ETV Bharat / bharat

ತಮಿಳುನಾಡಿನಲ್ಲಿ ಭಾರತದ ಮೊದಲ ಸ್ಲೆಂಡರ್ ಲೋರಿಸ್ ಅಭಯಾರಣ್ಯ

ದಿಂಡಿಗಲ್ ಮತ್ತು ಕರೂರ್ ಜಿಲ್ಲೆಗಳಲ್ಲಿ 11,806 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಡವೂರು ಸ್ಲೆಂಡರ್ ಲೋರಿಸ್ ಅಭಯಾರಣ್ಯವನ್ನು ಸ್ಥಾಪಿಸಲಾಗುವುದು ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.

India's first Slender Loris sanctuary
ಕಡವೂರು ಸ್ಲೆಂಡರ್ ಲೋರಿಸ್ ಅಭಯಾರಣ್ಯ
author img

By

Published : Oct 12, 2022, 6:42 PM IST

ಚೆನ್ನೈ: ದಿಂಡಿಗಲ್ ಮತ್ತು ಕರೂರ್ ಜಿಲ್ಲೆಗಳಲ್ಲಿ 11,000 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತಾರವಾದ ಜಾಗದಲ್ಲಿ ಭಾರತದ ಮೊದಲ ಸ್ಲೆಂಡರ್ ಲೋರಿಸ್ ಅಭಯಾರಣ್ಯ ಸ್ಥಾಪಿಸಲು ತಮಿಳುನಾಡು ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಸಂಬಂಧ ಟ್ವೀಟ್​ ಮಾಡಿದ್ದು, ವನ್ಯಜೀವಿ ಸಂರಕ್ಷಣಾ ಪ್ರಯತ್ನದಲ್ಲಿ ಇದು ರಾಜ್ಯದ ಮತ್ತೊಂದು ಮೈಲಿಗಲ್ಲು ಎಂದು ಹೇಳಿದ್ದಾರೆ.

ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ 11,806 ಹೆಕ್ಟೇರ್ ಪ್ರದೇಶದಲ್ಲಿ ಭಾರತದ ಮೊದಲ "ಕಡವೂರ್ ಸ್ಲೆಂಡರ್ ಲೋರಿಸ್ ಅಭಯಾರಣ್ಯ" ವನ್ನು ಸ್ಥಾಪಿಸಲು ತಮಿಳುನಾಡು ಸರ್ಕಾರ ಅಧಿಸೂಚಿಸಿದೆ ಎಂದು ಘೋಷಿಸಲು ಸಂತೋಷವಾಗಿದೆ. ಸ್ಲೆಂಡರ್ ಲೋರಿಸ್ ಸಂರಕ್ಷಣೆಯಲ್ಲಿ ಅಭಯಾರಣ್ಯವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇದರ ಸಂರಕ್ಷಣಾ ಪ್ರಯತ್ನದಲ್ಲಿ ಇದು ಮತ್ತೊಂದು ಮೈಲಿಗಲ್ಲು" ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

  • Tamil Nadu Govt notified India’s first 'Kadavur Slender Loris Sanctuary' covering an area of 11,806 hectares in Karur & Dindigul Districts. The sanctuary will play an important role in the conservation of Slender Loris & yet another milestone in TN's conservation efforts: TN CMO pic.twitter.com/TH5SJhXyQj

    — ANI (@ANI) October 12, 2022 " class="align-text-top noRightClick twitterSection" data=" ">

ಚಿಕ್ಕದಾಗಿರುವ ಲೋರಿಸ್​ಗಳು ಸಸ್ತನಿಗಳಾಗಿವೆ. ಅವು ತಮ್ಮ ಜೀವನದ ಬಹುಪಾಲು ಸಮಯ ಮರಗಳ ಮೇಲೆಯೇ ಕಳೆಯುತ್ತವೆ. ಇವು ಕೃಷಿ ಭೂಮಿಯಲ್ಲಿನ ಕೀಟಗಳನ್ನು ತಿನ್ನುವ ಮೂಲಕ ರೈತರಿಗೆ ಉಪಯೋಗಕಾರಿಯಾಗಿವೆ. ಭೂಮಂಡಲದ ಪರಿಸರ ವ್ಯವಸ್ಥೆಯಲ್ಲಿ ಈ ಪ್ರಭೇದವು ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: 'ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ನಿಲ್ಲಿಸಿ': ಅಮಿತ್ ಶಾ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಇಂಟರ್​​ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ (IUCN) ಪ್ರಕಾರ, ಇದು ಅಳಿವಿನಂಚಿನಲ್ಲಿರುವ ಪ್ರಬೇದವೆಂದು ಪಟ್ಟಿ ಮಾಡಲಾಗಿದೆ. ನಾವು ಅಳಿವಿನಂಚಿನಲ್ಲಿರುವ ಸ್ಲೆಂಡರ್ ಲೋರಿಸ್ ಪ್ರಭೇದವನ್ನು ಸಂರಕ್ಷಿಸಲು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಕರೂರ್ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ 11,806 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸ್ಲೆಂಡರ್ ಲೋರಿಸ್‌ನ ಪ್ರಮುಖ ಆವಾಸಸ್ಥಾನವಾಗಿ ಗುರುತಿಸಲಾಗಿದೆ.

ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವು ವನ್ಯಜೀವಿ (ಸಂರಕ್ಷಣೆ) ಕಾಯಿದೆ, 1972 ರ ನಿಬಂಧನೆಗಳ ಅಡಿ "ಕಡವೂರ್ ಸ್ಲೇನರ್ ಲೋರಿಸ್ ಅಭಯಾರಣ್ಯ" ಕ್ಕೆ ಅಧಿಸೂಚನೆ ನೀಡಿದೆ. ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಗೆ ಅಧಿಸೂಚನೆ ಹೊರಡಿಸಲಾಗಿದೆ. ತಮಿಳುನಾಡು ಸರ್ಕಾರವು ವಿಶೇಷವಾಗಿ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗಾಗಿ ಹಲವಾರು ಪ್ರವರ್ತಕ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.