ನವದೆಹಲಿ/ನೋಯ್ಡಾ: ನಿಠಾರಿ ಹತ್ಯೆ ಪ್ರಕರಣದಲ್ಲಿ ಸುರೇಂದ್ರ ಕೋಲಿ ಮತ್ತು ಮಣಿಂದರ್ ಸಿಂಗ್ ಪಂಧೇರ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ. ಬಾಲಕಿಯರ ಸರಣಿ ಹತ್ಯೆ ಪ್ರಕರಣದಲ್ಲಿ ಸುರೇಂದ್ರ ಕೋಲಿ ದೋಷಿ ಎಂದು ತೀರ್ಪು ನೀಡಲಾಗಿದ್ದು, ಮಣಿಂದರ್ ಸಿಂಗ್ ಪಂಧೇರ್ ಕಳ್ಳಸಾಗಣೆ ತಡೆ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಸಬ್ಇನ್ಸ್ಪೆಕ್ಟರ್ ಸಿಮ್ರಂಜಿತ್ ಕೌರ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಪ್ರಕರಣದಲ್ಲಿ ದೋಷಿಯಾದವರಿಗೆ ಶಿಕ್ಷೆಯ ಪ್ರಮಾಣವನ್ನು ಮೇ 19 ರಂದು ಪ್ರಕಟಿಸಲಾಗುವುದು. ಈ ಪ್ರಕರಣವನ್ನು ಗಾಜಿಯಾಬಾದ್‌ನ ವಿಶೇಷ ಸಿಬಿಐ ನ್ಯಾಯಾಲಯ ವಿಚಾರಣೆ ನಡೆಸಿದೆ.
ನಿಠಾರಿ ಸರಣಿ ಹತ್ಯೆ ಪ್ರಕರಣದ 12 ನೇ ಕೇಸ್ನಲ್ಲಿ ಗಾಜಿಯಾಬಾದ್ ಸಿಬಿಐ ನ್ಯಾಯಾಲಯವು ಅಪರಾಧಿ ಸುರೇಂದ್ರ ಕೋಲಿಗೆ ಮರಣದಂಡನೆ ವಿಧಿಸಿತ್ತು. ಸುರೇಂದ್ರ ಕೋಲಿ ಅವರು ನ್ಯಾಯಾಲಯದ ಇತಿಹಾಸದಲ್ಲಿ 12 ನೇ ಬಾರಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಮೊದಲ ವ್ಯಕ್ತಿಯಾಗಿದ್ದಾರೆ.
ಓದಿ: ಮೀನು ಮಾರಾಟಕ್ಕಾಗಿ ಪೈಪೋಟಿ: ಎರಡು ಗುಂಪುಗಳ ನಡುವೆ ಘರ್ಷಣೆ, ಪೆಟ್ರೋಲ್ ಬಾಂಬ್ ಎಸೆತ