ಚೆನ್ನೈ: ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ನೀಡಲಾಗುವುದು ಮತ್ತು ಮೊದಲ ಹಂತದಲ್ಲಿ ಈ ಯೋಜನೆಯನ್ನು ಕೆಲ ಆಯ್ದ ಮುನ್ಸಿಪಾಲಿಟಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಕಳೆದ ಮೇ 7ರಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿಧಾನಸಭೆಯಲ್ಲಿ ಘೋಷಿಸಿದ್ದರು.
ಈ ಯೋಜನೆಯ ಸರ್ಕಾರಿ ಆದೇಶವು ಇಂದು ಹೊರಬಿದ್ದಿದೆ. ಮೊದಲ ಹಂತದಲ್ಲಿ 2022-2023 ರ ಸಾಲಿಗೆ ಉಪಹಾರ ಯೋಜನೆಯನ್ನು 1,14,095 ಮಕ್ಕಳನ್ನು ಒಳಗೊಂಡ ಕಾರ್ಪೊರೇಶನ್, ಮುನ್ಸಿಪಾಲಿಟಿ, ಗ್ರಾಮ ಪಂಚಾಯತ್ ಮತ್ತು ಕುಗ್ರಾಮಗಳ 1,545 ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ 33.56 ಕೋಟಿ ರೂಪಾಯಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ.
ಟಿಫಿನ್ನಲ್ಲಿ ಏನಿರಲಿದೆ? : ಪ್ರತಿ ವಿದ್ಯಾರ್ಥಿಗೆ ಪ್ರತಿದಿನ 50 ಗ್ರಾಂ ಅಕ್ಕಿ ಅಥವಾ ರವೆ ಅಥವಾ ಸ್ಥಳೀಯವಾಗಿ ಬೆಳೆದ ಸಣ್ಣ ಆಹಾರ ಧಾನ್ಯ, 15 ಗ್ರಾಂ ಬೇಳೆಯ ಸಾಂಬಾರು ಮತ್ತು ಸ್ಥಳೀಯವಾಗಿ ಸಿಗುವ ತರಕಾರಿಗಳಿಂದ ತಯಾರಿಸಿದ ಟಿಫಿನ್ ನೀಡಲಾಗುವುದು. ವಾರದಲ್ಲಿ ದಿನಕ್ಕೆರಡು ಬಾರಿ ಸ್ಥಳೀಯವಾಗಿ ಸಿಗುವ ಧಾನ್ಯಗಳಿಂದ ತಯಾರಿಸಿದ ಆಹಾರ ನೀಡುವ ಪ್ರಸ್ತಾವನೆಯಿದೆ.
ಬೆಳಗಿನ ಉಪಾಹಾರದ ಮೆನು: ಸೋಮವಾರ : ರವಾ ಉಪ್ಮಾ ಮತ್ತು ತರಕಾರಿ ಸಾಂಬಾರ್, ಶಾವಿಗೆ ಉಪ್ಮಾ ಮತ್ತು ತರಕಾರಿ ಸಾಂಬಾರ್, ಅನ್ನ ಉಪ್ಮಾ ಮತ್ತು ತರಕಾರಿ ಸಾಂಬಾರ್, ಗೋಧಿ ಉಪ್ಮಾ ಮತ್ತು ತರಕಾರಿ ಸಾಂಬಾರ್
ಮಂಗಳವಾರ : ರವಾ ತರಕಾರಿ ಖಿಚಡಿ, ಶಾವಿಗೆ ತರಕಾರಿ ಖಿಚಡಿ, ಜೋಳದ ತರಕಾರಿ ಖಿಚಡಿ, ಗೋಧಿ ರವಾ ತರಕಾರಿ ಖಿಚಡಿ
ಬುಧವಾರ: ರವಾ ಪೊಂಗಲ್ ಮತ್ತು ತರಕಾರಿ ಸಾಂಬಾರ್, ವೆನ್ ಪೊಂಗಲ್ ಮತ್ತು ತರಕಾರಿ ಸಾಂಬಾರ್
ಗುರುವಾರ: ಶಾವಿಗೆ ಉಪ್ಮಾ ಮತ್ತು ತರಕಾರಿ ಸಾಂಬಾರ್, ಅನ್ನ ಉಪ್ಮಾ ಮತ್ತು ತರಕಾರಿ ಸಾಂಬಾರ್, ರವಾ ಉಪ್ಮಾ ಮತ್ತು ತರಕಾರಿ ಸಾಂಬಾರ್, ಗೋಡುಮೈರವ ಉಪ್ಮಾ ಮತ್ತು ತರಕಾರಿ ಸಾಂಬಾರ್
ಶುಕ್ರವಾರ: ಮಂಗಳವಾರದ ತಿನಿಸು
ಇದನ್ನು ಓದಿ:ಆಕೆ ಮಹಿಳೆಯಲ್ಲ ಪುರುಷ.. ಈಗ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ನೇಮಕ