ತಮಿಳುನಾಡು: ರಸ್ತೆ ಅಪಘಾತ ಉಂಟಾದಾಗ ಜನರು ಗಾಯಾಳುವಿಗೆ ಸಹಾಯ ಮಾಡುವ ಬದಲು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಶೋಕಿಯಾಗಿದೆ. ಇದರಿಂದ ಎಷ್ಟೋ ಬಾರಿ ಉಳಿಯಬೇಕಾದ ಪ್ರಾಣಗಳು ಬಲಿಯಾದ ಉದಾಹರಣೆಗಳಿವೆ.
ಇದನ್ನು ತಡೆಯಲು ತಮಿಳುನಾಡು ಸರ್ಕಾರ ಹೊಸ ಯೋಜನೆ ಜಾರಿ ಮಾಡಿದ್ದು, ರಸ್ತೆ ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಿದರೆ, ನಗದು ಬಹುಮಾನವಾಗಿ 5 ಸಾವಿರ ನೀಡಲಾಗುವುದು ಎಂದು ಘೋಷಿಸಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ಈ ಕುರಿತು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿ ಬಲಿಯಾದವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡಿದ ಜನರಿಗೆ ನಗದು ಬಹುಮಾನವಾಗಿ 5 ಸಾವಿರ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಸ್ತೆ ಅಪಘಾತವಾದಾಗ ಜೀವ ಉಳಿಸಲು ಸಹಾಯ ಮಾಡುವ 48 ಗಂಟೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು 'ಇನ್ನುಯಿರ್ ಕಾಪ್ಪೋನ್' ಯೋಜನೆಯನ್ನು ಜಾರಿ ಮಾಡಿದ್ದರು. ಇದೀಗ ಗಾಯಾಳುಗಳಿಗೆ ಸಹಾಯ ಮಾಡುವ ಜನರಿಗೆ ನಗದು ಬಹುಮಾನ ನೀಡಲಾಗುವುದು ಎಂಬ ಇನ್ನೊಂದು ಯೋಜನೆಯನ್ನು ಜಾರಿ ಮಾಡಿದ್ದಾರೆ.
ಇದನ್ನೂ ಓದಿ: ಯುಪಿಗೆ ಯೋಗಿ, ಮಣಿಪುರಕ್ಕೆ ಬಿರೇನ್ ಸಿಂಗ್: ಗೋವಾ-ಉತ್ತರಾಖಂಡ್ ಸಿಎಂ ಯಾರು?