ETV Bharat / bharat

ಮೃತಪಟ್ಟ 109 ವರ್ಷದ ವೃದ್ಧೆ ಮತ್ತೆ ಜೀವಂತ; ನೆಚ್ಚಿನ ಚಾಟ್‌ ತಿಂದು ಮಾತು ಶುರು ಮಾಡಿದ ಅಜ್ಜಿ

ಸತ್ತು ಹೋಗಿದ್ದಾಳೆ ಎಂದುಕೊಂಡ ವೃದ್ಧೆಯೊಬ್ಬರು ಮತ್ತೆ ಎದ್ದು ಕುಳಿತ ಘಟನೆ ಜರುಗಿದೆ.

Dead dadi comes back to life after 7 hours relishes her favourite chaat

author img

By

Published : Feb 2, 2023, 11:49 PM IST

ರೂರ್ಕಿ (ಉತ್ತರಾಖಂಡ): ಮೃತಪಟ್ಟಿದ್ದಾಳೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟ 109 ವರ್ಷದ ಮಹಿಳೆಯೊಬ್ಬರು ಮತ್ತೆ ಜೀವಂತವಾಗಿ ಎದ್ದು ಕುಳಿತ ಅಚ್ಚರಿಯ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ. ಸತ್ತ ವೃದ್ಧೆ ಎದ್ದು ಕುಳಿತಿರುವುದನ್ನು ನೋಡಿ ಅಂತ್ಯಸಂಸ್ಕಾರಕ್ಕೆ ಬಂದಿದ್ದವರೆಲ್ಲ ಒಂದು ಕ್ಷಣ ಶಾಕ್ ಆಗಿದ್ದಾರೆ. ರೂರ್ಕಿಯ ಮಂಗಲೋರ್ ಪ್ರದೇಶದ ನರ್ಸನ್ ಖುರ್ದ್ ಗ್ರಾಮದ ನಿವಾಸಿ ಜ್ಞಾನ್ ದೇವಿ (109) ಎಂಬುವರು ಕೆಲ ವಾರಗಳವರೆಗೆ ಅನಾರೋಗ್ಯಕ್ಕೀಡಾಗಿದ್ದು, ನಂತರ ಜನವರಿ 31 ರಂದು ಮೂರ್ಛೆ ಹೋಗಿ ಕುಸಿದು ಬಿದ್ದಿದ್ದರು. ಮೊಮ್ಮಗ ವಿನೋದ್ ಮತ್ತು ಅಳಿಯ ಮಾಂಗೇ ರಾಮ್ ಸೇರಿದಂತೆ ಕುಟುಂಬ ಸದಸ್ಯರು ವೈದ್ಯರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ವೈದ್ಯರು ವೃದ್ಧೆಯನ್ನು ಮೃತ ಎಂದು ಘೋಷಿಸಿದ್ದರು. ಇದರಿಂದ ದುಃಖತಪ್ತರಾದ ಸಂಬಂಧಿಕರು ಆಕೆಯ ಅಂತಿಮ ವಿಧಿವಿಧಾನಗಳಿಗೆ ಸಿದ್ಧತೆ ಆರಂಭಿಸಿದ್ದರು.

ವೃದ್ಧೆ ಮೃತಪಟ್ಟ ವಿಚಾರ ತಿಳಿದು ಗ್ರಾಮಸ್ಥರು ಮತ್ತು ದೂರದ ಸಂಬಂಧಿಕರು ಶವಸಂಸ್ಕಾರದಲ್ಲಿ ಭಾಗವಹಿಸಲು ನೆರೆದಿದ್ದರು. ಆದರೆ ಜ್ಞಾನ್ ದೇವಿ ಅವರ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ಕೆಲವೇ ನಿಮಿಷಗಳ ಮೊದಲು ಅವರ ಸಂಬಂಧಿಕರಲ್ಲಿ ಯಾರೋ ಆಕೆಯ ದೇಹ ಚಲಿಸುತ್ತಿರುವುದನ್ನು ಗಮನಿಸಿದರು. ಅಷ್ಟರಲ್ಲೇ ಕಣ್ಣು ತೆರೆದ ವೃದ್ಧೆ ಎಲ್ಲರನ್ನೂ ನೋಡಲಾರಂಭಿಸಿದರು. ಇದನ್ನು ಕಂಡ ಎಲ್ಲರೂ ಅವಾಕ್ಕಾದರು.

