ETV Bharat / bharat

ಉಕ್ರೇನ್‌ನಲ್ಲಿ ಸಾವಿಗೀಡಾಗಿದ್ದ ನವೀನ್​: ಘಟನೆ ವಿವರಿಸಿದ ತಮಿಳುನಾಡು ವಿದ್ಯಾರ್ಥಿನಿ - ನವೀನ್​ ಸಾವಿನ ಬಗ್ಗೆ ಮಾಹಿತಿ ನೀಡಿದ ತಮಿಳು ಯುವತಿ

ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ಹಾವೇರಿಯ ಯುವಕ ನವೀನ್​ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಶೆಲ್‌ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದರು. ಅಂದಿನ ಆ ದುರ್ಘಟನೆಯನ್ನು ತಮಿಳುನಾಡಿನ ವಿದ್ಯಾರ್ಥಿನಿ ಬಹಳ ಬೇಸರದಿಂದಲೇ ವಿವರಿಸಿದ್ದಾರೆ.

ತಮಿಳು ವಿದ್ಯಾರ್ಥಿನಿ
ತಮಿಳು ವಿದ್ಯಾರ್ಥಿನಿ
author img

By

Published : Mar 7, 2022, 9:57 PM IST

ಕೊಯಮತ್ತೂರು: ಕಳೆದ ಫೆ.24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿತ್ತು. ಈಗಲೂ ಉಭಯ ದೇಶಗಳು ನಿರಂತರ ದಾಳಿಯಲ್ಲಿ ನಿರತವಾಗಿವೆ.

ಇದೇ ವೇಳೆ ಮಾರ್ಚ್ 1ರಂದು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಖಾರ್ಕೀವ್ ಮೇಲೆ ರಷ್ಯಾ ನಡೆಸಿದ ಶೆಲ್‌ ದಾಳಿಯಲ್ಲಿ ಕರ್ನಾಟಕ ಮೂಲದ ನವೀನ್ ಶೇಖರಪ್ಪ ಗ್ಯಾನಗೌಡರ್ (22) ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೇ, ಈ ಘಟನೆಯನ್ನು ಕಂಡಿರುವ ಕೊಯಮತ್ತೂರು ಮೂಲದ ತಮಿಳು ಯುವತಿ ನಂದಿತಾ ಕಣಗರಾಜ್​ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ಖಾರ್ಕೀವ್ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿಷಯದಲ್ಲಿ ಓದುತ್ತಿದ್ದೇನೆ. ನಾವು ಯುದ್ಧ ಪ್ರಾರಂಭವಾದ ದಿನದಿಂದಲೂ ಬಾಂಬ್ ಶಬ್ದಗಳನ್ನು ಕೇಳುತ್ತಿದ್ದೆವು. ಆಹಾರ ಮತ್ತು ನೀರಿನ ಕೊರತೆ ಇದ್ದ ಕಾರಣ ನಮ್ಮ ಕೋಣೆಯಿಂದ ಹೊರಬಂದೆವು. ಮಾರ್ಚ್ 1 ರಂದು ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟದ ಶಬ್ದ ಕೇಳಿಸಿತು. ನಾವು ಹೆದರಿ ಅಲ್ಲಿಂದ ಓಡಿ ಹೋಗಿ ಮೆಟ್ರೋ ನಿಲ್ದಾಣದಲ್ಲಿ ಅಡಗಿಕೊಂಡೆವು. ಆಗ ನಮಗೆ ತಿಳಿದಿದ್ದು ಆ ಬಾಂಬ್ ಸ್ಫೋಟದಲ್ಲಿ ನಮ್ಮ ಸೀನಿಯರ್​ ನವೀನ್ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ.

ಇದನ್ನೂ ಓದಿ: 'ಪ್ರತಿ ನಿಮಿಷವೂ ಅಮೂಲ್ಯ...' ನವೀನ್ ಸಾವಿನ ಬೆನ್ನಲ್ಲೇ ಕೇಂದ್ರದ ವಿರುದ್ಧ ಕಾಂಗ್ರೆಸ್, ಎಎಪಿ ವಾಗ್ದಾಳಿ

ಆತನ ಸಾವಿನಿಂದ ನಮಗೆ ತುಂಬಾ ಬೇಸರವಾಗಿದೆ. ಭಾಷೆಯ ಅಡೆತಡೆಗಳ ಹೊರತಾಗಿಯೂ ಅನೇಕ ಜನರು ನಮ್ಮನ್ನು ನೋಡಿಕೊಂಡಿದ್ದಾರೆ. ಆದರೆ, ನಮಗೆ ಸಹಾಯ ಮಾಡಿದವರು ಸಾವಿಗೀಡಾಗಿದ್ದನ್ನು ನೋಡುವುದು ತುಂಬಾ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.