ETV Bharat / bharat

ಆಹಾರಪ್ರಿಯರ ಮೊದಲ ಆದ್ಯತೆ ಯಾವ ತಿನಿಸಿಗೆ? ಸ್ವಿಗ್ಗಿ ವರದಿ ಬಹಿರಂಗ!

ಈ ಸಾಲಿನ ಜನವರಿಯಿಂದ ನವೆಂಬರ್​ 15ರ ವರೆಗೆ ಸ್ವೀಕರಿಸಿದ ಆರ್ಡರ್​ಗಳ ಆಧಾರದ ಮೇರೆಗೆ ಸ್ವಿಗ್ಗಿ ವರದಿಯೊಂದನ್ನು ಅನಾವರಣಗೊಳಿಸಿದೆ.

Swiggy released a report on food consumption trends
ಆಹಾರಪ್ರಿಯರ ಮೊದಲ ಆದ್ಯತೆ ಯಾವ ತಿನಿಸಿಗೆ? ಸ್ವಿಗ್ಗಿ ವರದಿ ಹೀಗಿದೆ!
author img

By ETV Bharat Karnataka Team

Published : Dec 21, 2023, 11:15 AM IST

Updated : Dec 21, 2023, 12:10 PM IST

ಹೈದರಾಬಾದ್: ಡಿನ್ನರ್​​ಗೆ ಬಿರಿಯಾನಿಯನ್ನು ಹೆಚ್ಚಾಗಿ ಇಷ್ಟಪಡುವ ನಗರವಾಸಿಗಳು 'ಬನ್ ಮಸ್ಕಾ'ದ ರುಚಿಯನ್ನು ಸ್ನ್ಯಾಕ್ ಆಗಿ ಸವಿಯಲು ಬಯಸುತ್ತಿದ್ದಾರೆ. ಈ ಸಾಲಿನ ಜನವರಿಯಿಂದ ನವೆಂಬರ್​ 15ರ ವರೆಗೆ ಸ್ವೀಕರಿಸಿದ ಆರ್ಡರ್​ಗಳ ಆಧಾರದ ಮೇರೆಗೆ ಆಹಾರ ಸೇವನೆಯ ಟ್ರೆಂಡ್​​​ ವರದಿಯನ್ನು ಸ್ವಿಗ್ಗಿ ಮಂಗಳವಾರದಂದು ಬಿಡುಗಡೆ ಮಾಡಿದೆ.

  • ಈ ವರ್ಷ ಓರ್ವ ವ್ಯಕ್ತಿಯ ಅತ್ಯಧಿಕ ಆರ್ಡರ್ - 1,633 ಬಿರಿಯಾನಿಗಳು.
  • ಓರ್ವ ವ್ಯಕ್ತಿಯ ಸಿಂಗಲ್​ ಆರ್ಡರ್ ಬಿಲ್​ - 37,008 ರೂ.
  • ಅವರು ಹೆಚ್ಚಾಗಿ ಚಿಕನ್ ಬಿರಿಯಾನಿ, ಮಸಾಲ ದೋಸೆ, ಬಟರ್ ನಾನ್, ಚಿಕನ್ 65 ಮತ್ತು ಇಡ್ಲಿಯನ್ನು ಸವಿದಿದ್ದಾರೆ.
  • ಓರ್ವ ವ್ಯಕ್ತಿ ಒಂದು ವರ್ಷದಲ್ಲಿ 6 ಲಕ್ಷ ರೂ. ಮೌಲ್ಯದ ಇಡ್ಲಿಗಳನ್ನು ಆರ್ಡರ್ ಮಾಡಿದ್ದಾರೆ.
  • ಆಹಾರ ಪ್ರೇಮಿಯೊಬ್ಬರು ಡೈನ್ಔಟ್ ಬಳಸಿ 1.78 ಲಕ್ಷ ರೂ. ಬಿಲ್ ಪಾವತಿಸಿದ್ದಾರೆ (ಇದು ಬಿಲ್‌ಗಳ ಮೇಲಿನ ರಿಯಾಯಿತಿಗೆ ಪೂರಕವಾಗಿದೆ).
  • ಶೇ. 88.23 ರಷ್ಟು ಜನರು ಡಿಜಿಟಲ್ ವೇದಿಕೆ ಮೂಲಕ ಬಿಲ್ ಪಾವತಿಸುತ್ತಿದ್ದಾರೆ.
  • ಜನರು ಹೆಚ್ಚಾಗಿ ಚಿಕನ್ ಪಾಪ್‌ಕಾರ್ನ್, ಹಾಟ್ ಚಿಕನ್ ವಿಂಗ್ಸ್, ವೆಜ್ ಪಫ್, ಸಮೋಸಾ, ಬನ್​ ಮಸ್ಕಾ, ಸಿಹಿತಿಂಡಿಗಳಾದ ಡಬಲ್ ಕಾ ಮೀಠಾ, ಏಪ್ರಿಕಾಟ್ ಡಿಲೈಟ್, ಗುಲಾಬ್ ಜಾಮೂನ್, ಚಾಕೊ ಲಾವಾ ಕೇಕ್ ಮತ್ತು ಡಬಲ್ ಡಾರ್ಕ್ ಚಂಕ್ ಚಾಕೊಲೇಟ್ ಕುಕೀ ಸೇರಿದಂತೆ ಹಲವು ತಿಂಡಿಗಳನ್ನು ಆರ್ಡರ್ ಮಾಡುತ್ತಿದ್ದಾರೆ.