ಘಟನೆಯ ಬಗ್ಗೆ ಈಟಿವಿ ಭಾರತ್​ಗೆ ಮಾಹಿತಿ ನೀಡಿದ ಮೊಮ್ಮಗ ವಿನೋದ್, "ಬೆಳಗ್ಗೆ 8 ಗಂಟೆ ಸುಮಾರಿಗೆ ಆಕೆ ಮೂರ್ಛೆ ಹೋಗಿದ್ದಳು. ಹಾಗಾಗಿ ವೈದ್ಯರನ್ನು ಕರೆಸಿದ್ದೆವು. ಆದರೆ ಆಕೆ ತೀರಿಕೊಂಡಿದ್ದಾಳೆ ಎಂದು ವೈದ್ಯರು ಹೇಳಿದ್ದರು. ನಂತರ ಅಂತಿಮ ವಿಧಿವಿಧಾನಗಳಿಗೆ ಸಿದ್ಧತೆ ಆರಂಭಿಸಿದೆವು. ನಮ್ಮ ಸಂಬಂಧಿಕರು ಕೂಡ ಬಂದಿದ್ದರು ಮತ್ತು ಶವಸಂಸ್ಕಾರಕ್ಕೆ ಬೇಕಾದ ವಸ್ತುಗಳನ್ನು ವ್ಯವಸ್ಥೆ ಮಾಡಿದೆವು. ಆದರೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಆಕೆಗೆ ಇದ್ದಕ್ಕಿದ್ದಂತೆ ಪ್ರಜ್ಞೆ ಬಂದು ಕೈಕಾಲುಗಳನ್ನು ಕದಲಿಸಿದಳು. ಆಗ ಜನರು ಆಕೆಯನ್ನು ಏನಾದ್ರೂ ತಿನ್ನಬೇಕಾ ಎಂದು ಕೇಳತೊಡಗಿದರು. ಕೆಲವರು ರಸಗುಲ್ಲಾ ಬೇಕೆ ಎಂದು ಕೇಳಿದರು. ಅವಳು ಇಲ್ಲ ಎಂದಳು. ಆಗ ನನ್ನ ಸಹೋದರರೊಬ್ಬರು, ದಾದಿ, ನೀವು ಚಾಟ್ ತಿನ್ನಲು ಬಯಸುತ್ತೀರಾ? ಎಂದರು. ಅದಕ್ಕೆ ಅವಳು ಹೌದು ಎಂದು ಹೇಳಿದಳು. ನಂತರ ನಾವು ಚಾಟ್ ತಂದೆವು. ಅವಳು ಅದನ್ನು ತಿಂದು ಆನಂದಿಸಿದಳು ಮತ್ತು ಸಾಮಾನ್ಯವಾಗಿ ಮಾತನಾಡಲಾರಂಭಿಸಿದಳು. ಅವಳು ಸುಮಾರು 6 ರಿಂದ 7 ಗಂಟೆಗಳ ಕಾಲ ಮೃತಳಾಗಿದ್ದಳು" ಎಂದು ತಿಳಿಸಿದರು.

ವೃದ್ಧೆಯ ಅಳಿಯ ಮಂಗೇ ರಾಮ್ ಕೂಡ ಘಟನೆಯನ್ನು ದೃಢಪಡಿಸಿದ್ದಾರೆ ಮತ್ತು ಇದೊಂದು ಪವಾಡ ಎಂದು ಹೇಳಿದ್ದಾರೆ. ಅವಳು ಕಣ್ಣು ತೆರೆದಾಗ ನಮಗೆ ಸಂತೋಷವಾಯಿತು ಎಂದು ಅವರು ಹೇಳಿದರು.

ಬ್ರೈನ್ ಡೆಡ್ ಆಗಿದ್ದ ಮಹಿಳೆ ಮತ್ತೆ ಜೀವಂತ: ಮೃತಪಟ್ಟಿದ್ದಾರೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟ ಮಹಿಳೆಯೊಬ್ಬರು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಜೀವಂತವಾಗಿರುವ ಘಟನೆ ಕೆಲ ವಾರಗಳ ಹಿಂದೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ. ಮಿದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ 81 ವರ್ಷದ ಹರಿಭೇಜಿ ಎಂಬ ಮಹಿಳೆ ಬ್ರೈನ್ ಡೆಡ್ ಆಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಆಕೆಯ ಅಂತಿಮ ವಿಧಿವಿಧಾನಗಳಿಗಾಗಿ ಆಕೆಯ ಕುಟುಂಬಸ್ಥರು ಕರೆದುಕೊಂಡು ಹೋಗುತ್ತಿದ್ದಾಗ ಆಕೆ ಇದ್ದಕ್ಕಿದ್ದಂತೆ ಕಣ್ಣು ತೆರೆದು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾಳೆ. ಆಗ ಆಕೆಯನ್ನು ಮರಳಿ ಮನೆಗೆ ಕರೆತರಲಾಯಿತು. ಆದರೂ ಆಕೆ ಮರುದಿನ ಮೃತಪಟ್ಟಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.