನಿಂದ ಸುಮಾರು 6 ರಿಂದ 7 ವರ್ಷಗಳಿಂದ ಜಿಲ್ಲಾಡಳಿತದ ಸಹಾಯದಿಂದ ಮಸೀದಿಯನ್ನು ಮುಚ್ಚಲಾಗುತ್ತಿದೆ. ಮಸೀದಿಗೆ ಯಾರೂ ಬಣ್ಣ ಅಥವಾ ಕೊಳಕು ಎರಚದಂತೆ ರಕ್ಷಿಸಲು ನಾವು ಮಸೀದಿಯನ್ನು ಮುಚ್ಚುತ್ತೇವೆ ಎಂದು ನಿವಾಸಿ ಅಖೀಲ್ ಪಹಲ್ವಾನ್ ಹೇಳಿದರು.

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ: ಭಾರತದ ಸರ್ವೋಚ್ಚ ನ್ಯಾಯಾಲಯವು ವಿವಾದಿತ ಜನ್ಮಭೂಮಿ ಬಾಬರಿ ಮಸೀದಿ ಭೂಮಿಯನ್ನು ಹಿಂದೂಗಳ ಪಾಲಿಗೆ ನೀಡಿದ ಮತ್ತು ಹೊಸ ಮಸೀದಿಯನ್ನು ನಿರ್ಮಿಸಲು ಮುಸ್ಲಿಮರಿಗೆ ಪರ್ಯಾಯ ಸ್ಥಳವನ್ನು ನೀಡಿದ ಸುಮಾರು ನಾಲ್ಕು ವರ್ಷಗಳ ನಂತರ, ಧನ್ನಿಪುರ ಮಸೀದಿಯ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಬರಿ ಮಸೀದಿ ರಾಮ ಜನ್ಮಭೂಮಿ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಧನ್ನಿಪುರ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಅಂತಿಮ ಅನುಮತಿ ನೀಡಿದೆ.

ಉತ್ತರ ಪ್ರದೇಶ ಸರ್ಕಾರವು ನೀಡಿದ ಐದು ಎಕರೆ ಭೂಮಿಯಲ್ಲಿ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಟ್ರಸ್ಟ್‌ನಿಂದ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಊಟದ ಮನೆ ಮತ್ತು ಗ್ರಂಥಾಲಯ ನಿರ್ಮಿಸಲಾಗುವುದು. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ADA) ಅನುಮತಿ ನೀಡಲು ತಡ ಮಾಡಿದ್ದರಿಂದ ಮತ್ತು ಭೂ ಬಳಕೆಯ ಬದಲಾವಣೆಯ ವಿಷಯಗಳಿಂದಾಗಿ ನಿರ್ಮಾಣವು ಎರಡು ವರ್ಷಗಳ ಕಾಲ ವಿಳಂಬವಾಗಿದೆ.

ಶುಕ್ರವಾರ ನಡೆದ ಮಂಡಳಿಯ ಸಭೆಯಲ್ಲಿ ನಾವು ಅಯೋಧ್ಯೆ ಮಸೀದಿಯ ಯೋಜನೆಯನ್ನು ಅನುಮೋದಿಸಿದ್ದೇವೆ. ಮಂಜೂರಾದ ನಕ್ಷೆಗಳನ್ನು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಗೆ ಹಸ್ತಾಂತರಿಸಲಾಗುವುದು. ಇದು ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಯೋಧ್ಯೆ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಐಐಸಿಎಫ್ ಕಾರ್ಯದರ್ಶಿ ಅಥರ್ ಹುಸೇನ್ ಈ ಕುರಿತು ಮಾತನಾಡಿ, ಎಲ್ಲ ಅನುಮತಿಗಳನ್ನು ಪಡೆದ ನಂತರ ಟ್ರಸ್ಟ್ ಸಭೆ ನಡೆಸಿ ಮಸೀದಿ ನಿರ್ಮಾಣದ ಯೋಜನೆಯನ್ನು ಅಂತಿಮಗೊಳಿಸಲಿದೆ. ಏಪ್ರಿಲ್ 21 ರಂದು ಕೊನೆಗೊಳ್ಳುವ ರಂಜಾನ್ ನಂತರ ಟ್ರಸ್ಟ್‌ನ ಸಭೆ ನಡೆಯಲಿದೆ. ಮಸೀದಿಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವ ದಿನಾಂಕವನ್ನು ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : ಮಹಿಳೆಯರು ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸಬಹುದು: ಎಐಎಂಪಿಎಲ್​ಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.