ಚಿತ್ತೋರ್‌ಗಢ(ರಾಜಸ್ಥಾನ): ಸ್ಫೋಟಕಗಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಬಂಧಿತರಿಂದ ಆರ್‌ಡಿಎಕ್ಸ್, ಸ್ಫೋಟಕ ವಸ್ತು ಮತ್ತು ಟೈಮರ್ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳು ಮಧ್ಯಪ್ರದೇಶದ ಮಂದಸೌರ್, ರತ್ಲಾಮ್‌ನವರು ಎಂದು ಹೇಳಲಾಗುತ್ತಿದ್ದು, ವಿಚಾರಣೆ ಮುಂದುವರೆದಿದೆ.
ನಿಂಬಹೇರಾ ಪೊಲೀಸರು ಮಾದಕ ವಸ್ತು ಸಾಗಾಟದ ಶಂಕೆಯಿಂದ ಮಧ್ಯಪ್ರದೇಶ ನಂಬರಿನ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಸ್ಫೋಟಕಗಳನ್ನು ಹೊಂದಿದ್ದ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಕಾರನ್ನು ಪರಿಶೀಲಿಸಿದಾಗ ಟೈಮರ್ ಸೇರಿದಂತೆ ಬಾಂಬ್ ತಯಾರಿಕೆ ಸಾಮಗ್ರಿ ಮತ್ತು ಆರ್‌ಡಿಎಕ್ಸ್ ಸಿಕ್ಕಿದೆ. ಆರೋಪಿಗಳು ಕಾರಿನಲ್ಲಿ ಚಿತ್ತೋಡಗಢ ಕಡೆಗೆ ಬರುತ್ತಿದ್ದರು. ಈ ಬಗ್ಗೆ ನಿಂಬಹೇರಾ ಪೊಲೀಸರು ತಕ್ಷಣ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆ ಮುಂದುವರಿಕೆ: ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಉದಯ್‌ಪುರ ಮತ್ತು ಜೈಪುರ್ ಎಟಿಎಸ್ ತಂಡವೂ ನಿಂಬಹೇರಾಗೆ ಆಗಮಿಸಿದೆ. ಸ್ಫೋಟಕ ವಸ್ತುಗಳ ಐಡಿ ಮತ್ತು ಟೈಮರ್ ವಶಪಡಿಸಿಕೊಂಡ ನಂತರ ಆರೋಪಿಗಳಿಗೆ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಇದನ್ನೂ ಓದಿ: ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣ; ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ವಶಕ್ಕೆ ಪಡೆದ ಪೊಲೀಸರು