ರಾಣಿವಾಡ (ರಾಜಸ್ಥಾನ): ಬಿಸಿಲಿನ ತಾಪ ಹೆಚ್ಚಾಗಿ, ಬಾಯಾರಿಕೆಯಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿಗೆ ಕುಡಿಯಲು ನೀರು ಸಿಗದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತಹಸಿಲ್ನ ರೋಡಾ ಗ್ರಾಮದಲ್ಲಿ ನಡೆದಿದೆ.
ಜತೆಯಲ್ಲಿದ್ದ ವೃದ್ಧೆ ಕೂಡ ಮೂರ್ಛೆ ಹೋಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ರಾಣಿವಾಡ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
-
9 घंटे तक पीने का पानी न मिलने के कारण हुई एक बच्ची की मृत्यु, बेहद शर्मनाक घटना है। इसके लिए राजस्थान सरकार ज़िम्मेदार है। सोनिया, राहुल, प्रियंका अब चुप क्यों हैं ?https://t.co/xl1pWyr8s5
— Prakash Javadekar (@PrakashJavdekar) June 8, 2021 " class="align-text-top noRightClick twitterSection" data="
">9 घंटे तक पीने का पानी न मिलने के कारण हुई एक बच्ची की मृत्यु, बेहद शर्मनाक घटना है। इसके लिए राजस्थान सरकार ज़िम्मेदार है। सोनिया, राहुल, प्रियंका अब चुप क्यों हैं ?https://t.co/xl1pWyr8s5
— Prakash Javadekar (@PrakashJavdekar) June 8, 20219 घंटे तक पीने का पानी न मिलने के कारण हुई एक बच्ची की मृत्यु, बेहद शर्मनाक घटना है। इसके लिए राजस्थान सरकार ज़िम्मेदार है। सोनिया, राहुल, प्रियंका अब चुप क्यों हैं ?https://t.co/xl1pWyr8s5
— Prakash Javadekar (@PrakashJavdekar) June 8, 2021
ರಾಯ್ಪುರದಿಂದ ತನ್ನ ಅಜ್ಜಿಯೊಂದಿಗೆ ಐದು ವರ್ಷದ ಬಾಲಕಿ ನಡೆದುಕೊಂಡು ರೋಡಾ ಗ್ರಾಮದತ್ತ ಬರುತ್ತಿದ್ದರು. ಈ ವೇಳೆ ಉರಿಬಿಸಿಲು ತಾಳದೆ ಬಾಲಕಿ ಬಳಲಿದ್ದಾಳೆ. ಆ ವೇಳೆ ನೀರು ಸಿಗದೆ ಸ್ವಲ್ಪ ದೂರ ಕ್ರಮಿಸಿ ಪ್ರಾಣಬಿಟ್ಟಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:ಓಡುವ ರೈಲು ಏರಲು ಯತ್ನಿಸಿ ಕೆಳಗೆಬಿದ್ದ ಪ್ರಯಾಣಿಕ.. ದೇವರಂತೆ ಬಂದು ಕಾಪಾಡಿದ ಜವಾನ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸರ್ಪಂಚ್ ಕೃಷ್ಣರಾಜ್ ಪುರೋಹಿತ್, ವೈದ್ಯರನ್ನು ಕರೆಸಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಪ್ರಕಾಶ್ ಜಾವಡೇಕರ್ ಕೆಂಡಾಮಂಡಲ : ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಇದೊಂದು ಅವಮಾನಕರ ಘಟನೆ ಎಂದಿದ್ದಾರೆ. ಅಲ್ಲದೆ ಗೆಹ್ಲೋಟ್ ಸರ್ಕಾರ ಮತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.