ಗುವಾಹಟಿ (ಅಸ್ಸೋಂ): ಅಕ್ರಮ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಸ್ವಂತ ತಮ್ಮನ ಖಾಸಗಿ ಅಂಗಗಳನ್ನು ಕತ್ತರಿಸಿ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಬಜಾಲಿ ಜಿಲ್ಲೆಯ ಕಟ್ಲಾ ಪಥರ್ ಎಂಬಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಧನಂಜಿತ್ ರಾಯ್ (24) ಕೊಲೆಯಾದವನು. ಪ್ರಾಂಜಲ್ ರಾಯ್ ತಮ್ಮನನ್ನು ಕೊಂದ ಆರೋಪಿಯಾಗಿದ್ದಾನೆ.
ಬುಧವಾರ ರಾತ್ರಿ ಸಹೋದರರಿಬ್ಬರ ನಡುವೆ ಅಕ್ರಮ ಸಂಬಂಧದ ಕುರಿತು ಜಗಳ ನಡೆದಿದೆ. ಜಗಳ ತಾರಕಕ್ಕೇರಿ ಅಣ್ಣ ತನ್ನ ಸ್ವಂತ ತಮ್ಮನ ಗುಪ್ತಾಂಗವನ್ನು ಬ್ಲೇಡ್ನಿಂದ ಕತ್ತರಿಸಿದ್ದಾನೆ. ತನ್ನ ಹೆಂಡತಿ ಜೊತೆ ತಮ್ಮ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಘಟನೆಯ ನಂತರ ಆರೋಪಿ ಪ್ರಾಂಜಲ್ ರಾಯ್ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾತ್ರವಲ್ಲದೇ ಆರೋಪಿ ಪ್ರಾಂಜಲ್ ರಾಯ್ ಪತ್ನಿ ಕೂಡ ನಿಗೂಢವಾಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಪತಿ ಹಾಗೂ ಪತ್ನಿ ಸೇರಿ ಈ ಕೊಲೆ ಮಾಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಜಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮಲಗುವ ಜಾಗದ ವಿಚಾರಕ್ಕೆ ವ್ಯಕ್ತಿಯ ಹತ್ಯೆ; ಇಬ್ಬರ ಬಂಧನ
ಊಟದಲ್ಲಿ ವಿಷ ಬೆರೆಸಿ ಪತ್ನಿಯ ಕೊದ ಪತಿ(ಚಿಕ್ಕಮಗಳೂರು): ಪತಿಯೇ ಪತ್ನಿಗೆ ಊಟದಲ್ಲಿ ಸೈನೆಡ್ ಬೆರೆಸಿ ನೀಡಿ, ಕೊಲೆ ಮಾಡಿದ್ದ ಘಟನೆ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿತ್ತು. ಕೆಲ ದಿನಗಳ ಹಿಂದೆ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆಗೆ ಚನ್ನೋಜಿ ರಾವ್ ಎಂಬುವವರು ಗೃಹಿಣಿ ಶ್ವೇತಾ ಅವರ ಸಾವು, ಕೊಲೆ ಎಂದು ಅವರ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಗೋಣಿಬೀಡು ಇನ್ಸ್ಪೆಕ್ಟರ್ ಸೋಮೇಗೌಡ, ಶ್ವೇತಾ ಅವರ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ಮಾಡಿಸಿ, ತನಿಖೆ ಕೈಗೊಂಡಿದ್ದರು. ಪೊಲೀಸರು ಅನುಮಾನಗೊಂಡು, ಪತಿಯನ್ನು ವಿಚಾರಣೆಗೊಳಪಡಿಸಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. ವಿಚಾರಣೆ ವೇಳೆ ಪತಿ, ತಾನೇ ಹೆಂಡತಿಗೆ ಊಟದಲ್ಲಿ ಸೈನೆಡ್ ಬೆರೆಸಿ ನೀಡಿರುವುದಾಗಿ ಒಪ್ಪಿಕೊಂಡಿದ್ದನು. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ಪತಿ ದರ್ಶನ್ ಹಾಗೂ ಶ್ವೇತಾ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ದರ್ಶನ್ ವರು ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಇಬ್ಬರು ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಜಗಳ ಅತಿಯಾಗಿ ಪತಿ ಪತ್ನಿಯನ್ನು ಊಟದಲ್ಲಿ ಸೈನೆಡ್ ಬೆರೆಸಿ ಕೊಲೆ ಮಾಡಿದ್ದನು.