ತಂಜಾವೂರು(ತಮಿಳುನಾಡು): ಆಟೋ ಚಾಲಕನಾಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೋರ್ವ ಇದೀಗ ತಮಿಳುನಾಡಿನ ಕುಂಭಕೋಣಂ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 47 ವರ್ಷದ ಶರವಣನ್ ಈ ಮಹತ್ವದ ಹುದ್ದೆ ಅಲಂಕರಿಸಿರುವ ವ್ಯಕ್ತಿ.
![Auto driver turns mayor in kumbakonam](https://etvbharatimages.akamaized.net/etvbharat/prod-images/14649601_twdfdfdfdfd.jpg)
ನಗರಸಭೆಯಾಗಿದ್ದ ಕುಂಭಕೋಣಂ 2020ರಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ಆಗಿ ಬದಲಾಗಿದ್ದು, ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಡಿಎಂಕೆ- ಕಾಂಗ್ರೆಸ್ ಮೈತ್ರಿ ಭರ್ಜರಿ ಗೆಲುವು ದಾಖಲಿಸಿದೆ. 48 ವಾರ್ಡ್ಗಳಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ 42 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಇದೀಗ ಮೇಯರ್ ಆಗಿ ಸರವಣನ್ ಆಯ್ಕೆಯಾಗಿದ್ದಾರೆ.
![Auto driver turns mayor in kumbakonam](https://etvbharatimages.akamaized.net/etvbharat/prod-images/14649601_twdfdfdfdfdfd.jpg)
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ದಾಖಲಿಸಿರುವ ಸರವಣನ್ ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಇದೇ ಕಾರಣಕ್ಕಾಗಿ ತಮಿಳುನಾಡು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ ಎಸ್ ಅಲ್ಗಿರಿ ಇವರ ಹೆಸರನ್ನ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ಸರವಣನ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.
![Auto driver turns mayor in kumbakonam](https://etvbharatimages.akamaized.net/etvbharat/prod-images/14649601_twdfdfddfd.jpg)
ಇದನ್ನೂ ಓದಿರಿ: 28ನೇ ವರ್ಷಕ್ಕೆ ಮೇಯರ್ ಪಟ್ಟ! ಮಹತ್ವದ ಹುದ್ದೆ ಅಲಂಕರಿಸಿದ ದಲಿತ ಮಹಿಳೆ
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಸರವಣನ್ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಆರನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಇವರು, ಸ್ಥಳೀಯ ಜನರ ಸಮಸ್ಯೆ ಬಗೆಹರಿಸುವಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ. ಮೇಯರ್ ಆಗಿ ಆಯ್ಕೆಯಾದ ಬಳಿಕ ಸರವಣನ್ ಪ್ರಮಾಣವಚನ ಸ್ವೀಕಾರ ಮಾಡಲು ಆಟೋದಲ್ಲಿ ಪಾಲಿಕೆಗೆ ಆಗಮಿಸಿ, ಗಮನ ಸೆಳೆದರು.
ಚೆನ್ನೈ ಕಾರ್ಪೊರೇಷನ್ಗೆ ಮೇಯರ್ ಆಗಿ 28 ವರ್ಷದ ದಲಿತ ಯುವತಿ ಪ್ರಿಯಾ ಆಯ್ಕೆಯಾಗಿದ್ದು, ಶುಕ್ರವಾರವಷ್ಟೇ ಅಧಿಕಾರ ಸ್ವೀಕಾರ ಮಾಡಿದ್ದಾರೆ.