ETV Bharat / bharat

ನದಿಗೆ ಬಿದ್ದ ಎಸ್​ಯುವಿ ಕಾರು: ಒಂದೇ ಕುಟುಂಬದ ನಾಲ್ವರು ಸಾವು

ಗುರುವಾರ ನಸುಕಿನಲ್ಲಿ ದಕ್ಷಿಣ ಗೋವಾ ಜಿಲ್ಲೆಯಲ್ಲಿ ಸೇತುವೆಯಿಂದ ಕಾರು ಜುವಾರಿ ನದಿಗೆ ಬಿದ್ದಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.

ನದಿಗೆ ಬಿದ್ದ ಎಸ್​ಯುವಿ ಕಾರು
ನದಿಗೆ ಬಿದ್ದ ಎಸ್​ಯುವಿ ಕಾರು
author img

By

Published : Jul 28, 2022, 9:12 PM IST

ಗೋವಾ: ದಕ್ಷಿಣ ಗೋವಾ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರನ್ನು ಹೊತ್ತೊಯ್ಯುತ್ತಿದ್ದ, ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಸೇತುವೆಯಿಂದ ಜುವಾರಿ ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ನಸುಕಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ವಾಹನದಲ್ಲಿದ್ದವರನ್ನು ಗೋವಾ ಪೊಲೀಸ್ ಸಿಬ್ಬಂದಿ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ. ರಾಜ್ಯ ರಾಜಧಾನಿ ಪಣಜಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕೊರ್ಟಾಲಿಮ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜುವಾರಿ ನದಿ ಸೇತುವೆಯ ಮೇಲೆ ಮತ್ತೊಂದು ಕಾರನ್ನು ಹಿಂದಿಕ್ಕಲು ಮುಂದಾದಗ ಈ ಅವಘಡ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ 10 ಕಾಮುಕರಿಂದ ಅತ್ಯಾಚಾರ.. ಆರೋಪಿಗಳ ಬಂಧಿಸಿದ ಪೊಲೀಸರು

ಪ್ರತ್ಯಕ್ಷದರ್ಶಿಗಳ ಪ್ರಕಾರ, ವಾಹನದಲ್ಲಿ ಕನಿಷ್ಠ ನಾಲ್ಕು ಜನರಿದ್ದರು ಮತ್ತು ಅದನ್ನು ಮಹಿಳೆ ಓಡಿಸುತ್ತಿದ್ದರು ಎಂದು ಅಧಿಕಾರಿ ಹೇಳಿದರು. ಕೋಸ್ಟ್ ಗಾರ್ಡ್ ನೌಕೆ, ನಾಡದೋಣಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಗೋವಾ ಪೊಲೀಸರು ವಾಹನವನ್ನು ಪತ್ತೆಹಚ್ಚಲು ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.