ETV Bharat / bharat

ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ಜಾನುವಾರು ಕಳ್ಳಸಾಗಣೆದಾರರ ಮೇಲೆ ಬಿಎಸ್‌ಎಫ್ ದಾಳಿ: ಓರ್ವ ಹತ - ಶಂಕಿತ ಜಾನುವಾರು ಕಳ್ಳಸಾಗಣೆದಾರನನ್ನು ಹೊಡೆದುರುಳಿಸಿದ ಬಿಎಸ್‌ಎಫ್

ಭದ್ರತಾ ಸಿಬ್ಬಂದಿಯಿಂದ INSAS ರೈಫಲ್‌ಗಳನ್ನು ಕಸಿದುಕೊಳ್ಳಲು ಯತ್ನಿಸಿದ 15 - 20 ಶಂಕಿತ ಜಾನುವಾರು ಕಳ್ಳಸಾಗಣೆದಾರರ ಗುಂಪಿನ ಮೇಲೆ ಬಿಎಸ್‌ಎಫ್ ಗುಂಡು ಹಾರಿಸಿದೆ.

http://10.10.50.90:6060///finaloutc/english-nle/finalout/20-May-2021/11832650_dwsbdw.jpg

author img

By

Published : Dec 23, 2021, 3:32 PM IST

ಗುವಾಹಟಿ: ಇಂದು ಮುಂಜಾನೆ ಪಶ್ಚಿಮ ಬಂಗಾಳದ ಕೂಚ್‌ಬೆಹಾರ್ ಜಿಲ್ಲೆಯ ಭಾರತ - ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ಜಾನುವಾರು ಕಳ್ಳಸಾಗಣೆದಾರನನ್ನು ಬಿಎಸ್‌ಎಫ್ ಹೊಡೆದುರುಳಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿಯಿಂದ INSAS ರೈಫಲ್‌ಗಳನ್ನು ಕಸಿದುಕೊಳ್ಳಲು ಯತ್ನಿಸಿದ ಹಿನ್ನೆಲೆ 15 - 20 ಶಂಕಿತ ಜಾನುವಾರು ಕಳ್ಳಸಾಗಣೆದಾರರ ಗುಂಪಿನ ಮೇಲೆ ಬಿಸ್​ಎಫ್​ ಗುಂಡು ಹಾರಿಸಿದೆ ಎಂದು ತಿಳಿಸಿದ್ದಾರೆ.

ಈ ಗುಂಡಿನ ದಾಳಿಯಲ್ಲಿ ಗಿಟಾಲ್ದಾಹಾ ಬ್ಲಾಕ್ 2 ರ ನಿವಾಸಿ ಲುತ್ಪರ್ ರಹಮಾನ್ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಅಲ್ಲಿ ನಿಧನ ಆಗಿದ್ದಾನೆ. ರೆಹಮಾನ್ ಈ ಪ್ರದೇಶದ ಜಾನುವಾರು ಕುಖ್ಯಾತ ಕಳ್ಳಸಾಗಣೆದಾರರಾಗಿದ್ದ ಎಂದು ಕೂಚ್‌ಬೆಹಾರ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘರ್ಷಣೆಯಲ್ಲಿ ಓರ್ವ ಬಿಎಸ್‌ಎಫ್‌ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಕಳ್ಳಸಾಗಾಣಿಕೆದಾರರನ್ನು ತಡೆಯಲು ಬಿಎಸ್ಎಫ್ ಪಂಪ್ - ಆ್ಯಕ್ಷನ್ ಗನ್ ಅನ್ನು ಬಳಸಿತು. ಆದರೆ, ಗಲಾಟೆ ಹೆಚ್ಚಾದಾಗ ಕಳ್ಳರು ಸಿಬ್ಬಂದಿಯಿಂದ INSAS ರೈಫಲ್‌ಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ನಂತರ ಪಡೆಗಳು ಆತ್ಮರಕ್ಷಣೆಗಾಗಿ ಆರು ಸುತ್ತು ಗುಂಡು ಹಾರಿಸಿದವು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶೆಲ್ ಆಕಸ್ಮಿಕ ಸ್ಫೋಟ : ಓರ್ವ ಬಿಎಸ್ಎಫ್ ಯೋಧ ಹುತಾತ್ಮ, 8 ಮಂದಿಗೆ ಗಾಯ

ಇದೇ ರೀತಿ ಬುಧವಾರ ರಾಜ್ಯದ ಮಾಲ್ಡಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಯತ್ನವನ್ನು ತಡೆಯಲು ಬಿಎಸ್ಎಫ್ ಸಿಬ್ಬಂದಿ ಗುಂಡು ಹಾರಿಸಿದಾಗ ಬಾಂಗ್ಲಾದೇಶದ ಪ್ರಜೆಯೊಬ್ಬರು ಸಾವಿಗೀಡಾಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.