ಶ್ರೀನಗರ (ಜೆ & ಕೆ): ಕಾಶ್ಮೀರದಲ್ಲಿ ನಡೆಯುತ್ತಿರುವ ಉದ್ದೇಶ ಪೂರ್ವಕ ಹತ್ಯೆ ಪ್ರಕರಣವನ್ನು ಗಮನದಲ್ಲಿರಿಸಿಕೊಂಡು ವಾರ್ಷಿಕ ಅಮರನಾಥ ಯಾತ್ರೆಗೆ ಹೆಚ್ಚಿನ ಭದ್ರತೆ ನೀಡಲು ಸರ್ಕಾರ ಮುಂದಾಗಿದೆ. ಅರೆಸೇನಾ ಪಡೆಗಳ ನಿಯೋಜನೆಯನ್ನು ಕೇಂದ್ರ ಗೃಹ ಸಚಿವಾಲಯ ಮತ್ತಷ್ಟು ಹೆಚ್ಚಿಸಿದೆ ಮತ್ತು ಗುರಿಯ ದುಷ್ಕೃತ್ಯವನ್ನು ತಡೆಯಲು ಕಾಶ್ಮೀರ ಕಣಿವೆಯಲ್ಲಿ ಪೊಲೀಸ್ ವ್ಯವಸ್ಥೆ ಬಲಪಡಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ನಿರ್ದೇಶನ ನಿಡಿದೆ.
ಅಮರನಾಥ ವಾರ್ಷಿಕ ತೀರ್ಥಯಾತ್ರೆಗಾಗಿ ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ಅನುಮೋದಿಸಿದ್ದ 350 ಹೆಚ್ಚುವರಿ ಕಂಪನಿಗಳ ಅರೆಸೈನಿಕ ಪಡೆಗಳಲ್ಲಿ 150 ಅರೆಸೈನಿಕ ಪಡೆ ಈಗಾಗಲೇ ಜಮ್ಮು ಮತ್ತು ಕಾಶ್ಮೀರವನ್ನು ತಲುಪಿದೆ. ಉಳಿದ 200 ಅರೆಸೈನಿಕ ಪಡೆ ಜೂನ್ 10 ಮತ್ತು 20ರ ನಡುವೆ ತೆರಳಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಕಂಪನಿಗಳ ನಿಯೋಜನೆಯನ್ನು ಈಗ ತ್ವರಿತಗೊಳಿಸಲಾಗುತ್ತಿದ್ದು, ಜೂನ್ 15 ರ ಮೊದಲು ಕಣಿವೆಯಲ್ಲಿ ನಿಯೋಜಿಸಲಾಗುವುದು. ಉದ್ದೇಶಿತ ಹತ್ಯೆಗಳನ್ನು ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಹಾಗೆ ಕೆಲವು ಪಡೆಯನ್ನು ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳಿಗೂ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಮತ್ತಷ್ಟು ಸೂಚನೆ ನಿಡಿದ್ದು, ಪೊಲೀಸ್ ಠಾಣೆಗಳು ಮತ್ತು ಹೊರಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿಯ ಉಪಸ್ಥಿತಿ ಹೆಚ್ಚಿಸಲು ನಿರ್ದೇಶಿಸಿದೆ. ಇದರಿಂದಾಗಿ ಉಗ್ರರ ಮೇಲೆ ಕಣ್ಗಾವಲು ನಿರ್ವಹಿಸಲು ಶೋಧ ಕಾರ್ಯಾಚರಣೆಗಳು ಮತ್ತು ಪರಿಣಾಮಕಾರಿ ಗಸ್ತುಗಳನ್ನು ಮುಂದುವರಿಸಬಹುದು ಎಂಬುದು ತಂತ್ರ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಮತ್ತು ಬುದ್ಗಾಮ್ ಜಿಲ್ಲೆಗಳಲ್ಲಿ ಉಗ್ರರು ಉದ್ದೇಶಿತ ಗುರಿಗಳನ್ನು ಇಟ್ಟುಕೊಂಡು ಹತ್ಯೆ ಮಾಡುತ್ತಿದ್ದಾರೆ. ಇದು ಅಲ್ಲಿನ ಹಿಂದೂಗಳಲ್ಲಿ ಭಯ ಉಂಟು ಮಾಡಿದೆ.
ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಮರಳಲ್ಲ, ರಾಜ್ಯಾಧ್ಯಕ್ಷೆ, ಮುಖ್ಯಮಂತ್ರಿ ಸ್ಥಾನವೆಲ್ಲ ಊಹಾಪೋಹ: ಕರಂದ್ಲಾಜೆ..!