ETV Bharat / bharat

ಸ್ವಿಗ್ಗಿ- 2023: ಈ ವರ್ಷವೂ ಬಿರಿಯಾನಿಯೇ ಟಾಪ್ ಟ್ರೆಂಡಿಂಗ್: ಕೇಕ್ ಕ್ಯಾಪಿಟಲ್ ಬೆಂಗಳೂರು! - Swiggy 2023

ಸ್ವಿಗ್ಗಿಯಲ್ಲಿ ಈ ವರ್ಷ ಭಾರತೀಯರು ಅತಿ ಹೆಚ್ಚಾಗಿ ಆರ್ಡರ್ ಮಾಡಿದ ಖಾದ್ಯ ಪದಾರ್ಥಗಳಾವುವು ಸೇರಿದಂತೆ ಇನ್ನೂ ಹಲವಾರು ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದೆ.

Mumbai user placed food orders worth Rs 42.3L on Swiggy this year

author img

By ETV Bharat Karnataka Team

Published : Dec 15, 2023, 12:40 PM IST

ನವದೆಹಲಿ: 2023ನೇ ವರ್ಷ ಕೊನೆಗೊಳ್ಳುತ್ತಿದ್ದಂತೆಯೇ ಸ್ವಿಗ್ಗಿ ತನ್ನ ಗ್ರಾಹಕರು ಯಾವೆಲ್ಲ ರೀತಿ ಆಹಾರ ಆರ್ಡರ್ ಮಾಡಿದ್ದಾರೆ. ಯಾವ ಆಹಾರ ಅತಿ ಹೆಚ್ಚು ಆರ್ಡರ್ ಆಗಿದೆ ಸೇರಿದಂತೆ ಹಲವಾರು ಕುತೂಹಲಕಾರಿ ಮಾಹಿತಿಗಳನ್ನು ಬಿಡುಗಡೆ ಮಾಡಿದೆ. ಸ್ವಿಗ್ಗಿಯಲ್ಲಿ ಭಾರತೀಯರು ಹೇಗೆಲ್ಲ ಆರ್ಡರ್ ಮಾಡಿದ್ದಾರೆ ('How India Swiggy'd) ಶೀರ್ಷೀಕೆಯಡಿ ಸ್ವಿಗ್ಗಿ 2023ರ ಆರ್ಡರ್ ಟ್ರೆಂಡ್ ಬಗ್ಗೆ ಮಾಹಿತಿ ನೀಡಿದೆ. ಮುಂಬೈನ ಒಬ್ಬ ಗ್ರಾಹಕ 2023ರಲ್ಲಿ ಸ್ವಿಗ್ಗಿಯಲ್ಲಿ 42.3 ಲಕ್ಷ ರೂಪಾಯಿ ಮೌಲ್ಯದ ಆಹಾರ ಆರ್ಡರ್ ಮಾಡಿದ್ದು, ದಾಖಲೆಯಾಗಿದೆ.

ಚೆನ್ನೈ, ದೆಹಲಿ ಮತ್ತು ಹೈದರಾಬಾದ್​ ನಗರಗಳಲ್ಲಿನ ಕೆಲ ಗ್ರಾಹಕರು ಈ ವರ್ಷದಲ್ಲಿ ತಲಾ 10 ಸಾವಿರಕ್ಕೂ ಅಧಿಕ ಬಾರಿ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. ಸತತ ಎಂಟನೇ ವರ್ಷದಲ್ಲಿ ಬಿರಿಯಾನಿ ಈ ಬಾರಿಯೂ ಟಾಪ್ ಸ್ಥಾನದಲ್ಲಿದೆ. 2023 ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಪ್ರತಿ 5.5 ಚಿಕನ್ ಬಿರಿಯಾನಿಗಳಿಗೆ ಒಂದು ಸಸ್ಯಾಹಾರಿ ಬಿರಿಯಾನಿ (ವೆಜ್ ಬಿರಿಯಾನಿ)ಯನ್ನು ಆರ್ಡರ್ ಮಾಡಲಾಗಿದೆ.

1633 ಬಿರಿಯಾನಿ ಆರ್ಡರ್​!!: ಸ್ವಿಗ್ಗಿ ಪ್ಲಾಟ್​ಫಾರ್ಮ್​ನಲ್ಲಿ ಬಿರಿಯಾನಿಯನ್ನು 40,30,827 ಬಾರಿ ಸರ್ಚ್ ಮಾಡಲಾಗಿದೆ. ಆರರಲ್ಲಿ ಒಂದು ಬಿರಿಯಾನಿಯ ಆರ್ಡರ್​ ಹೈದರಾಬಾದಿನಿಂದ ಬಂದಿದೆ. ಹೈದರಾಬಾದಿನ ಗ್ರಾಹಕನೊಬ್ಬ ಈ ವರ್ಷ 1633 ಬಿರಿಯಾನಿ ಆರ್ಡರ್ ಮಾಡಿರುವುದು ವಿಶೇಷವಾಗಿದೆ. ಅಂದರೆ ಸರಾಸರಿ ದಿನಕ್ಕೆ ಆತ ನಾಲ್ಕು ಬಿರಿಯಾನಿ ತರಿಸಿಕೊಂಡಿದ್ದಾನೆ.

