ETV Bharat / bharat

ತಿಹಾರ್ ಜೈಲು ಸಿಬ್ಬಂದಿಯೊಂದಿಗೆ ಫಿಟ್ನೆಸ್ ಮಂತ್ರ ಜಪಿಸುತ್ತಿರುವ ಸುಶೀಲ್ ಕುಮಾರ್ - ಸುಶೀಲ್ ಕುಮಾರ್

ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ತಿಹಾರ್ ಜೈಲಿನಲ್ಲಿರುವ ಒಲಿಂಪಿಕ್ಸ್​​ ಪದಕ ವಿಜೇತ ಸುಶೀಲ್ ಕುಮಾರ್ ಕಾರಾಗೃಹದ ಸಿಬ್ಬಂದಿಯೊಂದಿಗೆ ಫಿಟ್ನೆಸ್ ಮಂತ್ರಗಳನ್ನ ಹಂಚಿಕೊಳ್ಳುತ್ತಿದ್ದಾರೆ.

ಒಲಿಂಪಿಕ್ಸ್​​ ಪದಕ ವಿಜೇತ ಸುಶೀಲ್ ಕುಮಾರ್
ಒಲಿಂಪಿಕ್ಸ್​​ ಪದಕ ವಿಜೇತ ಸುಶೀಲ್ ಕುಮಾರ್
author img

By

Published : Aug 7, 2021, 6:34 PM IST

ನವದೆಹಲಿ: ಕುಸ್ತಿಪಟು ಸಾಗರ್ ಧಂಕರ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿರುವ ಒಲಿಂಪಿಕ್ಸ್​​ ಪದಕ ವಿಜೇತ ಸುಶೀಲ್ ಕುಮಾರ್ ಕಾರಾಗೃಹದ ಸಿಬ್ಬಂದಿಯೊಂದಿಗೆ ಫಿಟ್ನೆಸ್ ಮಂತ್ರಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಆರೋಗ್ಯಕರ ಫಿಟ್​ ದೇಹಕ್ಕಾಗಿ ತೆಗೆದುಕೊಳ್ಳಬೇಕಾದ ಆಹಾರದ ಬಗ್ಗೆಯೂ ಅವರು ಸಲಹೆ ನೀಡುತ್ತಿದ್ದಾರೆ.

ಇದಕ್ಕೂ ಮುನ್ನ ಸುಶೀಲ್ ಕುಮಾರ್ ತನಗಾಗಿ ಪ್ರೋಟೀನ್ ಭರಿತ ವಿಶೇಷ ಆಹಾರಕ್ಕಾಗಿ ಬೇಡಿಕೆ ಇಟ್ಟಿದ್ದರು, ಇದನ್ನು ಜೈಲಿನ ಆಡಳಿತ ತಿರಸ್ಕರಿಸಿತ್ತು. ನಂತರ ಅವರು ಒಲಿಂಪಿಕ್ಸ್ ನೋಡಲು ದೂರದರ್ಶನಕ್ಕೆ ಬೇಡಿಕೆ ಇಟ್ಟರು, ಇದನ್ನು ಆಡಳಿತವು ಅನುಮೋದಿಸಿತ್ತು. ಜೈಲಿನಿಂದಲೇ ರವಿ ದಹಿಯಾ ಫೈನಲ್ ಕುಸ್ತಿ ನೋಡಿ ಭಾವೋದ್ವೇಗಕ್ಕೊಳಗಾಗಿದ್ದರು.

ಇದನ್ನೂ ಓದಿ: ತಿಹಾರ್​ ಜೈಲಿನಿಂದಲೇ ರವಿ ದಹಿಯಾ ಕುಸ್ತಿ ನೋಡಿ 'ಭಾವೋದ್ವೇಗ'ಕ್ಕೊಳಗಾದ ಸುಶೀಲ್ ಕುಮಾರ್​!

ಮೇ 4ರಂದು ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಧಂಕರ್ ಹಲ್ಲೆಗೊಳಗಾಗಿ ಮೃತಪಟ್ಟಿದ್ದರು. ಸುಶೀಲ್ ಕುಮಾರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ತಿಹಾರ್​ ಜೈಲಿನಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.