ETV Bharat / bharat

ಕೋಲ್ಕತ್ತಾದಲ್ಲಿ ನಕಲಿ ವ್ಯಾಕ್ಸಿನೇಷನ್ ಆರೋಪ: ಶೀಘ್ರ ತನಿಖೆಗೆ ಸುವೇಂದು ಅಧಿಕಾರಿ ಆಗ್ರಹ

ಕೋಲ್ಕತ್ತಾ ಮಹಾನಗರ ಪಾಲಿಕೆ ಜಂಟಿ ಆಯುಕ್ತರು ಅಕ್ರಮ ವ್ಯಾಕ್ಸಿನೇಷನ್ ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

Suvendu adhikari
ಸುವೇಂದು ಅಧಿಕಾರಿ
author img

By

Published : Jun 26, 2021, 1:39 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದಲ್ಲಿ ನಕಲಿ ವ್ಯಾಕ್ಸಿನೇಷನ್ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಸುವೇಂದು ಅಧಿಕಾರಿ, ಶೀಘ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದಾರೆ.

ಕೋಲ್ಕತ್ತಾ ಮಹಾನಗರ ಪಾಲಿಕೆ (ಕೆಎಂಸಿ)ಯ ಜಂಟಿ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಐಎಎಸ್ ಅಧಿಕಾರಿ ದೇಬಂಜನ್ ದೇಬ್ ಅವರು ಕೆಎಂಸಿ ಬ್ಯಾನರ್ ಅಡಿಯಲ್ಲಿ ಕಾಸ್ಬಾದ ವಾರ್ಡ್ ಸಂಖ್ಯೆ 107 ರಲ್ಲಿ ಅಕ್ರಮ ವ್ಯಾಕ್ಸಿನೇಷನ್ ಶಿಬಿರಗಳನ್ನು ನಡೆಸುತ್ತಿದ್ದಾರೆ. ಮತದಾರರ ಸ್ಲಿಪ್‌ಗಳಂತೆ, ಲಸಿಕೆಯ ಕೂಪನ್‌ಗಳನ್ನು ಆಡಳಿತ ಪಕ್ಷ ನೀಡುತ್ತಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರ ಸಹಾಯವಿಲ್ಲದೇ ಇದು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಸುವೇಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋವಿಶೀಲ್ಡ್ ಖಾಲಿ ಬಾಟಲಿಯಲ್ಲಿ ನಕಲಿ ಲಸಿಕೆ ತುಂಬಿ ವ್ಯಾಕ್ಸಿನೇಷನ್: ವೈದ್ಯ ದಂಪತಿಯ ಬಂಧನ

ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶದಂತಹ ರಾಜ್ಯಗಳು ಪ್ರತಿದಿನ ವ್ಯಾಕ್ಸಿನೇಷನ್​ನಲ್ಲಿ ದಾಖಲೆ ಬರೆಯುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಬೇಜವಾಬ್ದಾರಿಯಿಂದಾಗಿ ಹಿಂದುಳಿದಿದೆ ಎಂದು ಬಿಜೆಪಿ ಶಾಸಕ ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.