ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಹೊಸದಾಗಿ ಸರ್ಕಾರ ರಚನೆ ಮಾಡಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಇದೇ ಮೊದಲ ಸಲ ಕೃಷಿ ಬಜೆಟ್ ಮಂಡನೆ ಮಾಡಿದೆ. ಅನ್ನದಾತರ ಹಿತರಕ್ಷಣೆ ಹಾಗೂ ಕೃಷಿ ವಲಯದಲ್ಲಿ ಮತ್ತಷ್ಟು ಅಭಿವೃದ್ಧಿ ತರುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ತಮಿಳುನಾಡು ಕೃಷಿ ಸಚಿವ ಎಂಆರ್ಕೆ ಪನ್ನಿರಸೇಲ್ವಂ ಬಜೆಟ್ ಮಂಡನೆ ಮಾಡಿದ್ದು, 2021-22ನೇ ಸಾಲಿನ ಬಜೆಟ್ನಲ್ಲಿ ಕೃಷಿಗಾಗಿ Rs.34,220.65 ಕೋಟಿ ರೂ. ಮೀಸಲು ಇಟ್ಟಿದ್ದಾರೆ. ಪ್ರಮುಖವಾಗಿ ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆ ಅಭಿವೃದ್ಧಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ರೇಷ್ಮೆ ಕೃಷಿ ಮತ್ತು ಅರಣ್ಯ ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
-
Tamil Nadu Agriculture &Farmers Welfare Min MRK Panneerselvam presented 1st-ever exclusive budget for agriculture in Assembly earlier today.
— ANI (@ANI) August 14, 2021 " class="align-text-top noRightClick twitterSection" data="
I dedicate this budget to protesting farmers in Delhi. Cultivation area in TN to be increased from 60%to75%(11.75 lakh hectares), he said pic.twitter.com/OwFakzRK1V
">Tamil Nadu Agriculture &Farmers Welfare Min MRK Panneerselvam presented 1st-ever exclusive budget for agriculture in Assembly earlier today.
— ANI (@ANI) August 14, 2021
I dedicate this budget to protesting farmers in Delhi. Cultivation area in TN to be increased from 60%to75%(11.75 lakh hectares), he said pic.twitter.com/OwFakzRK1VTamil Nadu Agriculture &Farmers Welfare Min MRK Panneerselvam presented 1st-ever exclusive budget for agriculture in Assembly earlier today.
— ANI (@ANI) August 14, 2021
I dedicate this budget to protesting farmers in Delhi. Cultivation area in TN to be increased from 60%to75%(11.75 lakh hectares), he said pic.twitter.com/OwFakzRK1V
4,508.23 ಕೋಟಿ ರೂ. ರೈತರ ವಿದ್ಯುತ್ ಬಳಕೆಗೋಸ್ಕರ ವಿನಯೋಗ ಮಾಡಲಾಗುವುದು ಎಂದು ತಿಳಿಸಿರುವ ಸಚಿವರು, ರೈತರು ಬಳಕೆ ಮಾಡುವ ಪಂಪ್ಸೆಟ್ಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ತಿಳಿಸಿದ್ದಾರೆ. 1,245. 45 ಕೋಟಿ ರೂ. ಕೃಷಿ ಇಲಾಖೆ ಅಭಿವೃದ್ಧಿಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಯೋಜನೆಗಳಿಗೆ ಈಗಾಗಲೇ ಸ್ಟಾಲಿನ್ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಇಂದಿನ ಬಜೆಟ್ ಕೂಡ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರಿಗೆ ಅರ್ಪಣೆ ಮಾಡಿದೆ.
ಇದನ್ನೂ ಓದಿರಿ: ಅಬಕಾರಿ ಸುಂಕ ಕಡಿತ : ತಮಿಳುನಾಡಿನಲ್ಲಿ 100 ಗಡಿಯಿಂದ ಕೆಳಗಿಳಿದ ಪೆಟ್ರೋಲ್ ದರ
ಕೃಷಿ ಬಜೆಟ್ನಲ್ಲಿ ಪ್ರಮುಖವಾಗಿ 16 ಅಂಶಗಳ ಮೇಲೆ ಕೆಲಸ ಮಾಡಲು ನಿರ್ಧರಿಸಲಾಗಿದ್ದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಮುಂದಾಗಿರುವುದಾಗಿ ತಿಳಿಸಿದರು. ಜೊತೆಗೆ ಕೃಷಿ ವಲಯದತ್ತ ಯುವಕರನ್ನ ಸೆಳೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು. ನಿನ್ನೆ ಬಜೆಟ್ ಮಂಡನೆ ಮಾಡಿದ್ದ ಸ್ಟಾಲಿನ್ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 3 ರೂಪಾಯಿ ಕಡಿತಗೊಳಿಸುವುದಾಗಿ ತಿಳಿಸಿದೆ.