ETV Bharat / bharat

ಇಂದಿನಿಂದ ಅಧಿವೇಶನ ಆರಂಭ.. ಈ ವಿಚಾರಗಳ ಬಗ್ಗೆ ದನಿ ಎತ್ತಲಿರುವ ವಿಪಕ್ಷಗಳು! - ಸಿಪಿಐನ ರಾಜ್ಯಸಭಾ ಸಂಸದ ಬಿನೊಯ್ ವಿಶ್ವಮ್

ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ರಾಜ್ಯಸಭಾ ಮತ್ತು ಲೋಕಸಭೆಯಲ್ಲಿ ವಿಪಕ್ಷಗಳು ಬೆಲೆ ಏರಿಕೆ, ಹಣದುಬ್ಬರ ಸೇರಿ ಹಲವು ವಿಚಾರಗಳ ಬಗ್ಗೆ ದನಿ ಎತ್ತಲಿವೆ.

ಇಂದಿನಿಂದ ಅಧಿವೇಶನ ಆರಂಭ
ಇಂದಿನಿಂದ ಅಧಿವೇಶನ ಆರಂಭ
author img

By

Published : Jul 19, 2021, 10:44 AM IST

ನವದೆಹಲಿ: ಇಂದಿನಿಂದ ಮುಂಗಾರು​ ಅಧಿವೇಶ ಆರಂಭವಾಗಲಿದ್ದು, ಕೋವಿಡ್​ ನಿರ್ವಹಣೆ ಮತ್ತು ಫೋನ್​ ಟ್ಯಾಪಿಂಗ್​ ವಿಚಾರವಾಗಿ ರಾಜ್ಯಸಭಾ ವಿಪಕ್ಷ ಸಂಸದರು ಸಸ್ಪೆನ್ಷನ್​​ ನೋಟಿಸ್ ನೀಡಿದ್ದಾರೆ.

ಸಿಪಿಐನ ರಾಜ್ಯಸಭಾ ಸಂಸದ ಬಿನೊಯ್ ವಿಶ್ವಮ್ ಪೆಗಾಸಸ್ ಸ್ಪೈವೇರ್​​ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಫೋನ್ ಟ್ಯಾಪಿಂಗ್ ವಿಷಯದ ಬಗ್ಗೆ ನಿಯಮ 267 ರ ಅಡಿ ವ್ಯವಹಾರ ನೋಟಿಸ್ ಅನ್ನು ನೀಡಿದ್ದಾರೆ.

ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಮನೋಜ್ ಝಾ ಜುಲೈ 16 ರಂದು ನಿಯಮ 267 ರಡಿ ಬ್ಯುಸಿನೆಸ್ ನೋಟಿಸ್ ಅನ್ನು ನೀಡಿದ್ದರು.

ಸಂಸತ್ತಿನ ಉಭಯ ಸದನಗಳಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯ ವಿಚಾರವಾಗಿ ಕಾಂಗ್ರೆಸ್ ಧ್ವನಿ ಎತ್ತಲಿದೆ. ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ಹಣದುಬ್ಬರ ಕುರಿತು ಲೋಕಸಭೆಯಲ್ಲಿ ಮುಂದೂಡಿಕೆ ನೋಟಿಸ್ ನೀಡಿದ್ದಾರೆ. ಕೋವಿಡ್ ನಿಯಮ ಅನುಸರಿಸಿ ಸೋಮವಾರ ಬೆಳಗ್ಗೆ 11 ಗಂಟೆಗೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಪ್ರಾರಂಭವಾಗಲಿದೆ.

ಇದನ್ನೂ ಓದಿ:ಸಂಸತ್‌ ಅಧಿವೇಶನ: 15 ಮಸೂದೆಗಳಿಗೆ ಅಂಗೀಕಾರ ಪಡೆಯಲು ಕೇಂದ್ರದ ಚಿಂತನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.