ಚೆನ್ನೈ (ತಮಿಳುನಾಡು): ನೆರೆಯ ರಾಜ್ಯ ತಮಿಳುನಾಡಿನಲ್ಲಿ ಲಾಕ್ಡೌನ್ ವಿಸ್ತರಣೆಯಾಗಿದ್ದು, ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆ ಕೆಲವೊಂದು ಸಡಿಲಿಕೆಗಳನ್ನು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಜುಲೈ 19ರವರೆಗೆ ಲಾಕ್ಡೌನ್ ವಿಸ್ತರಣೆಯಾಗಿದ್ದು, ಹೊಸ ಮಾರ್ಗಸೂಚಿಯಂತೆ ಹೋಟೆಲ್, ಟೀ ಶಾಪ್, ಬೇಕರಿ, ರಸ್ತೆ ಬದಿಯ ಅಂಗಡಿಗಳಲ್ಲಿ ಶೇ.50ರಷ್ಟು ಸಾಮರ್ಥ್ಯದೊಂದಿಗೆ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಬಹುದಾಗಿದೆ.
ಈ ಮೊದಲಿನಂತೆ ಶಾಲೆ, ಕಾಲೇಜು, ಥಿಯೇಟರ್, ವೈನ್ ಶಾಪ್ಗಳು, ಮೃಗಾಲಯಗಳು ಮತ್ತು ಸ್ವಿಮ್ಮಿಂಗ್ ಪೂಲ್ಗಳನ್ನು ಮುಚ್ಚಲಾಗುತ್ತದೆ. ಅದರ ಜೊತೆಗೆ ಅಂತಾರಾಜ್ಯ ಸಾರಿಗೆ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನಿರಾಕರಿಸಲಾಗಿದೆ.
ಪಾಂಡಿಚೇರಿಗೆ ತೆರಳುವ ಬಸ್ಗಳಿಗೆ ಅವಕಾಶ ಇರಲಿದೆ. ರಾಜ್ಯದಲ್ಲಿ ನಡೆಸಲಾಗುವ ಕೇಂದ್ರ ಮತ್ತು ರಾಜ್ಯದ ನೇಮಕಾತಿ ಪರೀಕ್ಷೆಗಳಿಗೆ ಅವಕಾಶ ನೀಡಲಾಗಿದೆ. ಇನ್ನು, ತಮಿಳುನಾಡಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಶುಕ್ರವಾರ ಹೊಸದಾಗಿ 3,039 ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ 33 ಸಾವಿರ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಕಾಂಟ್ರೋವರ್ಸಿ ಇಷ್ಟವಿಲ್ಲ, ವಿವಾದಕ್ಕೆ ಅವರೇ ಅಂತ್ಯವಾಡಿದ್ರೆ ನಂಗೆ ಸಂತೋಷ : ಸಂಸದೆ ಸುಮಲತಾ ಅಂಬಿ