ETV Bharat / bharat

ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ಎಂದರೇನು?.. ಇಲ್ಲಿದೆ ಸಂಪೂರ್ಣ ಮಾಹಿತಿ - ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್

ಡಿಜಿಟಲ್ ಕರೆನ್ಸಿಯಲ್ಲಿ ಸಾಂಸ್ಥಿಕ ಆಸಕ್ತಿಯು ಈ ವರ್ಷ ವ್ಯಾಪಕವಾಗಿ ಕಂಡು ಬಂದಿದೆ. ಇದರ ಹೆಚ್ಚಿನ ಆದಾಯವು ಭಾರತದ ಸಣ್ಣ ಚಿಲ್ಲರೆ ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಇದರ ಪರಿಣಾಮವಾಗಿ, ದೇಶದಲ್ಲಿ ಬಿಟ್‌ಕಾಯಿನ್ ಕರೆನ್ಸಿ ವಿನಿಮಯ ಕೇಂದ್ರಗಳು ಕಳೆದ ಕೆಲವು ತಿಂಗಳ ಅಂತರದಲ್ಲಿ ವ್ಯಾಪಾರದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡಿದೆ. ಬಿಟ್‌ಕಾಯಿನ್‌ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಿದ್ದರೆ, ಈ ಬಗೆಗಿನ ಮಾಹಿತಿಯ ಇಲ್ಲಿದೆ.

what-is-cryptocurrency-and-bitcoin
ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ಎಂದರೇನು?
author img

By

Published : Feb 10, 2021, 6:56 PM IST

ನವದೆಹಲಿ: 2020ರ ಕ್ಯಾಲೆಂಡರ್ ವರ್ಷದಲ್ಲಿ ಸುಮಾರು ಶೇ 170ರಷ್ಟು ಏರಿಕೆಯಾದ ಬಳಿಕ ಬಿಟ್‌ಕಾಯಿನ್ ಬೆಲೆ, ಈ ವಾರ ಸಾರ್ವಕಾಲಿಕ ಗರಿಷ್ಠ ಮಟ್ಟ 20,000 ಡಾಲರ್​​ಗಳಿಗೆ ಏರಿಕೆಯಾಗಿದೆ. ಡಿಜಿಟಲ್ ಕರೆನ್ಸಿಯಲ್ಲಿ ಸಾಂಸ್ಥಿಕ ಆಸಕ್ತಿಯು ಈ ವರ್ಷ ವ್ಯಾಪಕವಾಗಿ ಕಂಡು ಬಂದಿದೆ.

ಇದರ ಹೆಚ್ಚಿನ ಆದಾಯವು ಭಾರತದ ಸಣ್ಣ ಚಿಲ್ಲರೆ ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಇದರ ಪರಿಣಾಮವಾಗಿ, ದೇಶದಲ್ಲಿ ಬಿಟ್‌ಕಾಯಿನ್ ಕರೆನ್ಸಿ ವಿನಿಮಯ ಕೇಂದ್ರಗಳು ಕಳೆದ ಕೆಲವು ತಿಂಗಳ ಅಂತರದಲ್ಲಿ ವ್ಯಾಪಾರದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡಿದೆ.

ಬಿಟ್​​ಕಾಯಿನ್ ಎಂದರೇನು?

ಬಿಟ್ ಕಾಯಿನ್ 2009ರಲ್ಲಿ ಬೆಳಕಿಗೆ ಬಂದ ಮೊದಲ ಕ್ರಿಪ್ಟೋ ಕರೆನ್ಸಿಗಳಲ್ಲಿ ಒಂದು. ಭೌತಿಕವಾಗಿ ಅಸ್ತಿತ್ವವಿಲ್ಲದ ಸಂಪೂರ್ಣ ಡಿಜಿಟಲ್ ಕರೆನ್ಸಿ. ಡಿಜಿಟಲ್​ ಕರೆನ್ಸಿಗೆ ಇರುವ ನಿಯಮಗಳನ್ನು ಉಪಯೋಗಿಸಲಾಗುತ್ತದೆ. ಇದೊಂದು ಅತ್ಯಂತ ಸೂಕ್ಷ್ಮ ಹಾಗೂ ವಿಕೇಂದ್ರೀಕೃತ ಡಿಜಿಟಲ್​ ಕರೆನ್ಸಿಯಾಗಿದೆ. ಇದರ ಮೂಲ ಮೌಲ್ಯ ಬ್ಲಾಕ್‌ಚೈನ್ ತಂತ್ರಜ್ಞಾನದಿಂದ ಆಧಾರಿತವಾಗುತ್ತದೆ.

ಭಾರತದಲ್ಲಿ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಕಾನೂನುಬದ್ಧವೇ?

