ETV Bharat / bharat

ಶೋಪಿಯಾನ್​ದಲ್ಲಿ ಶಂಕಿತ ಉಗ್ರನ ಹತ್ಯೆ ಮಾಡಿದ ಭದ್ರತಾ ಪಡೆ - terrorists in jammu kashmir

ಜಮ್ಮು- ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರನನ್ನು ಶೋಪಿಯಾನ್ ಜಿಲ್ಲೆಯಲ್ಲಿ ಕೊಂದಿವೆ.

Suspected militant killed in encounter in J&K's Shopian
ಶೋಪಿಯಾನ್​​​ನಲ್ಲಿ ಓರ್ವ ಶಂಕಿತ ಉಗ್ರನ ಹತ್ಯೆ ಮಾಡಿದ ಭದ್ರತಾ ಪಡೆ
author img

By

Published : Oct 1, 2021, 7:47 AM IST

ಶ್ರೀನಗರ, ಜಮ್ಮು ಕಾಶ್ಮೀರ: ಶೋಪಿಯಾನ್ ಜಿಲ್ಲೆಯ ರಖಮಾ ಪ್ರದೇಶದಲ್ಲಿ ನಡೆದ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಎನ್​ಕೌಂಟರ್​ನಲ್ಲಿ ಓರ್ವ ಶಂಕಿತ ಉಗ್ರನನ್ನು ಹತ್ಯೆ ಮಾಡಲಾಗಿದೆ.

ಭಯೋತ್ಪಾದಕರ ಇರುವಿಕೆ ಬಗ್ಗೆ ನಿಖರ ಮಾಹಿತಿ ಪಡೆದ ಭದ್ರತಾ ಪಡೆಯ 34 ಆರ್‌ಆರ್‌ಸಿಆರ್‌ಪಿಯ 34ನೇ ಬೆಟಾಲಿಯನ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ರಖಾಮಾ ಕಪ್ರಾನ್ ಪ್ರದೇಶವನ್ನು ಸುತ್ತುವರೆದು ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರನನ್ನು ಹತ್ಯೆ ಮಾಡಲಾಗಿದೆ.

ಮೊದಲು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತ್ಯುತ್ತರವಾಗಿ ಭದ್ರತಾ ಪಡೆಗಳೂ ಗುಂಡು ಹಾರಿಸಿವೆ. ಈ ವೇಳೆ, ಓರ್ವನ ಹತ್ಯೆ ಮಾಡಲಾಗಿದೆ. ಈಗಲೂ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಮುಸ್ಲಿಂ ಯುವಕನಿಗೆ ಹಿಂದೂ ಮಹಿಳೆಯ ಹೃದಯ ಕಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.