ದುರ್ಗಾ ಪೂಜೆಯ ಸಮಯದಲ್ಲಿ ಗುಲಾಬ್ ಜಾಮೂನ್​ಗಾಗಿ 7.7 ಮಿಲಿಯನ್ ಆರ್ಡರ್ ಬಂದಿವೆ. ಗರ್ಬಾದ ಜೊತೆಗೆ, ನವರಾತ್ರಿಯ ಎಲ್ಲ ಒಂಬತ್ತು ದಿನಗಳಲ್ಲಿ ಸಸ್ಯಾಹಾರಿ ಆರ್ಡರ್ ಗಳ ಪೈಕಿ ಮಸಾಲಾ ದೋಸೆ ಮುಂಚೂಣಿಯಲ್ಲಿತ್ತು. ಇನ್ನು ಹೈದರಾಬಾದಿನ ಗ್ರಾಹಕರೊಬ್ಬರು ಈ ವರ್ಷ ಇಡ್ಲಿಗಾಗಿ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

8.5 ಮಿಲಿಯನ್​ ಕೇಕ್​ ಆರ್ಡರ್​: ಎಲ್ಲರ ನೆಚ್ಚಿನ ಚಾಕೊಲೇಟ್ ಕೇಕ್ ಗಾಗಿ 8.5 ಮಿಲಿಯನ್ ಆರ್ಡರ್ ಮಾಡಲಾಗಿದ್ದು, ಬೆಂಗಳೂರು 'ಕೇಕ್ ಕ್ಯಾಪಿಟಲ್' ಗೌರವಕ್ಕೆ ಪಾತ್ರವಾಗಿದೆ. 2023ರ ಪ್ರೇಮಿಗಳ ದಿನದಂದು ಭಾರತದಲ್ಲಿ ಪ್ರತಿ ನಿಮಿಷಕ್ಕೆ 271 ಕೇಕ್ ಆರ್ಡರ್ ಮಾಡಲಾಗಿದೆ.

ಇನ್ನು ಸ್ವಿಗ್ಗಿ ಇನ್ ಸ್ಟಾಮಾರ್ಟ್ ನಲ್ಲಿ ಜೈಪುರದ ಬಳಕೆದಾರರೊಬ್ಬರು ಒಂದೇ ದಿನದಲ್ಲಿ 67 ಆರ್ಡರ್​ಗಳನ್ನು ಬುಕ್ ಮಾಡಿದ್ದಾರೆ. ಹಾಗೆಯೇ ಏಕೈಕ ಗರಿಷ್ಠ ಆರ್ಡರ್ ಮೌಲ್ಯ 31,748 ರೂ. ಆಗಿತ್ತು. ಚೆನ್ನೈನ ಈ ಗ್ರಾಹಕ ಇಷ್ಟು ದೊಡ್ಡ ಮೊತ್ತದ ಕಾಫಿ, ಜ್ಯೂಸ್, ಕುಕೀಸ್, ನ್ಯಾಚೋಸ್ ಮತ್ತು ಚಿಪ್ಸ್​ಗಳನ್ನು ತರಿಸಿಕೊಂಡಿದ್ದಾರೆ.

ಈ ವರ್ಷ, ಸ್ವಿಗ್ಗಿಯ ಡೆಲಿವರಿ ಹುಡುಗರು ಎಲೆಕ್ಟ್ರಿಕ್ ವಾಹನಗಳು ಮತ್ತು ಸೈಕಲ್​ಗಳ ಮೇಲೆ 166.42 ಮಿಲಿಯನ್ ಕಿಲೋಮೀಟರ್ ದೂರ ಕ್ರಮಿಸಿದ್ದಾರೆ. ಚೆನ್ನೈನ ಡೆಲಿವರಿ ಪಾರ್ಟ್​ನರ್ ವೆಂಕಟಸೇನ್ ಮತ್ತು ಕೊಚ್ಚಿಯ ಶಾಂತಿನಿ ತಲಾ 10,360 ಮತ್ತು 6,253 ಆರ್ಡರ್ ಗಳನ್ನು ಡೆಲಿವರಿ ಮಾಡಿದ್ದಾರೆ. ಹಾಗೆಯೇ ಡೆಲಿವರಿ ಪಾರ್ಟನರ್ ಒಬ್ಬ ಫಾಸ್ಟ್ ಫುಡ್ ತಲುಪಿಸಲು 45.5 ಕಿ.ಮೀ ಪ್ರಯಾಣಿಸಿದ್ದಾರೆ.

ಇದನ್ನೂ ಓದಿ : ನಿಮ್ಮ ಮೌನ ಆಲೋಚನೆಗಳನ್ನು ಓದಿ ಹೇಳುತ್ತೆ ಈ ಹೊಸ ಎಐ ತಂತ್ರಜ್ಞಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.