ಭಾರತದಲ್ಲಿ ಬಿಟ್‌ಕಾಯಿನ್‌ ಮೇಲೆ ಹೂಡಿಕೆ ಮಾಡುವುದು ನಿಷೇಧಿತವಲ್ಲ. ಇದನ್ನು ಯಾವುದೇ ಕೇಂದ್ರ ಪ್ರಾಧಿಕಾರ ನಿಯಂತ್ರಿಸುವುದಿಲ್ಲ. ಭಾರತದ ಸುಪ್ರೀಂಕೋರ್ಟ್ 2019ರ ಫೆಬ್ರವರಿ 25ರ ತನ್ನ ತೀರ್ಪಿನಲ್ಲಿ, 'ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿ ನಿಯಂತ್ರಣ ನೀತಿಗಳನ್ನು ಜಾರಿಗೆ ತರುವಂತೆ ಸರ್ಕಾರವನ್ನು ಕೋರಿತ್ತು. ಆದರೆ ಅಂದಿನಿಂದ ಇಂದಿನ ತನಕ ಯಾವುದೇ ನೀತಿಯ ಪ್ರಗತಿ ಕಂಡುಬಂದಿಲ್ಲ.

ಕ್ರಿಪ್ಟೋ ಕರೆನ್ಸಿಗಳಲ್ಲಿ ವ್ಯಾಪಾರ ಮಾಡಿ, ಯಾವುದೇ ಕಾನೂನು ಉಲ್ಲಂಘಿಸದಿದ್ದರೂ ವಹಿವಾಟಿನ ವೇಳೆ ವಿವಾದ ಉಂಟಾದರೆ ಯಾವುದೇ ನಿಯಮಗಳು, ಮಾರ್ಗಸೂಚಿಗಳ ಅಥವಾ ಸರ್ಕಾರದ ಬೆಂಬಲವಿಲ್ಲ.

ಭಾರತದಲ್ಲಿ ಬಿಟ್‌ಕಾಯಿನ್‌ಗಳನ್ನು ಎಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು?

ವಾಜಿರ್ ಎಕ್ಸ್, ಕಾಯಿನ್ ಸ್ವಿಚ್, ಜೆಬ್‌ಪೇ, ಕಾಯಿನ್ ಡಿಎಕ್ಸ್‌ (Wazir X, CoinSwitch, ZebPay, CoinDcx) ಪ್ಲಾಟ್​ಫಾರ್ಮ್​ನಂತಹ ವಿನಿಮಯ ಕೇಂದ್ರಗಳಲ್ಲಿ ಬಿಟ್‌ಕಾಯಿನ್‌ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ವಿನಿಮಯ ಕೇಂದ್ರಗಳಲ್ಲಿ ಟ್ರೇಡಿಂಗ್ ಖಾತೆ ತೆರೆಯಬೇಕು. ಬ್ಯಾಂಕ್ ಖಾತೆಯಿಂದ ಟ್ರೇಡಿಂಗ್​ ಖಾತೆಗೆ ಹಣ ವರ್ಗಾಯಿಸಬಹುದು ಮತ್ತು ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿ ಖರೀದಿ ಮತ್ತು ಮಾರಾಟ ಮಾಡಬಹುದು.

ಬಿಟ್​ಕಾಯಿನ್​ ನಿಯಮಗಳು ಸರ್ಕಾರದಿಂದ ನಿಯಂತ್ರಿತವಾಗುತ್ತವೆಯೇ?

ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳು ಪ್ರಸ್ತುತ ಸ್ವಯಂ ನಿಯಂತ್ರಕ ಸಂಸ್ಥೆ (ಎಸ್‌ಆರ್‌ಒ) ಚೌಕಟ್ಟಿನಡಿಯಲ್ಲಿ ನಡೆಯುತ್ತಿವೆ. ಯಾವುದೇ ಸರ್ಕಾರಿ ನಿಯಂತ್ರಕ ಚೌಕಟ್ಟಿನ ವ್ಯಾಪ್ತಿಗೆ ಬರುವುದಿಲ್ಲ. ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸಲು ಯಾವುದೇ ಪರವಾನಗಿ ಅಗತ್ಯವಿಲ್ಲ.

ಬಿಟ್‌ಕಾಯಿನ್ ಟ್ರೇಡಿಂಗ್​ ಖಾತೆ ತೆರೆಯಲು ಯಾವ ದಾಖಲೆ ಒದಗಿಸಬೇಕು?

ಕಾನೂನುಬದ್ಧ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳು ಬಿಟ್‌ಕಾಯಿನ್‌ ಖರೀದಿ ಮತ್ತು ಮಾರಾಟ ಮಾಡಲು ಗ್ರಾಹಕರು ತಮ್ಮ ಕೆವೈಸಿ ವಿವರ, ಬ್ಯಾಂಕ್ ಖಾತೆ ಮತ್ತು ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆ ನೀಡುವಂತೆ ಕೇಳುತ್ತವೆ. ಕೆವೈಸಿ ಪರಿಶೀಲನೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಮೂಲಕ ಸ್ವೀಕರಿಸಲಾಗುತ್ತದೆ. ಹಣವನ್ನು ನೋಂದಾಯಿತ ಬ್ಯಾಂಕ್ ಖಾತೆಗೆ ಮತ್ತು ಬೇರೆ ಯಾವುದೇ ಮೂಲದಿಂದ ವರ್ಗಾಯಿಸಬಹುದು.

