ಕಣ್ಣೂರು(ಕೇರಳ): ಸಕ್ಕರೆಗಿಂತ ಸುಮಾರು 30 ಪಟ್ಟು ಹೆಚ್ಚು ಸಿಹಿ ಇರುವ ಎಲೆಯನ್ನು ತುಳಸಿ ಗಿಡವೊಂದು ಕೇರಳದಲ್ಲಿ ಇತ್ತೀಚೆಗೆ ಸುದ್ದಿಯಲ್ಲಿದೆ. ಕಣ್ಣೂರು ಮೂಲದ ರೈತರೊಬ್ಬರು ಸಿಹಿ ಎಲೆಯ ತುಳಸಿ ಗಿಡವನ್ನು ಬೆಳೆಯುತ್ತಿದ್ದು, ಕೇರಳ ಹಲವೆಡೆಯಿಂದ ಮಾತ್ರವಲ್ಲದೇ, ಹೊರ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ.
ಸಕ್ಕರೆ ಅಂಶ ಹೆಚ್ಚಾಗಿದ್ದರೂ, ಸಕ್ಕರೆ ಕಾಯಿಲೆ ರೋಗಿಗಳು ಈ ಎಲೆಯನ್ನು ಬಳಸಬಹುದಾಗಿರುವ ಕಾರಣದಿಂದ ಈ ಸಸಿಗೆ ಹೆಚ್ಚು ಬೇಡಿಕೆ ಇದೆ. ಕಣ್ಣೂರಿನ ಪೆರಿಯಾರಂ ಮೂಲದವರಾದ ಕೆ.ವಿ.ಷಾಜಿ ಈ ತುಳಸಿಯನ್ನು ಬೆಳೆಯುತ್ತಿದ್ದಾರೆ. ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸುವುದು ಮಾತ್ರವಲ್ಲದೇ, ರಕ್ತದೊತ್ತಡವನ್ನು ಕಡಿಮೆ ಮಾಡವ ಗುಣವನ್ನು ಹೊಂದಿದೆ.
ತಿರುವನಂತಪುರಂನಿಂದ ಈ ತುಳಸಿ ಗಿಡಗಳನ್ನು ತಂದ ಷಾಜಿ ತಮ್ಮೂರಾದ ಪೆರಿಯಾರಂನಲ್ಲಿ ಬೆಳೆಯುತ್ತಿದ್ದಾರೆ. ಸಸಿಗಳು ಮೂರು ತಿಂಗಳಲ್ಲಿ ಹೂ ಬಿಡುತ್ತವೆ. ನಂತರ ಸಸಿಗಳ ರೆಂಬೆಗಳನ್ನು ಕತ್ತರಿಸಲಾಗುತ್ತದೆ. ನಂತರ ಅವುಗಳನ್ನು ಒಣಗಿಸಿ, ಪುಡಿ ಮಾಡಲಾಗುತ್ತದೆ. ಆ ಪುಡಿಯನ್ನು 5ರಿಂದ 7 ನಿಮಿಷ ಕುದಿಸಿ, ಸೇವನೆ ಮಾಡಬಹುದಾಗಿದೆ.
ಮೂರು ಸಸಿಗಳನ್ನು ಸುಮಾರು 250 ರೂಪಾಯಿಗೆ ಮಾರುವ ಷಾಜಿ, ಒಂದು ಸಸಿ ಐದು ವರ್ಷಗಳ ಕಾಲ ಆದಾಯ ತಂದು ಕೊಡುತ್ತದೆ. ಆನ್ಲೈನ್ ಮೂಲಕವೂ ಸಸಿಗಳ ಮಾರಾಟಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: Watch... ಎತ್ತಿನಗಾಡಿನಲ್ಲಿ ಸಿಜೆಐ ಎನ್ವಿ ರಮಣ: ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