ETV Bharat / bharat

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು..! - ಸೌಹಾರ್ದತೆಯ ಸಂದೇಶ

ಹಿಂದೂ ವ್ಯಕ್ತಿಯ ಶವವನ್ನು ಹಿಂದೂ ಸಂಪ್ರದಾಯಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಮರು ಸೌಹಾರ್ದತೆಯ ಸಂದೇಶ ಸಾರಿದ ಘಟನೆ ಅಸ್ಸೋಂನಲ್ಲಿ ನಡೆದಿದೆ.

Tale of Humanity
ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು
author img

By

Published : Jul 15, 2023, 4:51 PM IST

ಗುವಾಹಟಿ: ಅಸಹಿಷ್ಣುತೆ ಮತ್ತು ಹಿಂಸಾತ್ಮಕ ಕೋಮುವಾದದ ವಾತಾವರಣವು ನಮ್ಮ ಸಮಾಜವನ್ನು ಕಲುಷಿತಗೊಳಿಸುತ್ತಿರುವ ಸಮಯದಲ್ಲಿ, ಗುವಾಹಟಿಯ ನುನ್ಮತಿ ನಿಜ್ರಾಪರ್ ಪ್ರದೇಶದಲ್ಲಿ ಮಾನವೀಯತೆ ಮತ್ತು ಸಾಮರಸ್ಯದ ವಿಶಿಷ್ಟ ಉದಾಹರಣೆ ಕಂಡುಬಂದಿದೆ.

ದೇಶದಲ್ಲಿ ಕೆಲವರು ಕೋಮುವಾದವನ್ನು ಪ್ರೋತ್ಸಾಹಿಸುತ್ತಿದ್ದರೆ, ಅಸ್ಸೋಂನ ಗುವಾಹಟಿ ನಗರದಲ್ಲಿ ಕೆಲವರು ಸೌಹಾರ್ದತೆಯತ್ತ ಹೆಜ್ಜೆ ಇಟ್ಟಿದ್ದಾರೆ. ಇದು ಗುವಾಹಟಿ ನಗರದ ನೂನ್ಮತಿ ನಿಜರಪರ್ ಪ್ರದೇಶದ ಕಥೆ. ಈ ಪ್ರದೇಶದ ಕೆಲವು ಮುಸ್ಲಿಮರು ಹಿಂದೂ ವ್ಯಕ್ತಿಯ ಶವವನ್ನು ಹಿಂದೂ ಸಂಪ್ರದಾಯಗಳೊಂದಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಇದು ಸಾಮರಸ್ಯದ ಅದ್ಭುತ ಉದಾಹರಣೆಯಾಗಿದೆ.

ಸೌಹಾರ್ದತೆಯ ಸಂದೇಶ ಸಾರಿದ ಮುಸ್ಲಿಂ ಸಮುದಾಯದವರು: ಗುವಾಹಟಿಯ ನಿಜರಪಾರ್ ನಿವಾಸಿ ಶಿವ ರತನ್ ಪಂಡಿತ್ (65) ಶುಕ್ರವಾರ ರಾತ್ರಿ ನಿಧನರಾದರು. ನಂತರ ಶವವನ್ನು ಗ್ರಾಮದ ಮುಸ್ಲಿಂ ಸಮುದಾಯದವರು ಮನೆಯಿಂದ ಸ್ಮಶಾನದ ಸ್ಥಳಕ್ಕೆ ಕೊಂಡೊಯ್ದರು. ನಗರದ ನವಗ್ರಹ ಚಿತಾಗಾರದಲ್ಲಿ ದಿವಂಗತ ಶಿವರತನ್ ಪಂಡಿತ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಮುಸ್ಲಿಮರು ದಿವಂಗತ ಶಿವ ರತನ್ ಪಂಡಿತ್ ಅವರ ಪಾರ್ಥಿವ ಶರೀರವನ್ನು ಹೊತ್ತೊಯ್ದದ್ದು ಮಾತ್ರವಲ್ಲದೇ, ಅವರು ಸ್ಮಶಾನದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ವಿದಾಯ ಹೇಳಿದರು.

