ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಮೂರು ಸ್ಥಳಗಳಲ್ಲಿ ಶಂಕಿತ ಪಾಕಿಸ್ತಾನದ ಡ್ರೋನ್‌ಗಳು ಹಾರಾಟ ನಡೆಸುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ 8.30 ರ ಸುಮಾರಿಗೆ ಬ್ಯಾರಿ - ಬ್ರಾಹ್ಮಣ, ಚಿಲಾಡ್ಯದ ಮತ್ತು ಗಾಗ್ವಾಲ್ ಪ್ರದೇಶಗಳಲ್ಲಿ ಏಕಕಾಲಕ್ಕೆ ಡ್ರೋನ್ಗಳ ಹಾರಾಟ ನಡೆದಿದೆ.
ಗಡಿ ಭದ್ರತಾ ಪಡೆ ಸಿಬ್ಬಂದಿ (ಬಿಎಸ್ಎಫ್) ಚಿಲಾಡ್ಯದ ಡ್ರೋನ್ ಹೊಡೆದುರುಳಿಸಲು ಒಂದೆರಡು ಸುತ್ತಿನ ಗುಂಡು ಹಾರಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಬ್ಯಾರಿ-ಬ್ರಾಹ್ಮಣ, ಗಗ್ವಾಲ್‌ನ ಜಮ್ಮು-ಪಠಾಣ್‌ಕೋಟ್ ಹೆದ್ದಾರಿಯಲ್ಲಿ ಸೈನ್ಯ ಸುಳಿದ ನಂತರ ಡ್ರೋನ್‌ಗಳು ಕಣ್ಮರೆಯಾದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿವೆ.
ಇದನ್ನೂ ಓದಿ: ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಶಿಲ್ಪಾ ಶೆಟ್ಟಿ
ಕಳೆದ ಒಂದು ವಾರದ ಹಿಂದೆ ಕನಚಕ್ನ ಗಡಿಯಲ್ಲಿ ಸ್ಫೋಟಕ ವಸ್ತು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು.