ಚೆನ್ನೈ(ತಮಿಳುನಾಡು): ದೇಶದಲ್ಲಿ ಕೋವಿಡ್ ಮೂರನೇ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಪ್ರಮುಖವಾಗಿ ತಮಿಳುನಾಡಿನಲ್ಲೂ ಮಹಾಮಾರಿ ಅಬ್ಬರ ಜೋರಾಗಿದೆ. ಇದರ ಮಧ್ಯೆ ಕೂಡ ಇಲ್ಲಿನ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬರುವ ಫೆಬ್ರವರಿ 1ರಿಂದ ಶಾಲಾ-ಕಾಲೇಜುಗಳು ಪುನಾರಂಭ ಮಾಡಲು ಮುಂದಾಗಿದೆ.
ಕೋವಿಡ್ ಅಬ್ಬರದ ನಡುವೆ ಕೂಡ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಫೆ. 1ರಿಂದ ಶಾಲಾ-ಕಾಲೇಜ್ ಪುನಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. 1ರಿಂದ 12ನೇ ತರಗತಿ ಶಾಲೆಗಳು ದೈಹಿಕವಾಗಿ ಆರಂಭಗೊಳ್ಳಲಿವೆ. ಕೋವಿಡ್ ನಿರ್ಬಂಧ ಹಿಂಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಇಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಾಳೆಯಿಂದಲೇ ನೈಟ್ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
-
Tamil Nadu Govt announces reopening of physical classes for students of standard 1 to 12 from Feb 1, decides to lift night curfew from Jan 28
— ANI (@ANI) January 27, 2022 " class="align-text-top noRightClick twitterSection" data="
">Tamil Nadu Govt announces reopening of physical classes for students of standard 1 to 12 from Feb 1, decides to lift night curfew from Jan 28
— ANI (@ANI) January 27, 2022Tamil Nadu Govt announces reopening of physical classes for students of standard 1 to 12 from Feb 1, decides to lift night curfew from Jan 28
— ANI (@ANI) January 27, 2022
ಇದನ್ನೂ ಓದಿರಿ: ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ಗೆ ಕೋವಿಡ್ ಸೋಂಕು
ಇದರ ಜೊತೆಗೆ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು 100 ಜನರಿಗೆ ಅವಕಾಶ ನೀಡಲಾಗಿದ್ದು, ಅಂತ್ಯಕ್ರಿಯೆಯಲ್ಲಿ 50 ಜನರು ಮಾತ್ರ ಭಾಗಿಯಾಗುವಂತೆ ಮಾರ್ಗಸೂಚಿ ಹೊರಡಿಸಿದೆ. ದೇವಸ್ಥಾನ ವಾರದ ಏಳು ದಿನ ಓಪನ್ ಆಗಿರಲಿದ್ದು, ಇಲ್ಲಿಗೆ ತೆರಳುವ ಭಕ್ತರು ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ತಿಳಿಸಿದೆ. ರೆಸ್ಟೋರೆಂಟ್, ಸಲೂನ್, ಸಿನಿಮಾ, ಜಿಮ್, ಯೋಗಾ ಸೆಂಟರ್ಗಳು ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವಂತೆ ಮಾರ್ಗಸೂಚಿ ಹೊರಡಿಸಿದೆ.
ತಮಿಳುನಾಡಿನಲ್ಲಿ ನಿನ್ನೆ ಒಂದೇ ದಿನ ದಾಖಲೆಯ 29 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ ದಾಖಲಾಗಿವೆ. ಕೋವಿಡ್ ಅಬ್ಬರ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲೂ ಈಗಾಗಲೇ ದೈಹಿಕವಾಗಿ ಶಾಲಾ-ಕಾಲೇಜ್ಗಳು ಪುನಾರಂಭಗೊಂಡಿದ್ದು, ಜನವರಿ 24ರಿಂದ ವಿದ್ಯಾರ್ಥಿಗಳು ತರಗತಿಗೆ ತೆರಳುತ್ತಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