ಎರಡು ಸಮುದಾಯಗಳು ಸಮ್ಮುಖದಲ್ಲಿ ಶಿವ ರತನ್ ಪಂಡಿತ್ ಅಂತ್ಯಕ್ರಿಯೆ: ಸ್ಥಳೀಯರ ಪ್ರಕಾರ, ಶಿವ ರತನ್ ಪಂಡಿತ್ ಹಲವು ವರ್ಷಗಳಿಂದ ನಗರದ ನಿಜರಪಾರ್ ಪ್ರದೇಶದಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ದೀರ್ಘಕಾಲದ ಅನಾರೋಗ್ಯದ ನಂತರ ವ್ಯಕ್ತಿ ನಿನ್ನೆ ಇದ್ದಕ್ಕಿದ್ದಂತೆ ನಿಧನರಾದರು. ಹಿಂದೂ ಧರ್ಮದ ಸಂಸ್ಕಾರದ ನಿಯಮಗಳು ತಿಳಿದಿಲ್ಲದ ಕಾರಣ ನೆರೆಹೊರೆಯವರಾಗಿದ್ದ ಮುಸ್ಲಿಮರು ಸುಮ್ಮನಾಗಿದ್ದರು.

ಆದರೆ, ಮೃತದೇಹಕ್ಕೆ ರಾತ್ರಿ ಗ್ರಾಮದ ಮುಸ್ಲಿಂ ಸಮುದಾಯದವರು ರಕ್ಷಣೆ ಒದಗಿಸಿದ್ದರು. ಅವರು ತಮ್ಮ ಪ್ರದೇಶದಿಂದ ದೂರದಲ್ಲಿರುವ ಹಿಂದೂಗಳನ್ನು ಸಹ ಸಂಪರ್ಕಿಸಿದರು. ಬೆಳಗ್ಗೆ ಕೆಲವು ಹಿಂದೂಗಳು ಸ್ಥಳಕ್ಕೆ ಬಂದರು. ನಂತರ ಬೆಳಗ್ಗೆ ಆಗಮಿಸಿದ ಕೆಲ ಹಿಂದೂಗಳ ನೆರವಿನಿಂದ ಉಭಯ ಧರ್ಮದವರು ನವಗ್ರಹ ಚಿತಾಗಾರಕ್ಕೆ ಶವವನ್ನು ಕೊಂಡೊಯ್ದರು. ನಂತರ ಎರಡು ಸಮುದಾಯಗಳು ಸಮ್ಮುಖದಲ್ಲಿ ಶಿವ ರತನ್ ಪಂಡಿತ್ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದರು.

ಸಾಮರಸ್ಯದ ಸಂದೇಶ ಸಾರಿದ ನಟಿ ಸಾರಾ: ಬಾಲಿವುಡ್ ನಟ ಸೈಫ್​ ಅಲಿ ಖಾನ್​​ ಪುತ್ರಿ, ನಟಿ ಸಾರಾ ಅಲಿ ಖಾನ್ ಅವರು ಆಗಾಗ್ಗೆ ಟೆಂಪಲ್​ ರನ್ ಮಾಡುವುದು ​ಹೊಸ ವಿಚಾರವೇನಲ್ಲ. ಪಟೌಡಿ ವಂಶದ ಕುಡಿ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದರು. ಇತ್ತೀಚೆಗೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. 'ಭಸ್ಮ ಆರತಿ'ಯಲ್ಲಿ ಪಾಲ್ಗೊಂಡು ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಕೆ ಮಾಡಿದ್ದರು. ಭಸ್ಮ ಆರತಿ ಇಲ್ಲಿನ ತುಂಬಾ ಪ್ರಸಿದ್ಧ ಆಚರಣೆಯಾಗಿದೆ. ಇದನ್ನು ಬೆಳಗ್ಗೆ 4ರಿಂದ 5.30ರವರೆಗೆ ನಡೆಸಲಾಗುತ್ತದೆ. ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್​​ ಅಭಿನಯದ 'ಜರಾ ಹಟ್ಕೆ ಜರಾ ಬಚ್ಕೆ' (Zara Hatke Zara Bachke) ಸಿನಿಮಾ ಬಿಡುಗಡೆಗೂ ಮುನ್ನ ಮಹಾಕಾಳೇಶ್ವರನ ಆಶೀರ್ವಾದ ಪಡೆದಿದ್ದರು.

ಇದನ್ನೂ ಓದಿ: ಯುಎಇಯಲ್ಲಿ ಮೋದಿಗೆ ಆತ್ಮೀಯ ಸ್ವಾಗತ.. ಬುರ್ಜ್ ಖಲೀಫಾದಲ್ಲಿ ಕಂಗೊಳಿಸಿದ ತ್ರಿವರ್ಣ ಧ್ವಜ, ಮೋದಿ ಭಾವಚಿತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.