ತಿರುವಳ್ಳೂರ್(ತಮಿಳುನಾಡು): ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಫಲಿತಾಂಶ ಕಳೆದ ರಾತ್ರಿ ಪ್ರಕಟಗೊಂಡಿದ್ದು, 9.93 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್ನ ಇಂದಿರಾ ನಗರದಲ್ಲಿ ನಡೆದಿದೆ.
19 ವರ್ಷದ ವಿದ್ಯಾರ್ಥಿನಿ ಫಲಿತಾಂಶದಿಂದ ನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದಿದ್ದಾಳೆ. ಮೃತಳನ್ನು ಲಕ್ಷಣ ಸ್ವೇಧ ಎಂದು ಗುರುತಿಸಲಾಗಿದೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೋಸ್ಕರ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಇದನ್ನೂ ಓದಿ: NEET UG 2022 ಫಲಿತಾಂಶ ಪ್ರಕಟ: ಕರ್ನಾಟಕದ ಹೃಷಿಕೇಶ್ಗೆ 3ನೇ ಸ್ಥಾನ
ನೀಟ್ ಪರೀಕ್ಷೆಯಲ್ಲಿ ರಾಜಸ್ಥಾನದ ತನಿಷ್ಕಾ ಪ್ರಥಮ ಸ್ಥಾನ ಪಡೆದರೆ, ದೆಹಲಿಯ ವಸ್ತ ಆಶೀಶ್ ಬಾತ್ರಾ ದ್ವಿತೀಯ ಮತ್ತು ಕರ್ನಾಟಕದ ರಿಷಿಕೇಶ್ ನಾಗಭೂಷಣ್ ಗಂಗುಲೆ 3ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
17.64 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂಗ್ಲಿಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು.