ನವದೆಹಲಿ: ಆಫ್ಘನ್ನಲ್ಲಿ ಸಿಲುಕಿರುವ ಭಾರತೀಯ ಅಲ್ಪಸಂಖ್ಯಾತರ ಸುರಕ್ಷತೆಗೆ ಸಂಬಂಧಿಸಿದಂತೆ ಕಾಬೂಲ್‌ನ ಗುರುದ್ವಾರ ಸಮಿತಿಯ ಅಧ್ಯಕ್ಷರೊಂದಿಗೆ ಸಂಪರ್ಕದಲ್ಲಿರುವುದಾಗಿ ಡಿಎಸ್‌ಜಿಎಂಸಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಘಜನಿ ಮತ್ತು ಜಲಾಲಾಬಾದ್‌ನಲ್ಲಿ ವಾಸಿಸುವ 320 ಕ್ಕೂ ಹೆಚ್ಚು ಅಲ್ಪಸಂಖ್ಯಾತರು (50 ಹಿಂದೂಗಳು ಮತ್ತು 270 ಕ್ಕೂ ಹೆಚ್ಚು ಸಿಖ್ಖರು ಸೇರಿದಂತೆ) ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ. ಕಾಬೂಲ್ ಮತ್ತು ಸಂಗತ್ನ ಗುರುದ್ವಾರ ಸಮಿತಿಯ ಅಧ್ಯಕ್ಷರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಗುರುದ್ವಾರ ಸಮಿತಿಯ ಅಧ್ಯಕ್ಷರನ್ನು ತಾಲಿಬಾನ್ ನಾಯಕರು ಭೇಟಿಯಾಗಿದ್ದು, ಭಾರತೀಯ ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಭರವಸೆ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ರಾಜಕೀಯ ಮತ್ತು ಸೇನಾ ಬದಲಾವಣೆಗಳು ನಡೆಯುತ್ತಿದ್ದರೂ ಹಿಂದೂಗಳು ಮತ್ತು ಸಿಖ್ಖರ ರಕ್ಷಣೆಯೇ ನಮ್ಮ ಉದ್ದೇಶ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇದೇನು ರೈಲೋ.. ವಿಮಾನವೋ: ಆಫ್ಘನ್ ಪ್ರಜೆಗಳ ಸಂಕಷ್ಟ ನೋಡಿ
ಇಂದು ಕಾಬೂಲ್ನಲ್ಲಿರುವ ಭಾರತೀಯ ರಾಯಭಾರಿ ಮತ್ತು ಸಿಬ್ಬಂದಿಯನ್ನು ವಾಯುಪಡೆಯ ಸಿ-17 ವಿಮಾನದಲ್ಲಿ ಗುಜರಾತ್ಗೆ ಕರೆತರಲಾಯಿತು. ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ, ರುದ್ರೇಂದ್ರ ಟಂಡನ್, ಗುಜರಾತ್ ನ ಜಾಮ್ ನಗರಕ್ಕೆ ಬಂದಿಳಿದಿದ್ದು, ಭಾರತೀಯ ವಾಯುಪಡೆಗೆ ಅವರು ಧನ್ಯವಾದ ತಿಳಿಸಿದರು.
ಆ. 15ರಂದು ರಾಜಧಾನಿ ಕಾಬೂಲ್ಗೆ ನುಗ್ಗಿದ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ತಮ್ಮ ಅಧಿಪತ್ಯ ಸಾಧಿಸಿದ್ದಾರೆ. ಆ. 14ರಂದು ಅಧ್ಯಕ್ಷ್ಯ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಕಂಗಾಲಾಗಿರುವ ಅಲ್ಲಿನ ಪ್ರಜೆಗಳು ದಿಕ್ಕು ತೋಚದಂತಾಗಿದ್ದು, ಬೇರೆ ಬೇರೆ ದೇಶಗಳತ್ತ ವಲಸೆ ಹೋಗುತ್ತಿದ್ದಾರೆ.