ಭಾರತದಲ್ಲಿ ಬಿಟ್‌ಕಾಯಿನ್ ಹೂಡಿಕೆಯಿಂದ ಲಾಭಪಡೆಯುವುದು ಹೇಗೆ?

ಹೂಡಿಕೆದಾರರು ಬಿಟ್‌ಕಾಯಿನ್‌ ಖರೀದಿಸಿ ಮಾರಾಟ ಮಾಡಿದರ ಮೇಲೆ ಗಳಿಸಿದ ಲಾಭದ ಬಂಡವಾಳಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ವ್ಯಾಪಾರಿ ಆಗಿದ್ದರೆ ಲಾಭವು ನಿಮ್ಮ ವ್ಯವಹಾರದ ಆದಾಯದ ಒಂದು ಭಾಗವಾಗುತ್ತದೆ. ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ.

ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳು ತೆರಿಗೆ ಅಧಿಕಾರಿಗಳ ಜತೆ ಮಾಹಿತಿ ಹಂಚಿಕೊಳ್ಳುತ್ತವೆಯೇ?

ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳು ಎಲ್ಲಾ ಖರೀದಿ ಮತ್ತು ಮಾರಾಟ ಚಟುವಟಿಕೆ ಒಳಗೊಂಡು ಗ್ರಾಹಕರ ದಾಖಲೆಗಳನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿದೆ. ಈ ಮಾಹಿತಿಯನ್ನು ತೆರಿಗೆ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬಹುದು. ಇದರರ್ಥ ಆದಾಯ ತೆರಿಗೆ ಇಲಾಖೆಯು ದೇಶದಲ್ಲಿ ಬಿಟ್‌ಕಾಯಿನ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವವರ ಮಾಹಿತಿ ಪಡೆಯುತ್ತದೆ.

ಬಿಟ್‌ಕಾಯಿನ್ ಮೌಲ್ಯ ಏಕೆ ತಡವಾಗಿ ಏರಿಕೆಯಾಗಿದೆ?

ಕಳೆದ 10 ವರ್ಷಗಳಲ್ಲಿ ಬಿಟ್‌ಕಾಯಿನ್ ಅತ್ಯುತ್ತಮ ಪ್ರದರ್ಶನ ನೀಡುವ ಆಸ್ತಿ ವರ್ಗವಾಗಿದೆ. ಇದನ್ನು ಈಗ ಒಂದು ನಿರ್ದಿಷ್ಟ ವರ್ಗದ ಹೂಡಿಕೆದಾರರು ಹಣದುಬ್ಬರ ಹೆಡ್ಜ್ ಆಗಿ ವ್ಯಾಪಕವಾಗಿ ನೋಡುತ್ತಿದ್ದಾರೆ. ಇದರ ಪರಿಣಾಮವಾಗಿ, ಬಹಳಷ್ಟು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಂಸ್ಥೆಗಳು ತಮ್ಮ ಹೂಡಿಕೆ ಬಂಡವಾಳವನ್ನು ವೈವಿಧ್ಯಗೊಳಿಸಲು ಕ್ರಿಪ್ಟೋ ಕರೆನ್ಸಿಗಳತ್ತ ಮುಖ ಮಾಡುತ್ತಿವೆ, ಇದರಿಂದಾಗಿ ಬಿಟ್‌ಕಾಯಿನ್‌ಗಳಲ್ಲಿ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗುತ್ತದೆ.

ಬಿಟ್‌ಕಾಯಿನ್ ಮೌಲ್ಯ ಏಕೆ ಅಸ್ಥಿರವಾಗಿದೆ?

ಇತರ ಯಾವುದೇ ಆಸ್ತಿಗೆ ಹೋಲಿಸಿದರೆ ಬಿಟ್‌ಕಾಯಿನ್ ಬಹಳ ಸೌಮ್ಯ ಸ್ವಭಾವದ ವ್ಯಾಪಾರ ಮಾರುಕಟ್ಟೆಯಾಗಿದೆ. ಇದು ಸದಾ ಚಂಚಲತೆಯಿಂದ ವಹಿವಾಟು ನಡೆಸುತ್ತದೆ. ಸ್ಮಾಲ್​ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸ್ಟಾಕ್‌ಗಳು ದೊಡ್ಡ ಕ್ಯಾಪ್ ಸ್ಟಾಕ್‌ಗಳಿಗಿಂತ ಹೆಚ್ಚು ಸೌಮ್ಯವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.