ETV Bharat / bharat

ವಿಮಾನದಲ್ಲಿ ಮಹಿಳೆಯರೊಂದಿಗೆ ಅನುಚಿತ ವರ್ತನೆ.. ಡಿಜಿಸಿಎಗೆ ಸ್ವಾತಿ ಮಲಿವಾಲ್ ನೋಟಿಸ್ - ಲೈಂಗಿಕ ಕಿರುಕುಳ ಪ್ರಕರಣಗಳ ತಡೆಗಟ್ಟುವಿಕೆ

ಕಳೆದ ಹಲವು ತಿಂಗಳುಗಳಲ್ಲಿ ಮಾನವೀಯ ಮೌಲ್ಯಗಳಿಗೆ ವಿರುದ್ಧವಾದ ಸುಮಾರು ಎರಡು ಮೂರು ಘಟನೆಗಳು ವಿಮಾನದಲ್ಲಿ ಕಂಡುಬಂದಿವೆ. ಪುರುಷ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸುವುದು ಅಥವಾ ಅವರನ್ನು ಅಹಿತಕರವಾಗಿ ನಡೆಸಿಕೊಳ್ಳುವುದು ಕಂಡುಬಂದಿದೆ. ಇದೀಗ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ಕುರಿತು ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದ್ದಾರೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್

author img

By

Published : Mar 15, 2023, 4:21 PM IST

Updated : Mar 15, 2023, 5:33 PM IST

ನವದೆಹಲಿ : ಕಳೆದ ಹಲವು ತಿಂಗಳ ಹಿಂದೆ ವಿಮಾನ ಪ್ರಯಾಣದ ವೇಳೆ ಮಹಿಳಾ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಎರಡು ಘಟನೆಗಳು ಮುನ್ನೆಲೆಗೆ ಬಂದಿದ್ದವು. ಇವು ಸುಸಂಸ್ಕೃತ ಸಮಾಜಕ್ಕೆ ಕಳಂಕ ತರುವುದು ಖಂಡಿತ. ನವೆಂಬರ್ ತಿಂಗಳಲ್ಲಿ ನ್ಯೂಯಾರ್ಕ್‌ನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ 70 ವರ್ಷದ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ನಂತರದ ತಿಂಗಳಲ್ಲೇ ಅಂದರೆ ಡಿಸೆಂಬರ್‌ನಲ್ಲಿ ಪ್ಯಾರಿಸ್‌ನಿಂದ ನವದೆಹಲಿಗೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಯುವಕನೊಬ್ಬ ಸಹ-ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಇದೀಗ ಈ ಘಟನೆಗಳಿಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದ್ದಾರೆ.

ಡಿಜಿಸಿಎಗೆ ಸ್ವಾತಿ ಮಲಿವಾಲ್ ನೋಟಿಸ್
ಡಿಜಿಸಿಎಗೆ ಸ್ವಾತಿ ಮಲಿವಾಲ್ ನೋಟಿಸ್

ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಲಹೆ ನೀಡಿದ್ದಾರೆ. ಪ್ರಯಾಣದ ಸಮಯದಲ್ಲಿ ಅಥವಾ ವಿಮಾನ ಹತ್ತುವ ಮೊದಲು ಪ್ರಯಾಣಿಕರಿಗೆ ನಿಗದಿತ ಮಿತಿಗಿಂತ ಹೆಚ್ಚಿನ ಮದ್ಯವನ್ನು ನೀಡದಿರುವುದು ಅಥವಾ ಮದ್ಯ ಸೇವಿಸಿದ ವ್ಯಕ್ತಿಗೆ ಪ್ರಯಾಣಿಸಲು ಅವಕಾಶ ನೀಡುವುದನ್ನು ನಿಲ್ಲಿಸಿದಾಗ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂದು ಅವರು ಹೇಳಿದ್ದಾರೆ.

ಅಂತಹವರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ಪ್ರೋಟೋಕಾಲ್ ಅನ್ನು ಅನುಸರಿಸದ ಏರ್‌ಲೈನ್ಸ್ ಕಂಪನಿಗಳನ್ನು ಸಹ ಕನಿಷ್ಠ 6 ತಿಂಗಳಿಂದ 2 ವರ್ಷಗಳವರೆಗೆ ನೋ ಫ್ಲೈ ವಲಯದಲ್ಲಿ ಸೇರಿಸಬೇಕು. ಇದರೊಂದಿಗೆ, ಅಂತಹ ಪ್ರಕರಣಗಳಿಗೆ ನಿವೃತ್ತ ಮಹಿಳಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಬೇಕು. ಅದು ನಿಗದಿತ ಸಮಯದೊಳಗೆ ತನ್ನ ವರದಿಯನ್ನು ಸಲ್ಲಿಸಬಹುದು. ಡಿಜಿಸಿಎ ಮಾರ್ಗಸೂಚಿಯಂತೆ ಇಂತಹ ಪ್ರಕರಣಗಳನ್ನು ಆಕ್ರಮಣಕಾರಿ ವರ್ತನೆ ಎಂದು ಪರಿಗಣಿಸಲಾಗಿದ್ದು, ಆಯೋಗಕ್ಕೆ ಯಾವುದೇ ರೀತಿಯಲ್ಲೂ ಒಪ್ಪಿಗೆಯಾಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಕಾಶಿ ವಿಶ್ವನಾಥ ದೇಗುಲದ ಸ್ಪರ್ಶ ದರ್ಶನ ಬಗ್ಗೆ ಸುಳ್ಳು ಸುದ್ದಿ ಹರಡಿದ 9 ಜನರ ವಿರುದ್ಧ ಎಫ್​ಐಆರ್​

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಮತ್ತು ವಿಮಾನಗಳಲ್ಲಿ ಅಶಿಸ್ತಿನ ವರ್ತನೆಯ ಪ್ರಕರಣಗಳು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಸ್ವಾತಿ ಮಲಿವಾಲ್ ಹೇಳುತ್ತಾರೆ. ಲೈಂಗಿಕ ಕಿರುಕುಳ ಪ್ರಕರಣಗಳ ತಡೆಗಟ್ಟುವಿಕೆ ಮತ್ತು ಪರಿಹಾರದ ವಿಷಯದ ಕುರಿತು DGCA ಯ ಪ್ರಸ್ತುತ ಮಾರ್ಗಸೂಚಿಗಳು ಮತ್ತು ಸಲಹೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದರಿಂದಾಗಿ ಅಂತಹ ಘಟನೆಗಳಿಗೆ ಯಾವುದೇ ಕಡಿವಾಣ ಹಾಕಲಾಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ನವ ವಿವಾಹಿತೆ ಆತ್ಮಹತ್ಯೆ ಪ್ರಕರಣ​.. ಪತಿ ಸೇರಿ ಸೇರಿ ಏಳು ಮಂದಿ ವಿರುದ್ಧ ದೂರು ದಾಖಲು

ವಾಸ್ತವವಾಗಿ, DGCA ಮಾರ್ಗಸೂಚಿಗಳು ಲೈಂಗಿಕ ಕಿರುಕುಳವನ್ನು ನಿಯಂತ್ರಿಸಲಾಗದ ನಡವಳಿಕೆ ಎಂದು ಪರಿಗಣಿಸುತ್ತದೆ. ಇಂತಹ ವಿಷಯಗಳನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ. ನಾವು ಡಿಜಿಸಿಎಗೆ ವಿವರವಾದ ಶಿಫಾರಸನ್ನು ಕಳುಹಿಸಿದ್ದೇವೆ ಮತ್ತು 30 ದಿನಗಳಲ್ಲಿ ಎಟಿಆರ್ ಅನ್ನು ಕೋರಿದ್ದೇವೆ. ಈ ಅಪರಾಧವನ್ನು ನಿಭಾಯಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಪರೀಕ್ಷೆ ಒತ್ತಡ: 12ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

Last Updated : Mar 15, 2023, 5:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.