ಸ್ವಿಗ್ಗಿ ಆಗಾಗ್ಗೆ ತನ್ನ ವ್ಯವಹಾರದ ಕುರಿತು ವರದಿಗಳನ್ನು ಬಿಡುಗಡೆ ಮಾಡುತ್ತದೆ. ಇತ್ತೀಚೆಗೆ 'How India Swiggy' ಎಂಬ ವಿಭಿನ್ನ ಶೀರ್ಷಿಕೆ ಮೂಲಕ ವರದಿಯೊಂದನ್ನು ಅನಾವರಣಗೊಳಿಸಿತ್ತು. ಈ ವರದಿಯಲ್ಲಿ, ಆಹಾರ ಪ್ರಿಯರು ಯಾವ ತಿನಿಸುಗಳನ್ನು ಹೆಚ್ಚಾಗಿ ಆರ್ಡರ್​ ಮಾಡುತ್ತಾರೆ?, ಅವರ ಮೊದಲ ಆದ್ಯತೆ ಯಾವ ಖಾದ್ಯಕ್ಕೆ?, ಯಾವ ಆಹಾರ ಅತಿ ಹೆಚ್ಚು ಆರ್ಡರ್ ಆಗಿದೆ? ಸೇರಿದಂತೆ ಹಲವು ಕುತೂಹಲ ಅಂಶಗಳನ್ನು ಈ ವರದಿ ಒಳಗೊಂಡಿತ್ತು.

ಇದನ್ನೂ ಓದಿ: ಡಂಕಿ ತೆರೆಗೆ: ಸಿನಿಪ್ರಿಯರು ಹೀಗಂದ್ರು! ಹೀಗಿದೆ ಸೋಷಿಯಲ್​ ಮೀಡಿಯಾದ ಚಿತ್ರ ವಿಮರ್ಶೆ !

2023ರಲ್ಲಿ ಮುಂಬೈನ ಓರ್ವ ಆಹಾರಪ್ರಿಯ ಸ್ವಿಗ್ಗಿಯಲ್ಲಿ 42.3 ಲಕ್ಷ ರೂಪಾಯಿ ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದ್ದಾರೆ. ದೆಹಲಿ, ಹೈದರಾಬಾದ್​, ಚೆನ್ನೈನ ಕೆಲ ಗ್ರಾಹಕರು 10,000ಕ್ಕೂ ಹೆಚ್ಚು ಬಾರಿ ಆರ್ಡರ್ ಮಾಡಿದ್ದಾರೆ. ಬಿರಿಯಾನಿ ನಂಬರ್​ ಒನ್​​ ಆಹಾರ ಎಂಬುದನ್ನು ಗ್ರಾಹಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ವರ್ಷ ಪ್ರತೀ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಗ್ರಾಹಕರು ಆರ್ಡರ್ ಮಾಡಿದ್ದಾರೆ. ಹೈದರಾಬಾದ್​ನ ವ್ಯಕ್ತಿಯೋರ್ವರು 1,633 ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಹೀಗೆ ಸ್ವಿಗ್ಗಿಯಲ್ಲಿ ಹೆಚ್ಚಿನ ಗ್ರಾಹಕರು ತಮಗಿಷ್ಟದ ಆಹಾರಗಳನ್ನು ತರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸೀರೆಯಲ್ಲಿ ಸರಳ ಸುಂದರಿ ರಶ್ಮಿಕಾ ಮಂದಣ್ಣ ಮಿಂಚಿಂಗ್​!

Last Updated : Dec 21, 2023, 12:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.